»   » ಖ್ಯಾತ ನಿರ್ಮಾಪಕ ರಾಮಾನಾಯ್ಡು ಅವರಿಗೆ ಕ್ಯಾನ್ಸರ್?

ಖ್ಯಾತ ನಿರ್ಮಾಪಕ ರಾಮಾನಾಯ್ಡು ಅವರಿಗೆ ಕ್ಯಾನ್ಸರ್?

Posted By:
Subscribe to Filmibeat Kannada

ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ಮೂವಿ ಮೊಘಲ್ ದಗ್ಗುಬಾಟಿ ರಾಮಾನಾಯ್ಡು (78) ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಕಳೆದ ಕೆಲ ದಿನಗಳಿಂದ ಆಂಧ್ರದಾದ್ಯಂತ ಇದೇ ಮಾತುಗಳೂ ಕಿವಿಯಿಂದ ಕಿವಿವೆ ಹರಿದಾಡುತ್ತಿವೆ.

ಈ ಬಗ್ಗೆ ಅವರ ಪುತ್ರ ವಿಕ್ಟರಿ ವೆಂಕಟೇಶ್ ಅವರು ಮಾತನಾಡುತ್ತಾ, "ನಮ್ಮ ತಂದೆಯವರು ಈಗ ಆರಾಮವಾಗಿಯೇ ಇದ್ದಾರೆ. ಅವರ ಮನಸ್ಸೆಲ್ಲಾ ಸಿನಿಮಾಗಳ ಮೇಲೆಯೇ ಇದೆ. ವಿಶಾಖಪಟ್ಟಣದಲ್ಲಿ ಸ್ಟುಡಿಯೋ ನಿರ್ಮಿಸುವ ಬಗ್ಗೆ ಅವರು ಪ್ರತಿನಿತ್ಯ ಅಣ್ಣನ ಬಳಿ ಚರ್ಚಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. [ಖ್ಯಾತ ಹಾಸ್ಯನಟ ಎಂ.ಎಸ್ ನಾರಾಯಣ ವಿಧಿವಶ]

ರಾಮಾನಾಯ್ಡು ಅವರಿಗೆ 13 ವರ್ಷಗಳ ಹಿಂದೆ ಪ್ರಾಸ್ಟೇಟ್‌ (ಮೂತ್ರಕೋಶದ ಕಂಠ) ಕ್ಯಾನ್ಸರ್‌ ಆಗಿತ್ತು. ಆಗ ಅವರು ಚಿಕಿತ್ಸೆ ಪಡೆದಿದ್ದರು. ಇದೀಗ ಮತ್ತೆ ಸಮಸ್ಯೆ ಉದ್ಭವಿಸಿದೆ ಎನ್ನುತ್ತವೆ ಮೂಲಗಳು. ಇಂಗ್ಲಿಷ್ ಔಷಧೋಪಚಾರ ಅವರ ದೇಹದ ಮೇಲೆ ತೀವ್ರ ಪ್ರಭಾವ ಬೀರುತ್ತಿರುವುದರಿಂದ ಹೋಮಿಯೋ, ಆಯುರ್ವೇದ ಚಿಕಿತ್ಸೆ ಕಡೆಗೆ ಅವರ ಕುಟುಂಬಿಕರು ಒಲವು ತೋರಿಸುತ್ತಿದ್ದಾರಂತೆ.

Ramanaidu with his son

ಇನ್ನೊಂದು ಮೂಲದ ಪ್ರಕಾರ ರಾಮಾನಾಯ್ಡು ಅವರಿಗೆ ಚಿಕಿತ್ಸೆ ನೀಡುತ್ತಿರುವವರು ಟಾಲಿವುಡ್ ನಟ ಹಾಗೂ ವೈದ್ಯರೂ ಆಗಿರುವ ರಾಜಶೇಖರ್ ಎನ್ನಲಾಗಿದೆ. ರಾಮಾನಾಯ್ಡು ಅವರ ಆರೋಗ್ಯದ ಬಗೆಗಿನ ಸತ್ಯಾಸತ್ಯತೆಗಳು ಇನ್ನಷ್ಟೇ ಹೊರಬೀಳಬೇಕಷ್ಟೇ.

ಸುರೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೈಯಕ್ತಿಕವಾಗಿ 150 ಚಿತ್ರಗಳನ್ನು 13 ಭಾಷೆಗಳಲ್ಲಿ ನಿರ್ಮಿಸಿದ ಖ್ಯಾತಿ ರಾಮಾನಾಯ್ಡು ಅವರದು. ಇದಕ್ಕಾಗಿ ಅವರು ಗಿನ್ನಿಸ್ ದಾಖಲೆಗೂ ಪಾತ್ರರಾಗಿದ್ದಾರೆ.

ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅವರನ್ನು ವರಿಸಿದೆ. 1999-2004ರಲ್ಲಿ ಗುಂಟೂರು ಜಿಲ್ಲೆಯ ಬಾಪಟ್ಲ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ ಶ್ರೀಯುತರು.

ಕನ್ನಡದಲ್ಲಿ ಮೂರು ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ರಾಮಾನಾಯ್ಡು ಅವರದು. ನವಕೋಟಿ ನಾರಾಯಣ (1964), ತವರುಮನೆ ಉಡುಗೊರೆ (1991) ಹಾಗೂ ಮದುವೆ ಆಗೋಣ ಬಾ (2001) ಇವು ನಾಯ್ಡು ನಿರ್ಮಾಣದ ಕನ್ನಡ ಚಿತ್ರಗಳು. (ಫಿಲ್ಮಿಬೀಟ್ ಕನ್ನಡ)

English summary
Veteran producer, movie moghul Dr. D. Ramnaidu is reported to be seriously ill. According to the sources, the health condition of the 78 year old star producer has been unstable for a while.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada