For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ 'ಸಲಾರ್' ಸಿನಿಮಾದ ವಿಶೇಷ ಹಾಡಿನಲ್ಲಿ ಬಾಲಿವುಡ್ ಖ್ಯಾತ ನಟಿ

  By ಫಿಲ್ಮ್ ಡೆಸ್ಕ್
  |

  ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಇಂಡಿಯನ್ ಸಿನಿಮಾ ಸಲಾರ್ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಪ್ರಭಾಸ್, ನಟಿ ಶ್ರುತಿ ಹಾಸನ್ ಸೇರಿದಂತೆ ಬಹುತೇಕರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

  ಪ್ರಭಾಸ್ 'ಸಲಾರ್'ನಲ್ಲಿ ಯಾರೆಲ್ಲ ಬಣ್ಣಹಚ್ಚುತ್ತಿದ್ದಾರೆ ಎನ್ನುವ ಕುತೂಹಲ ಒಂದೆಡೆಯಾದರೆ, ಕನ್ನಡ ಕಲಾವಿದರು ಯಾರೆಲ್ಲ ಇರಲಿದ್ದಾರೆ ಎನ್ನುವ ಕೌತುಕ ಮತ್ತೊಂದೆಡೆ. ಇತ್ತೀಚಿಗಷ್ಟೆ ಚಿತ್ರಕ್ಕೆ ವಿಲನ್ ಎಂಟ್ರಿಯಾಗಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಹೌದು, ಚಿತ್ರಕ್ಕೆ ವಿಲನ್ ಆಗಿ ಕನ್ನಡ ನಟ ಮಧು ಗುರುಸ್ವಾಮಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅವರೇ ಮಾಹಿತಿ ಬಹಿರಂಗ ಪಡಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

  ಪ್ರಶಾಂತ್ ನೀಲ್ 'ಸಲಾರ್'ಗೆ ವಿಲನ್ ಆದ ಕನ್ನಡಿಗ; ಪ್ರಭಾಸ್ ಎದುರು 'ಭಜರಂಗಿ' ನಟನ ಅಬ್ಬರ

  ಚಿತ್ರದ ವಿಶೇಷ ಹಾಡಿನಲ್ಲಿ ಬಾಲಿವುಡ್ ಖ್ಯಾತ ನಟಿ

  ಚಿತ್ರದ ವಿಶೇಷ ಹಾಡಿನಲ್ಲಿ ಬಾಲಿವುಡ್ ಖ್ಯಾತ ನಟಿ

  ಇದೀಗ ಚಿತ್ರಕ್ಕೆ ಮತ್ತೋರ್ವ ಖ್ಯಾತ ನಟಿ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ಚಿತ್ರಕ್ಕೆ ಶ್ರುತಿ ಹಾಸನ್ ಆಯ್ಕೆ ಆಗಿದ್ದಾರೆ. ಮತ್ತೋರ್ವ ನಾಯಕಿನಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಿನಿಮಾದ ವಿಶೇಷ ಹಾಡಿಗಾಗಿ ಬಾಲಿವುಡ್ ನ ಖ್ಯಾತ ನಟಿಯನ್ನು ಕರೆತರುವ ಪ್ಲಾನ್ ಮಾಡಿದೆಯಂತೆ ಸಿನಿಮಾತಂಡ.

  ಪ್ರಭಾಸ್ ಜೊತೆ ಪ್ರಿಯಾಂಕಾ ಚೋಪ್ರಾ ಡ್ಯಾನ್ಸ್

  ಪ್ರಭಾಸ್ ಜೊತೆ ಪ್ರಿಯಾಂಕಾ ಚೋಪ್ರಾ ಡ್ಯಾನ್ಸ್

  ಸಲಾರ್ ಸಿನಿಮಾದಲ್ಲಿ ನಟಿಸುವ ಆ ಬಾಲಿವುಡ್ ನಟಿ ಮತ್ಯಾರು ಅಲ್ಲ ಪ್ರಿಯಾಂಕಾ ಚೋಪ್ರಾ. ಬಾಲಿವುಡ್ ನಿಂದ ಹಾಲಿವುಡ್ ವರೆಗೂ ಸದ್ದು ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ಸಲಾರ್ ಸಿನಿಮಾದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಪ್ರಿಯಾಂಕಾ, ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುತ್ತಾರಾ? ಪ್ರಭಾಸ್ ಜೊತೆ ಹೆಜ್ಜೆ ಹಾಕುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

  ಮ್ಯಾಗಜಿನ್ ಕವರ್ ಗಾಗಿ ಹಾಟ್ ಆದ ಪ್ರಿಯಾಂಕಾ; ಮಾದಕ ಲುಕ್ ಗೆ ಅಭಿಮಾನಿಗಳು ಫಿದಾ

  ಪ್ರಿಯಾಂಕಾ ಚೋಪ್ರಾ ಬಳಿ ಇರುವ ಸಿನಿಮಾಗಳು

  ಪ್ರಿಯಾಂಕಾ ಚೋಪ್ರಾ ಬಳಿ ಇರುವ ಸಿನಿಮಾಗಳು

  ಪ್ರಿಯಾಂಕಾ ಸದ್ಯ ವೆಬ್ ಸೀರಿಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವೆಬ್ ಸೀರಿಸ್ ಗಾಗಿ ಪ್ರಿಯಾಂಕಾ ಅಮೆರಿಕದಿಂದ ಲಂಡನ್ ಗೆ ತೆರಳಿದ್ದು, ಸುಮಾರು ಒಂದು ವರ್ಷಗಳ ಕಾಲ ಅಲ್ಲಿಯೇ ನೆಲೆಸಲಿದ್ದಾರೆ ಎನ್ನುವ ಮಾಹಿತಿ ಕೇಳಿ ಬಂದಿದೆ. ಪ್ರಿಯಾಂಕಾ ಸದ್ಯ ಟೆಕ್ಸ್ಟ್ ಫಾರ್ ಯೂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ.

  ಉಗ್ರಂ ರಿಮೇಕ್ ಅಲ್ಲ ಪ್ರಶಾಂತ್ ನೀಲ್

  ಉಗ್ರಂ ರಿಮೇಕ್ ಅಲ್ಲ ಪ್ರಶಾಂತ್ ನೀಲ್

  ಸಲಾರ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಗೋದಾವರಿ ಗಣಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಲಾರ್ ಸಿನಿಮಾ ಉಗ್ರಂ ಸಿನಿಮಾದ ರಿಮೇಕ್ ಇರಬಹುದಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಆದರೆ ಈ ಬಗ್ಗೆ ಪ್ರಶಾಂತ್ ನೀಲ್ ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

  English summary
  Bollywood Actress Priyanka Chopra likely to play special song in Prabhas Salaar movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X