For Quick Alerts
  ALLOW NOTIFICATIONS  
  For Daily Alerts

  ಎರಡು ಚಿತ್ರವನ್ನು ಏಕಕಾಲದಲ್ಲಿ ಶೂಟಿಂಗ್ ಮಾಡಲಿದ್ದಾರೆ ಪ್ರಭಾಸ್

  |

  ಲಾಕ್‌ಡೌನ್ ಬಳಿಕ ನಟ ಪ್ರಭಾಸ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಒಂದರ ಹಿಂದೆ ಮತ್ತೊಂದರಂತೆ ಹೊಸ ಚಿತ್ರಗಳಿಗೆ ಒಪ್ಪಿಗೆ ನೀಡಿರುವ ನಟ ಎರಡು ಮೆಗಾ ಪ್ರಾಜೆಕ್ಟ್‌ಗಳನ್ನು ಏಕಕಾಲದಲ್ಲಿ ಶೂಟಿಂಗ್ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಪ್ರಭಾಸ್ ಮತ್ತು ಪೂಜಾ ಹೆಗಡೆ ನಟನೆಯ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಓಂ ರಾವತ್ ನಿರ್ದೇಶನದ ಆದಿಪುರುಷ್ ಮತ್ತು ನಾಗ್ ಅಶ್ವಿನ್ ಚಿತ್ರಗಳು ಸಾಲಿನಲ್ಲಿದ್ದವು. ಈ ನಡುವೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ 'ಸಲಾರ್' ಎಂಬ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.

  'ರಾಧೇ ಶ್ಯಾಮ್' ಚಿತ್ರಕ್ಕೆ 80 ಕೋಟಿ, 'ಸಲಾರ್' ಚಿತ್ರಕ್ಕೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು?

  ಪ್ರಶಾಂತ್ ಮತ್ತು ಪ್ರಭಾಸ್ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ಯಾವ ಚಿತ್ರ ಮೊದಲ, ಯಾವುದು ಆಮೇಲೆ ಎಂಬ ಕುತೂಹಲ ಹೆಚ್ಚಾಗಿದೆ.

  ಸದ್ಯದ ಮಾಹಿತಿ ಪ್ರಕಾರ ಆದಿಪುರುಷ್ ಮತ್ತು ನಾಗ್ ಅಶ್ವಿನ್ ಸಿನಿಮಾ ಒಟ್ಟಿಗೆ ಚಿತ್ರೀಕರಣ ಮಾಡಲಿದೆ ಎನ್ನಲಾಗಿದೆ. ಆದ್ರೆ, ಬಿಡುಗಡೆ ವಿಚಾರದಲ್ಲಿ ಆದಿಪುರುಷ್ ಸಿನಿಮಾ ಈಗಾಗಲೇ ದಿನಾಂಕ ಲಾಕ್ ಮಾಡಿದೆ. ಆದಿಪುರುಷ್ ಸಿನಿಮಾ 2020ರ ಆಗಸ್ಟ್ 8 ರಂದು ತೆರೆಕಾಣಲಿದೆ ಎಂದು ಅಧಿಕೃತ ಪ್ರಕಟಣೆ ಮಾಡಿದೆ.

  ಆದಿಪುರುಷ್ ಸಿನಿಮಾ 2021ರ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭಿಸಲಿದೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ 21 ಚಿತ್ರವೂ ಏಪ್ರಿಲ್‌ನಲ್ಲಿ ಚಿತ್ರೀಕರಣ ಶುರು ಮಾಡಲಿದೆ. ಈ ಎರಡು ಚಿತ್ರಕ್ಕೂ ಮೊದಲು ಅಂದ್ರೆ ಜನವರಿಯಿಂದಲೇ ಸಲಾರ್ ಸಿನಿಮಾ ಶೂಟಿಂಗ್ ಮಾಡಲಿದೆ.

  ನಾಗ್ ಅಶ್ವಿನ್ ನಿರ್ದೇಶನದ ಚಿತ್ರ ಸೈನ್ಸ್ ಫಿಕ್ಷನ್ ಕಥಾಹಂದರ ಹೊಂದಿದ್ದು, ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರ ಹಾಗೂ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Toollywood actor Prabhas will start shooting of Nag Ashwin's Next and Adipurush Simultaneously said Source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X