Don't Miss!
- News
ಸಿದ್ದರಾಮಯ್ಯ ವಿರುದ್ಧ ದೂರುಗಳ ಸುರಿಮಳೆ ಹರಿಸಿದ ಎನ್ ಆರ್ ರಮೇಶ್, ಪ್ರಕರಣಗಳ ವಿವರ
- Automobiles
ಬೆಂಗಳೂರು - ಮೈಸೂರು JUST 90 ನಿಮಿಷ: ಹೇಗಿರಲಿದೆ ಎಕ್ಸ್ಪ್ರೆಸ್ ವೇ!
- Technology
ಫಾಸ್ಟ್ಯಾಗ್ ರೀಚಾರ್ಜ್ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!
- Lifestyle
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
- Sports
ಸರಣಿ ಗೆದ್ದ ಬಳಿಕ ನಾಯಕನ ಮಾತು: ಯುವ ಆಟಗಾರರ ಪ್ರದರ್ಶನಕ್ಕೆ ಹಾರ್ದಿಕ್ ವಿಶೇಷ ಮೆಚ್ಚುಗೆ
- Finance
Tax Regime: ಹಳೆ ತೆರಿಗೆ ಪದ್ಧತಿ Vs ಹೊಸ ತೆರಿಗೆ ಪದ್ಧತಿ, 2023ರಲ್ಲಿ ಯಾವುದು ಬೆಸ್ಟ್?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಮಿರ್ ಮೇಲೆ ಸೌತ್ ಫಿಲ್ಮ್ ಮೇಕರ್ಸ್ ಕಣ್ಣು: ದಿಗ್ಗಜರ ಕಾದಾಟಕ್ಕೆ ಮುಹೂರ್ತ ಇಟ್ರಾ ಪ್ರಶಾಂತ್ ನೀಲ್?
ಬಾಲಿವುಡ್ ಸೂಪರ್‌ಸ್ಟಾರ್, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಸೋಲಿನ ಸುಳಿಗೆ ಸಿಲುಕಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲು ಕಂಡ ಪರಿಣಾಮ ನಟನೆ ಒಂದೆರಡು ವರ್ಷ ಬ್ರೇಕ್ ಕೊಟ್ಟಿದ್ದಾರೆ.
ಆಮಿರ್ ಖಾನ್ ಕೆಲವು ವರ್ಷ ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿದ್ದರೂ, ಫಿಲ್ಮ್ ಮೇಕರ್ಸ್ ಮಾತ್ರ ಬಿಡುತ್ತಿಲ್ಲ. ಮಿಸ್ಟರ್ ಪರ್ಫೆಕ್ಷನಿಸ್ಟ್‌ಗಾಗಿ ದುಂಬಾಲು ಬೀಳುತ್ತಿದ್ದಾರಂತೆ. ಸ್ಟಾರ್ ನಿರ್ದೇಶಕರು ಆಮಿರ್ ಖಾನ್‌ಗಾಗಿಯೇ ಕಥೆಯನ್ನು ವಿಭಿನ್ನ ಕಥೆಯನ್ನು ಹೆಣೆಯುತ್ತಿದ್ದಾರಂತೆ. ಇಂತಹದ್ದೊಂದು ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿಯೇ ಹರಿದಾಡುತ್ತಿದೆ.
ಜೂ
ಎನ್‌ಟಿಆರ್
ಸಿನಿಮಾಕ್ಕೆ
ಬಾಲಿವುಡ್
ಸ್ಟಾರ್
ಅನ್ನು
ಎಳೆದು
ತರಲಿರುವ
ಪ್ರಶಾಂತ್
ನೀಲ್!
ಆಮಿರ್ ಖಾನ್‌ಗೆ ಈಗಾಗಲೇ ನಾಲ್ಕೈದು ಮಂದಿ ಗಾಳ ಹಾಕಿದ್ದಾರಂತೆ. ಅವರಲ್ಲಿ 'ಕೆಜಿಎಫ್ 2' ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಬಗ್ಗೆ ಈಗಿನಿಂದಲೇ ಸ್ಕೆಚ್ ಹಾಕಿದ್ದು, ಆಮಿರ್ ಖಾನ್‌ಗೆ ಆಕ್ಷನ್ ಕಟ್ ಹೇಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರಂತೆ. ಅಸಲಿಗೆ ಪ್ರಶಾಂತ್ ನೀಲ್ ಪ್ಲ್ಯಾನ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಆಮಿರ್ ಖಾನ್–ಪ್ರಶಾಂತ್ ನೀಲ್ ಕಾಂಬೋ?
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್‌ಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳ್ತಾರೆ ಅಂದ್ರೆ ಕ್ರೇಜ್ ಹೇಗಿರುತ್ತೆ ಯೋಚನೆ ಮಾಡಿ. ಆದರೆ, ಪ್ರಶಾಂತ್ ನೀಲ್ ಪ್ರಾಜೆಕ್ಟ್‌ನಲ್ಲಿ ದಿಢೀರನೇ ಆಮಿರ್ ಖಾನ್ ಬಂದಿದ್ದೇಗೆ? ಅನ್ನೋದು ಪ್ರಶ್ನೆ ಹುಟ್ಟುತ್ತೆ. ಆಮಿರ್ ಖಾನ್‌ಗೆ ಪವರ್‌ಫುಲ್ ಪಾತ್ರವನ್ನು ಸಿದ್ಧಪಡಿಸಿದ್ದಾರಂತೆ. ಹೀಗಾಗಿ ದಕ್ಷಿಣಕ್ಕೆ ಕರೆದುಕೊಂಡು ಬರೋಕೆ ಶತಪ್ರಯತ್ನ ನಡೆಸಿದ್ದಾರಂತೆ ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇಬ್ಬರಿಂದಲೂ ಅಧಿಕೃತ ಮಾಹಿತಿ ಮಾತ್ರ ಇಲ್ಲ.

ಜೂ.ಎನ್‌ಟಿಆರ್ Vs ಆಮಿರ್ ಖಾನ್?
ಪ್ರಶಾಂತ್ ನೀಲ್ 2024ರಲ್ಲಿ ಟಾಲಿವುಡ್‌ನ ಯಂಗ್ ಟೈಗರ್ ಜೂ.ಎನ್‌ಟಿಆರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಇಬ್ಬರ ಸಿನಿಮಾ ಸೆಟ್ಟೇರೋದು ಪಕ್ಕಾ ಆಗಿದೆ. ಈ ಮಧ್ಯೆ ಜೂ.ಎನ್‌ಟಿಆರ್ ಕೂಡ ಕೊರಟಾಲ ಶಿವ ಸಿನಿಮಾ ಮುಗಿಸಬೇಕಿದೆ. ಈಗಾಗಲೇ ಪ್ರಶಾಂತ್ ನೀಲ್ ಈ ಸಿನಿಮಾ ಸ್ಕ್ರೀಪ್ಟ್ ವರ್ಕ್ ಕೂಡ ಮಾಡುತ್ತಿದ್ದಾರಂತೆ. ಜೂ.ಎನ್‌ಟಿಆರ್ ಪಾತ್ರಕ್ಕೆ ಟಕ್ಕರ್ ಕೊಡುವುದಕ್ಕೆ ಬಾಲಿವುಡ್‌ನಿಂದ ಆಮಿರ್ ಖಾನ್ ಅನ್ನು ಕರೆದುಕೊಂಡು ಬರ್ತಾರೆ ಅನ್ನೋದು ಸುದ್ದಿ. ಅಹಂ ಇರುವ ಇಬ್ಬರು ವ್ಯಕ್ತಿಗಳ ನಡುವಿನ ಸಂಘರ್ಷವನ್ನು ಪ್ರಶಾಂತ್ ನೀಲ್ ತೆರೆಮೇಲೆ ತರುವುದಕ್ಕೆ ಹೊರಟಿದ್ದಾರಂತೆ.

ನಂಬಿಕೆ ಇದ್ರೆ ಮಾತ್ರ ಆಮಿರ್ ಖಾನ್ ಸಿನಿಮಾ
ಯಾವಾಗ ಸಿನಿಮಾಗೆ ವಾಪಸ್ ಮರಳಬೇಕು ಅನ್ನೋವ ಬಗ್ಗೆ ಆಮಿರ್ ಖಾನ್ ನಿರ್ಧಾರ ಮಾಡಿದ್ದಾಗಿದೆ. ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಸ್ಕ್ರಿಪ್ಟ್ ಸಿಗುವವರೆಗೂ, ಜನರು ಥಿಯೇಟರ್‌ಗೆ ಬರುತ್ತಾರೆ ಅನ್ನೋ ಕಾನ್ಫಿಡೆನ್ಸ್ ಸಿಗುವವರೆಗೂ ಹೊಸ ಸಿನಿಮಾ ಸಹಿ ಮಾಡೋದಿಲ್ಲ ಎನ್ನಲಾಗಿದೆ. ಅದರಲ್ಲೂ ಶೇ. 100ರಷ್ಟು ಸ್ಕ್ರಿಪ್ಟ್‌ಗೆ ಬಗ್ಗೆ ಕಾನ್ಫಿಡೆನ್ಸ್ ಬಂದ್ಮೇಲೆ ಗ್ರೀನ್ ಸಿಗ್ನಲ್ ಕೊಡುತ್ತಾರೆ ಎನ್ನಲಾಗಿದೆ.

ಆಮಿರ್ ಹಿಂದೆ ದಕ್ಷಿಣದ ನಿರ್ದೇಶಕರು
ಆಮಿರ್ ಖಾನ್ ಅನ್ನು ದಕ್ಷಿಣ ಭಾರತಕ್ಕೆ ಕರೆದುಕೊಂಡು ಬರಲೇಬೇಕು ಅಂತ ದಕ್ಷಿಣದ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ತಮಿಳು ನಿರ್ದೇಶಕ ಎ ಆರ್ ಮುರುಗದಾಸ್ 'ಘಜನಿ 2'ಗಾಗಿ ಆಮಿರ್‌ಗೆ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಬಾಲಿವುಡ್ ನಿರ್ಮಾಪಕ ಮಧು ಮಂಟೇನಾ ದಕ್ಷಿಣದ ಹಲವು ನಿರ್ದೇಶಕರ ಜೊತೆ ಬೇರೆ ಪ್ರಾಜೆಕ್ಟ್‌ಗಳ ಬಗ್ಗೆನೂ ಮಾತುಕತೆ ನಡೆಸಿದ್ದಾರಂತೆ. ಇದರ ಜೊತೆ ಪ್ರಶಾಂತ್ ನೀಲ್ ಕೂಡ ಕ್ಯೂನಲ್ಲಿ ಇದ್ದಾರೆ. ಆದರೆ, ಆಮಿರ್ ಯಾರಿಗೆ ಒಲಿಯುತ್ತಾರೆ ಅನ್ನೋದೇ ಕುತೂಹಲ.