For Quick Alerts
  ALLOW NOTIFICATIONS  
  For Daily Alerts

  ಬಚ್ಚನ್ ಚಿತ್ರದಲ್ಲಿ ನಾಯಕಿಯರ ಮ್ಯೂಸಿಕ್ ಚೇರ್

  |

  ಕಿಚ್ಚ ಸುದೀಪ್ ನಾಯಕತ್ವ ಹಾಗೂ ಶಶಾಂಕ್ ನಿರ್ದೇಶನದ 'ಬಚ್ಚನ್ ' ಚಿತ್ರದಿಂದ ನಟಿ ಪ್ರಣೀತಾ ಔಟ್ ಆಗಿದ್ದಾರೆ. ಹೀಗೊಂದು ಸುದ್ದಿ ಗಾಂಧಿನಗರದ ಸುತ್ತು ಸುತ್ತುತ್ತಲೇ ಇದೆ. ಪ್ರಣೀತಾ ಜಾಗಕ್ಕೆ ತುಲಿಪ್ ಜೋಶಿ ಬರಲಿದ್ದಾರೆ ಎನ್ನುವ ವದಂತಿ ದಟ್ಟವಾಗಿ ಹಬ್ಬಿದೆ. ಆದರೆ ಪ್ರಣೀತಾ ಆಯ್ಕೆಯಾಗಿದ್ದೇ ಸುಳ್ಳೇ ಅಥವಾ ಆಯ್ಕೆ ನಂತರ ಈ ಬೆಳವಣಿಗೆ ನಡೆದಿದೆಯೇ ಎಂಬುದು ಗಾಸಿಪ್ ಆಗಿಯೇ ಉಳಿದಿದೆ.

  ಬಚ್ಚನ್ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ನಾಯಕಿಯಾಗಿ ಮೊಟ್ಟಮೊದಲು ಆಯ್ಕೆಯಾಗಿದ್ದ ನಟಿ ದೀಪಾ ಸನ್ನಿಧಿ ಈಗಾಗಲೇ ಹೊರಹೋಗಿದ್ದಾರೆ. ಆ ಜಾಗಕ್ಕೆ ಪ್ರಣೀತಾ ಬರುತ್ತಾರೆ ಎನ್ನಲಾಗುತ್ತಿತ್ತು. ಇನ್ನು ಮತ್ತಿಬ್ಬರು ನಾಯಕಿಯರಾದ ಜಾಕಿ ಖ್ಯಾತಿಯ ಭಾವನಾ ಹಾಗೂ ಗೋವಿಂದಾಯ ನಮಃ ಖ್ಯಾತಿಯ ಪಾರುಲ್ ಯಾದವ್, ಈ ಮೊದಲಿನಂತೆ ಮುಂದುವರಿಯಲಿದ್ದಾರೆ.

  ತಮಿಳಿನಲ್ಲಿ 'ಶಕುನಿ' ಚಿತ್ರದ ನಂತರ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಕಾರಣಕ್ಕೇ ಪ್ರಣೀತಾ ಅವರೇ ಈ ಆಫರ್ ನಿರಾಕರಿಸಿದರೇ? ಅಥವಾ, ಚಿತ್ರತಂಡವೇ ಪ್ರಣೀತಾ ಬದಲಾವಣೆ ಬಯಸಿತೇ? ಅದಕ್ಕೂ ಸರಿಯಾದ ಉತ್ತರವಿಲ್ಲ. ಇವೆಲ್ಲಾ ಚಿತ್ರತಂಡದೊಳಗೆ ನಡೆಯುವ ಚಟುವಟಿಕೆಗಳಾದ್ದರಿಂದ ಸರಿಯಾದ ಮಾಹಿತಿ ಕೆಲವೊಮ್ಮೆ ಮಾತ್ರ ಲಭ್ಯ!

  ಒಟ್ಟಿನಲ್ಲಿ ಈ ಮೊದಲು ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶನ ಹಾಗೂ ನಾಯಕತ್ವದಲ್ಲಿ ಮೂಡಿಬಂದಿದ್ದ 'ಸೂಪರ್' ಚಿತ್ರದ 'ಮಂದಿರಾ' ಪಾತ್ರದ ಮೂಲಕ ಕನ್ನಡಕ್ಕೆ ಬಂದಿದ್ದ ತುಲಿಪ್ ಜೋಶಿಗೆ ಬಚ್ಚನ್ ತಂಡ ಗಾಳ ಹಾಕುತ್ತಿದೆ. ಅದೇನಾದರೂ ಯಶಸ್ವಿಯಾದರೆ ಕನ್ನಡಿಗರಿಗೆ ಮತ್ತೊಮ್ಮೆ ತುಲಿಪ್ ಜೋಶಿ ದರ್ಶನ ಭಾಗ್ಯ ಲಭ್ಯವಾಗಲಿದೆ. ಸದ್ಯಕ್ಕೆ ಇದು ಸಂಶಯವೇ.

  ಅಂದಹಾಗೆ, ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರದಲ್ಲಿ ತೆಲುಗು ಖ್ಯಾತ ನಟ ಜಗಪತಿ ಬಾಬು ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಪಕ್ಕಾ ಆಗಿರುವ ನಾಯಕಿಯರಾದ ಭಾವನಾ ಹಾಗೂ ಪಾರುಲ್ ಯಾದವ್ ಜೊತೆಗೆ ಆಶಿಷ್ ವಿದ್ಯಾರ್ಥಿ, ಪ್ರದೀಪ್ ಸಿಂಗ್ ರಾವ್, ರವಿಶಂಕರ್ ಮುಂತಾದವರು ನಟಿಸಲಿದ್ದಾರೆ. ಒಂದು ತಿಂಗಳ ಕಾಲ ಸತತವಾಗಿ ಶೂಟಿಂಗ್ ನಡೆಯಲಿದೆ. (ಒನ್ ಇಂಡಿಯಾ ಕನ್ನಡ)

  English summary
  There rumour buxx that actress Pranitha came out from Shashank direction Sudeep movie Bachchan. According to the sources, actress Tulip Joshi to come for this Pranitha place. But, everything is under in confusion. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X