»   » ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾಗೆ ಕಂಕಣಭಾಗ್ಯ

ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾಗೆ ಕಂಕಣಭಾಗ್ಯ

Posted By:
Subscribe to Filmibeat Kannada
Priyanka Chopra marriage
ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾಗೆ ಕಡೆಗೂ ಕಂಕಣಭಾಗ್ಯ ಕೂಡಿಬಂದಿದೆ. ಶೀಘ್ರದಲ್ಲೇ ಮದುವೆಯಾಗಿ ಬಣ್ಣದ ಜಗತ್ತಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರಂತೆ. ಕಿರುತೆರೆ ಕಲಾವಿದ ಮೋಹಿತ್ ರೈನಾ ಕೈಹಿಡಿಯಲಿದ್ದಾರೆ ಪ್ರಿಯಾಂಕಾ.

ಮಹದೇವ್ ಎಂಬ ಟಿವಿ ಧಾರಾವಾಹಿಯಲ್ಲಿ ಮೋಹಿತ್ ಶಿವನಾಗಿ ಅಭಿನಯಿಸಿದ್ದ. ಈಗ ಕಿರುತೆರೆ ಶಿವನ ತೆಕ್ಕೆಗೆ ಪ್ರಿಯಾಂಕಾ ಬೀಳುತ್ತಿದ್ದಾರೆ. ತಮ್ಮ ಮದುವೆ ಬಗ್ಗೆ ಪ್ರಸ್ತಾಪ ಮಾಡಿದಾಗಲೆಲ್ಲಾ ಪ್ರಿಯಾಂಕಾ, ನಾನಿನ್ನೂ ಒಂಟಿಯಾಗಿದ್ದೇವೆ. ಶೀಘ್ರದಲ್ಲೇ ಜಂಟಿಯಾಗುತ್ತೇನೆ ಎನ್ನುತ್ತಿದ್ದರು.

ಬಹುಶಃ ಈಗ ಕಾಲ ಕೂಡಿಬಂದಿದೆ ಎನ್ನಿಸುತ್ತದೆ. ಅವರ ಕುಟುಂಬಿಕರು ಪ್ರಿಯಾಂಕಾ ಮದುವೆ ಬಗ್ಗೆ ಗಂಭೀರವಾಗಿ ಮುಂದಡಿ ಇಟ್ಟಿದ್ದು ಮೋಹಿತ್ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನುತ್ತವೆ ಮೂಲಗಳು. ಪ್ರಿಯಾಂಕಾನೂ ಅಷ್ಟೇ ಮೋಹಿತ್ ಬಗ್ಗೆ ಮೋಹಿತರಾಗಿದ್ದಾರಂತೆ.

ಮೋಹಿತ್ ಉತ್ತಮ ನಟ ಎಂದು ಪ್ರಿಯಾಂಕಾ ಕುಟುಂಬಿಕರು ಪ್ರಮಾಣ ಪತ್ರ ನೀಡಿದ್ದು ಪ್ರಿಯಾಂಕಾ "ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ..." ಎಂದು ಹಾಡುವಂತಾಗಿದೆ. ಇನ್ನು ಮೋಹಿತ್ ಅವರನ್ನು ಈ ಬಗ್ಗೆ ಕೇಳಿದರೆ ಅವರೂ ಅಷ್ಟೇ ನಾಚಿ ನೀರಾಗಿದ್ದನ್ನು ಜೂಮ್ ಟಿವಿ ಜೂಮ್ ಮಾಡಿ ತೋರಿಸಿದೆ. (ಏಜೆನ್ಸೀಸ್)

English summary
It seems that Priyanka Chopra's family really wants her to get married and settle down. According to recent reports, Priyanka's massi has selected a boy for her, who is none other than our very own Lord Shiva. Aka Mohit Raina, the actor who plays the role of Shiva in the TV serial Mahadev.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada