For Quick Alerts
  ALLOW NOTIFICATIONS  
  For Daily Alerts

  25 ವರ್ಷದ ಗಾಯಕನ ಜೊತೆ ಪ್ರಿಯಾಂಕಾ ಚೋಪ್ರಾ ಡೇಟಿಂಗ್.!

  By Bharath Kumar
  |
  ಪ್ರಿಯಾಂಕಾ ಪ್ರೀತಿಲಿ ಬಿದ್ದಿರೋ ಹುಡುಗನ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಾ | Filmibeat Kannada

  ಕೆಲವು ತಾರೆಯರು ಸಿನಿಮಾ ವಿಚಾರಕ್ಕಿಂತ ಅವರ ವೈಯಕ್ತಿಕ ವಿಚಾರಗಳಲ್ಲಿಯೇ ಹೆಚ್ಚು ಸುದ್ದಿಯಾಗುತ್ತಾರೆ. ಅದರಲ್ಲೂ ಬಾಲಿವುಡ್ ಮಂದಿ ಅಂತೂ ತಮ್ಮ ಖಾಸಗಿ ಜೀವನದ ಪ್ರತಿಯೊಂದು ವಿಷ್ಯದಲ್ಲಿ ಹೆಡ್ ಲೈನ್ ಆಗ್ತಾರೆ.

  ಸದ್ಯ, ಬಾಲಿವುಡ್ ನಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಿಯಾಂಕಾ ಚೋಪ್ರಾ ಇನ್ ಲವ್ ಎಂಬ ಸುದ್ದಿಗಳು ಆಗಾಗ ಸದ್ದು ಮಾಡುತ್ತಲೇ ಇತ್ತು. ಆದ್ರೀಗ, ಪ್ರೀತಿಯ ಜೊತೆಗೆ ಜೊತೆಗಾರನ ಬಗ್ಗೆಯೂ ಕೂಡ ಚರ್ಚೆಯಾಗುತ್ತಿದೆ.

  ಹೌದು, ಪಿಗ್ಗಿಯ ಬಾಯ್ ಫ್ರೆಂಡ್ ಯಾರಿರಬಹುದು ಎಂಬ ಕುತೂಹಲ ಕಾಡುತ್ತಿತ್ತು. ಸದ್ಯ, ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ಅಮೆರಿಕದ ನಟ-ಗಾಯಕ ನಿಕ್ ಜೋನಸ್ ಅವರ ಹೆಸರು ಟ್ರೆಂಡಿಂಗ್ ನಲ್ಲಿದೆ.

  ನಿಕ್ ಜೋನಸ್ ಜೊತೆಯಲ್ಲಿ ಒಡನಾಟ ಹೆಚ್ಚಿದ್ದು, ಇತ್ತೀಚೀನ ದಿನಗಳಲ್ಲಿ ಇಬ್ಬರೂ ಪಾರ್ಟಿ, ರೆಸ್ಟೊರೆಂಟ್ ಗೆ ಒಟ್ಟಾಗಿ ತೆರಳಿರುವುದು ಗುಸುಗುಸು ಹಬ್ಬಲು ಕಾರಣವಾಗಿದೆ. ಅಷ್ಟೇ ಅಲ್ಲದೇ, ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.

  ಅಚ್ಚರಿ ಅಂದ್ರೆ, ಪ್ರಿಯಾಂಕಾ ವಯಸ್ಸು 35 ವರ್ಷ. ಆದರೆ ಜೋನಸ್​ ಗೆ ಇನ್ನೂ 25ರ ತರುಣ. ತಮಗಿಂತ 10 ವರ್ಷ ಚಿಕ್ಕ ವಯಸ್ಸಿನ ಯುವಕನ ಜೊತೆ ಸುತ್ತಾಡುತ್ತಿರುವುದು ನೋಡುಗರ ಬಾಯಿಗೆ ಕೆಲಸ ನೀಡಿದೆ. ಅದರಲ್ಲೂ ಅವರಿಬ್ಬರ ಸಲುಗೆ ಗಮನಿಸಿದ್ರೆ, ಈ ಸಂಬಂಧಕ್ಕೆ ಏನ್ ಹೇಳಬೇಕು ಎಂಬುದೆ ಗೊತ್ತಾಗ್ತಿಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

  ಆದ್ರೆ, ಈ ಬಗ್ಗೆ ಪ್ರಿಯಾಂಕಾ ಆಗಲಿ ಅಥವಾ ಜೋನಸ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನುಳಿದಂತೆ ಸಲ್ಮಾನ್ ಖಾನ್ ಅಭಿನಯಿಸಲಿರುವ 'ಭಾರತ್' ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಬಿಟೌನ್ ಗೆ ಕಂಬ್ಯಾಕ್ ಆಗ್ತಿದ್ದಾರೆ ಪಿಗ್ಗಿ.

  English summary
  After Nick Jonas and Priyanka Chopra were spotted having dinner together in Los Angeles on Thursday night, it seemed as though Chopra and Jonas were about to become Hollywood's cutest new couple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X