»   » ನಟಿ ಪೂಜಾ ಗಾಂಧಿ ಕಿರಿಕಿರಿ ಪಿರಿಪಿರಿಗೆ ಜೈ ಹಿಂದ್

ನಟಿ ಪೂಜಾ ಗಾಂಧಿ ಕಿರಿಕಿರಿ ಪಿರಿಪಿರಿಗೆ ಜೈ ಹಿಂದ್

Posted By:
Subscribe to Filmibeat Kannada
ನಟಿ ಪೂಜಾಗಾಂಧಿ ವಿರುದ್ಧ ಸುಖಾ ಸುಮ್ಮನೆ ಕಂಪ್ಲೇಂಟ್ ಒಂದು ದಾಖಲಾಗಿದೆ. ತಮ್ಮ ಚಿತ್ರ 'ಜೈ ಹಿಂದ್' ಪ್ರಚಾರಕ್ಕೆ ಬರುತ್ತಿಲ್ಲ ಎಂದು ನಿರ್ಮಾಪಕ ಮೇಜರ್ ಶ್ರೀನಿವಾಸ ಪೂಜಾರ್ ಅವರು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರು ಪೂಜಾ ಗಾಂಧಿಗೆ ಫೋನು ಮಾಡಿ ಏನಮ್ಮಾ ನಿಮ್ಮ ಪ್ರಾಬ್ಲಂ ಎಂದು ವಿಚಾರಿಸಿದ್ದಾರೆ.

ಶಾಕ್ ಆದ ಪೂಜಾ ಗಾಂಧಿ ಹೇಳಿದ್ದೇನೆಂದರೆ, "ಶ್ರೀನಿವಾಸ್ ಅವರಿಗೆ ನಾನು ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದೆ. ದಂಡುಪಾಳ್ಯ ಚಿತ್ರದ ಪ್ರಚಾರ, ಯೂರೋಪ್, ದುಬೈ, ರಾಜಕೀಯ ಚಟುವಟಿಕೆಗಳು...ಹೀಗೆ ನಾನಾ ಕೆಲಸಗಳ ಕಾರಣ ಅವರಿಗೆ ಸ್ವಲ್ಪ ಸಮಯ ಕೇಳಿದ್ದೆ. ನನ್ನ ಡೇಟ್ಸ್ ನೋಡಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಎಂದು ಹೇಳಿದ್ದೆ. ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳುವಂತೆ ವಿನಂತಿಸಿಕೊಂಡಿದ್ದೆ".

ಆದರೆ ಈಗ ಏಕಾಏಕಿ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಶ್ರೀನಿವಾಸ್ ಅವರ ಬಗ್ಗೆ ಬಹಳ ಬೇಸರವಾಯಿತು ಎಂದು ತಮ್ಮ ಅಸಮಾಧಾನವನ್ನು 'ಜೈ ಹಿಂದ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತೋಡಿಕೊಂಡರು. ಕನ್ನಡ ಚಿತ್ರರಂಗದಲ್ಲಿ ನನ್ನ ಬಗ್ಗೆ ಇದುವರೆಗೂ ಈ ರೀತಿಯ ದೂರು ಕೇಳಿಬಂದಿಲ್ಲ.

ನಾನು ಮಾಡಿದ ಎಲ್ಲಾ ಚಿತ್ರಗಳ ಪ್ರಚಾರಕ್ಕೆ ಹೋಗಿದ್ದೇನೆ. ಇದು ನನ್ನ ಚಿತ್ರ. ಮುಂದೆಯೂ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತೇನೆ. ಆದರೆ ಸುಮ್ಮನೆ ಹೀಗೆ ನನ್ನ ವಿರುದ್ಧ ದೂರು ಕೊಟ್ಟಿದ್ದು ಸರಿಯಲ್ಲ ಎಂದು ಅವರು ತಮ್ಮ ಬೇಸರ ಹೊರಹಾಕಿದರು.

ಇದೆಲ್ಲಾ ಆಗಿದ್ದು ಒಂದು ಸಣ್ಣ ತಪ್ಪಿನಿಂದ. ನಾನು ಒಂದು ಎಸ್ಎಂಎಸ್ ಕಳುಹಿಸಿದೆ. ಅದಕ್ಕೆ ಪೂಜಾ ಕಡೆಯಿಂದ ಉತ್ತರ ಬರಲಿಲ್ಲ. ಕರೆ ಮಾಡಿದಾಗ ಅವರು ಕೇರಳದಲ್ಲಿದ್ದಾರೆ ಎಂಬ ಉತ್ತರ ಸಿಕ್ಕಿತು. ನಾನು ತಪ್ಪಾಗಿ ಅರ್ಥ ಮಾಡಿಕೊಂಡು ಪ್ರಚಾರಕ್ಕೆ ಅವರು ಕೈಕೊಡುತ್ತಿದ್ದಾರೆ. ನಟಿ ಪೂಜಾಗಾಂಧಿ ನಾಟ್ ರೀಚಬಲ್ ಆಗಿದ್ದಾರೆ ಎಂದು ನಿರ್ಮಾಪಕರ ಸಂಘಕ್ಕೆ ಮೊರೆಹೋದೆ.

ದಯವಿಟ್ಟು ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ. ಇದೆಲ್ಲಾ ಆಗಿದ್ದು ನನ್ನ ತಪ್ಪಿನಿಂದಲೇ. ಏನೇ ಮಿಸ್ಟೇಕ್ ಆಗಿದ್ದರೂ ಅದು ನನ್ನಿಂದಲೇ ಎಂದು ಮೇಜರ್ ಶ್ರೀನಿವಾಸ್ ಪೂಜಾರ್ ಕೊನೆಯದಾಗಿ ವಿನಂತಿಸಿಕೊಳ್ಳುವ ಮೂಲಕ 'ಜೈ ಹಿಂದ್' ವಿವಾದಕ್ಕೆ ತೆರೆಬಿದ್ದಿದೆ. (ಏಜೆನ್ಸೀಸ್)

English summary
Actress Pooja Gandhi tipped over Kannada film 'Jai Hind' producer Major Srinivas Poojar. She clearly explained her three months schedule and has agreed for it. Besides this, the producer has complained to the Kannada Producers Association for not co-operating for movie promotion.
Please Wait while comments are loading...