For Quick Alerts
  ALLOW NOTIFICATIONS  
  For Daily Alerts

  ಅಬ್ಬಾ.! ಪ್ರಭಾಸ್ 'ಆದಿಪುರುಷ್' ಸಿನಿಮಾಗೆ ಇಷ್ಟು ಕೋಟಿ ಖರ್ಚು ಮಾಡುತ್ತಿದ್ದಾರಾ?

  |

  ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಸೆಟ್ಟೇರುವ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದೆ. ಪಾತ್ರಗಳ ಆಯ್ಕೆ ವಿಚಾರವಾಗಿ ಭಾರತೀಯ ಸಿನಿಮಾರಂಗದ ಗಮನ ಸೆಳೆಯುತ್ತಿದೆ ಆದಿಪುರುಷ್. ಬಾಲಿವುಡ್ ನ ದೊಡ್ಡ ದೊಡ್ಡ ಕಲಾವಿದರು ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ದಿನದಿಂದ ದಿನಕ್ಕೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸುತ್ತಲೇ ಇರುವ ಆದಿಪುರುಷ್ ಸಿನಿಮಾದಿಂದ ಮತ್ತೊಂದು ಸುದ್ದಿ ಹರಿದಾಡುತ್ತಿದೆ.

  ದೊಡ್ಡ ಕಲಾವಿದರ ಆಯ್ಕೆ ಜೊತೆಗೆ ಈ ಸಿನಿಮಾ ಬಜೆಟ್ ವಿಚಾರವಾಗಿಯೂ ಸದ್ದು ಮಾಡುತ್ತಿದೆ. ಪ್ರಭಾಸ್ ಸಿನಿಮಾ ಅಂದ್ಮೇಲೆ ದೊಡ್ಡ ಮೊತ್ತದಲ್ಲಿ ತಯಾರಾಗುವುದು ಸಾಮಾನ್ಯ. ಆದರೆ ಆದಿಪುರುಷ್ ಸಿನಿಮಾದ ಬಜೆಟ್ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡಿಸುತ್ತಿದೆ. ಹೌದು, ಈ ಸಿನಿಮಾ ಬರೋಬ್ಬರಿ 400 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆಯಂತೆ. ಈ ಸಿನಿಮಾ ಮುಂದಿನ ವರ್ಷ ತಯಾರಾಗುತ್ತಿರುವ ಅತೀ ದೊಡ್ಡ ಬೆಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ ಎಂದು ಹೇಳಲಾಗುತ್ತಿದೆ.

  ಪ್ರಭಾಸ್ 'ಆದಿಪುರುಷ್' ಸಿನಿಮಾಗೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟನ ಎಂಟ್ರಿ

  ಹೆಚ್ಚು VFX ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಿಕೆ

  ಹೆಚ್ಚು VFX ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಿಕೆ

  ಕೊರೊನಾ ಕಾರಣದಿಂದ ಈಗಾಗಲೇ ಸಾಕಷ್ಟು ಸಿನಿಮಾಗಳು ಬಜೆಟ್ ಕಡಿಮೆ ಮಾಡಿದ್ದಾರೆ. ಆದರೆ ಪ್ರಭಾಸ್ ಆದಿಪುರುಷ್ ಸಿನಿಮಾ ಅತೀ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವುದು ಅಚ್ಚರ ಮೂಡಿಸಿದೆ. ಅಂದ್ಹಾಗೆ ಚಿತ್ರದಲ್ಲಿ ಹೆಚ್ಚು ವಿ ಎಫ್ ಎಕ್ಸ್ ದೃಶ್ಯಗಳಿರಲಿದೆಯಂತೆ. ಜೊತೆಗೆ ಭಾರತೀಯ ಸಿನಿಮಾರಂಗದಲ್ಲಿ ಹಿಂದೆಂದೂ ನೋಡಿರದ ತಂತ್ರಜ್ಞಾನ ಇರಲಿದೆಯಂತೆ. ಹಾಗಾಗಿ ಚಿತ್ರಕ್ಕೆ 400 ಕೋಟಿಗೂ ಅಧಿಕ ವೆಚ್ಚ ಬೀಳಲಿದೆ ಎನ್ನಲಾಗುತ್ತಿದೆ.

  ರಾಮನ ಪಾತ್ರದಲ್ಲಿ ಪ್ರಭಾಸ್, ರಾವಣನಾಗಿ ಸೈಫ್ ನಟನೆ

  ರಾಮನ ಪಾತ್ರದಲ್ಲಿ ಪ್ರಭಾಸ್, ರಾವಣನಾಗಿ ಸೈಫ್ ನಟನೆ

  ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಮತ್ತೋರ್ವ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ಅಜಯ್ ದೇವಗನ್ ಆದಿಪುರುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ.

  ಶಿವನ ಪಾತ್ರದಲ್ಲಿ ಅಜಯ್ ದೇವಗನ್

  ಶಿವನ ಪಾತ್ರದಲ್ಲಿ ಅಜಯ್ ದೇವಗನ್

  ನಟ ಅಜಯ್ ದೇವಗನ್ ಆದಿಪುರುಷ್ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಮೂಡಿಬಂದ ತನ್ಹಾಜಿ ಸಿನಿಮಾದಲ್ಲಿ ಅಜಯ್ ದೇವರನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಮತ್ತೆ ಆದಿಪುರುಷ್ ಸಿನಿಮಾ ಮೂಲಕ ಇಬ್ಬರು ಒಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶಿವನ ಪಾತ್ರವನ್ನು ಅಜಯ್ ದೇವಗನ್ ಅವರೇ ಮಾಡಬೇಕೆಂದು ನಿರ್ಧರಿಸಿ ಈ ಪಾತ್ರವನ್ನು ಅವರಿಗೆ ನೀಡುತ್ತಿದ್ದಾರೆ ನಿರ್ದೇಶಕ ಓಂ ರಾವತ್.

  ಸಾಲು ಸಾಲು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

  ಸಾಲು ಸಾಲು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

  ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಧೆ ಶ್ಯಾಮ ಚಿತ್ರೀಕರಣ ಇನ್ನೂ ಭಾಕಿ ಇದೆ. ಈ ಸಿನಿಮಾ ಜೊತೆಗೆ ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಆದಿಪುರುಷ್ ಸಿನಿಮಾ ಸಹ ಸಾಲಿನಲ್ಲಿದೆ. ಯಾವ ಸಿನಿಮಾ ಮೊದಲು ಪ್ರಾರಂಭಿಸಿ, ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಚಿತ್ರಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

  English summary
  Prabhas and Saif Ali Khan's Adipurush to Be Made on a Budget of Rs 400 Crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X