»   » ಕನ್ನಡ ಚಿತ್ರ ನಿರ್ಮಾಣದತ್ತ ಗಾಯಕ ದಲೇರ್ ಮಹಿಂದಿ ಚಿತ್ತ?

ಕನ್ನಡ ಚಿತ್ರ ನಿರ್ಮಾಣದತ್ತ ಗಾಯಕ ದಲೇರ್ ಮಹಿಂದಿ ಚಿತ್ತ?

Posted By:
Subscribe to Filmibeat Kannada

ಭಾರತೀಯ ಪಾಪ್ ಐಕಾನ್ ದಲೇರ್ ಮಹಿಂದಿ ನಿಮಗೆ ಗೊತ್ತಿರಬಹುದು. ''ಬೋಲೋ ತಾ ರಾ ರಾ..'', ''ಹೋ ಜಾಯೇಗಿ ಭಲ್ಲೇ ಭಲ್ಲೇ...'', 'ತುಣಕ್ ತುಣಕ್...'' ಸೇರಿದಂತೆ ಹಲವಾರು ಆಲ್ಬಂಗಳಿಂದ ಖ್ಯಾತಿ ಗಳಿಸಿರುವ ದಲೇರ್ ಮಹಿಂದಿ ಬಾಲಿವುಡ್ ನಲ್ಲೂ ಜನಪ್ರಿಯ.

'ರಂಗ್ ದೇ ಬಸಂತಿ', 'ಸಿಂಗ್ ಈಸ್ ಕಿಂಗ್' ಸೇರಿದಂತೆ ಹಲವಾರು ಚಿತ್ರಗಳಿಗೆ ಗಾನಸುಧೆ ಹರಿಸಿರುವ ದಲೇರ್ ಮಹಿಂದಿ ಈಗ ಚಿತ್ರ ನಿರ್ಮಾಣ ಮಾಡುವ ಬಗ್ಗೆ ಮನಸ್ಸು ಮಾಡಿದ್ದಾರಂತೆ.

daler-mehndi

ಅದು ಬಾಲಿವುಡ್ ಸಿನಿಮಾಗಾಗಿ ಅಲ್ಲ, ಸ್ಯಾಂಡಲ್ ವುಡ್ ನ ಅಚ್ಚ ಕನ್ನಡ ಚಿತ್ರಕ್ಕಾಗಿ ಅನ್ನೋದು ಇಂಟ್ರೆಸ್ಟಿಂಗ್ ನ್ಯೂಸ್. ದಲೇರ್ ಮಹಿಂದಿಗೂ ಕನ್ನಡ ಚಿತ್ರರಂಗದ ನಂಟು ಹೇಗೆ ಬೆಳೀತೋ ಗೊತ್ತಿಲ್ಲ. ಆದ್ರೆ, ಇಮ್ರಾನ್ ಸರ್ದಾರಿಯಾ ನಿರ್ದೇಶಿಸಲಿರುವ ಮುಂದಿನ ಚಿತ್ರವನ್ನ ದಲೇರ್ ಮಹಿಂದಿ ನಿರ್ಮಾಣ ಮಾಡಲಿದ್ದಾರೆ.

imran-sardhariya

ಈಗಾಗಲೇ 'ಎಂದೆಂದಿಗೂ' ಚಿತ್ರದ ಮೂಲಕ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಆಗಿದೆ. ಇದೀಗ ಅವರು ಮಾಡಿರುವ ಹೊಸ ಕಥೆಗೆ ದಲೇರ್ ಮಹಿಂದಿ ಬಂಡವಾಳ ಹಾಕೋಕೆ ನಿರ್ಧರಿಸಿದ್ದಾರಂತೆ. [ದರ್ಶನ್-ಇಮ್ರಾನ್ ಸರ್ದಾರಿಯಾ ಮಧ್ಯೆ ಹುಳಿ ಹಿಂಡಿದವರಾರು?]

ಚಿತ್ರದ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿ ಬಗ್ಗೆ ಖುದ್ದು ಇಮ್ರಾನ್ ಸರ್ದಾರಿಯಾ ಬಾಯ್ಬಿಡಬೇಕಿದೆ.

English summary
According to the grapevine, Indian Pop Icon Daler Mehndi is all set to produce a Kannada Film directed by Imran Sardariya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada