»   » ತೆಲುಗಿನ 'ಅಖಿಲ್' ಸೋತಿದ್ದಕ್ಕೆ ಕನ್ನಡದ ಚಿತ್ರಗಳು ಬಲಿಪಶು ಆದ್ವಾ?

ತೆಲುಗಿನ 'ಅಖಿಲ್' ಸೋತಿದ್ದಕ್ಕೆ ಕನ್ನಡದ ಚಿತ್ರಗಳು ಬಲಿಪಶು ಆದ್ವಾ?

By: ಸೋನು ಗೌಡ
Subscribe to Filmibeat Kannada

ಇಲ್ಲಿಯವರೆಗೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ನಟ ಕಮ್ ನಿರ್ದೇಶಕ ನಾಗಶೇಖರ್ ಅವರು 'ಗಡಿಯಾರ' ಸಿನಿಮಾವನ್ನು ಈಗಾಗಲೇ ಆರಂಭಿಸಿ, ಅದು ಅರ್ಧ ಶೂಟಿಂಗ್ ಮುಗಿಬೇಕಿತ್ತು.

ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತದೆ ಎಂದು ಹೇಳಲಾಗಿರುವ 'ಗಡಿಯಾರ' ಸಿನಿಮಾದಲ್ಲಿ 'ಮೈನಾ' ಖ್ಯಾತಿಯ ನಟ ಚೇತನ್ ಮತ್ತು ದಕ್ಷಿಣ ಭಾರತದ ನಟಿ ತಾಪ್ಸಿ ಪನ್ನು ಅವರು ಅಭಿನಯಿಸುತ್ತಿದ್ದಾರೆ.[ಚಿತ್ರಗಳು: ವಿಜಿ 'ಮಾಸ್ತಿ ಗುಡಿ'ಗೆ ಅಮ್ಮಂದಿರಿಂದ ಮುಹೂರ್ತ]


ಆದರೆ ವಿಷಯ ಏನಪ್ಪಾ ಅಂದ್ರೆ 'ಗಡಿಯಾರ' ಸಿನಿಮಾ ಈಗ ನಿಂತುಹೋಗಿದೆ. ಅದರ ಮೊದಲು ನಿರ್ದೇಶಕ ನಾಗಶೇಖರ್ ಅವರು 'ಮಾಸ್ತಿ ಗುಡಿ' ಸಿನಿಮಾ ಮಾಡಿ ಮುಗಿಸಲು ಆತುರ ತೋರಿದ್ದಾರೆ.


ಇಷ್ಟಕ್ಕೂ 'ಗಡಿಯಾರ' ನಿಲ್ಲಲು ಕಾರಣ ಏನು? ಅಂದ್ರೆ ಚಿತ್ರ ನಿರ್ಮಾಪಕ ಮತ್ತು ವಿತರಕ ಕನಕಪುರ ಶ್ರೀನಿವಾಸ್ ಎಂಬ ಉತ್ತರ ಬರುತ್ತದೆ. ಈ ಸಿನಿಮಾ ಮಾತ್ರವಲ್ಲದೇ, ಅದೇ ನಿರ್ಮಾಪಕರ 'ದನ ಕಾಯೋನು', 'ಭರ್ಜರಿ', ಮತ್ತು 'ಜೆಸ್ಸಿ' ಸಿನಿಮಾಗಳು ಸಹ ತೊಂದರೆ ಅನುಭವಿಸುವಂತಾಗಿದೆ.[ಶೀರ್ಷಿಕೆ ವಿವಾದದಲ್ಲಿ ಭಟ್ರ 'ದನ ಕಾಯೋನು']


ಅಷ್ಟಕ್ಕೂ ನಿರ್ಮಾಪಕ ಕಮ್ ವಿತರಕ ಕನಕಪುರ ಶ್ರೀನಿವಾಸ್ ಅವರಿಗೆ ಒದಗಿದ ಸಮಸ್ಯೆ ಏನು ಅಂತಾ ನಾವು ಹೇಳ್ತೀವಿ ನೋಡೋಕೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..


'ಬಾಹುಬಲಿ', 'ಭಾಯ್ ಜಾನ್' ಗೆಲ್ಲಿಸಿದ್ರು

ಚಿತ್ರ ನಿರ್ಮಾಪಕ ಕಮ್ ವಿತರಕ ಕನಕಪುರ ಶ್ರೀನಿವಾಸ್ ಅವರು ಒಂದರ ಮೇಲೊಂದು ಸಿನಿಮಾ ಮಾಡಲು ಮುಂದಾಗಿದ್ದರು. ಜೊತೆಗೆ ಅನೇಕ ಚಿತ್ರಗಳ ವಿತರಣಾ ಹಕ್ಕನ್ನು ತೆಗೆದುಕೊಂಡರು. ವಿತರಣೆ ಮಾಡಿದ ಚಿತ್ರಗಳಲ್ಲಿ 'ಬಾಹುಬಲಿ' ಮತ್ತು 'ಭಜರಂಗಿ ಭಾಯ್ ಜಾನ್', ಶ್ರೀನಿವಾಸ್ ಅವರಿಗೆ ಕೋಟಿ ಕೋಟಿ ತಂದಿತ್ತವು.


ಶ್ರೀನಿವಾಸ್ ನಸೀಬು ಕೆಟ್ತು

'ಬಾಹುಬಲಿ', 'ಭಜರಂಗಿ ಭಾಯ್ ಜಾನ್', ಕೋಟಿ ಕೋಟಿ ಲಾಭ ತಂದುಕೊಟ್ಟರೆ, ಶ್ರೀನಿವಾಸ್ ಅವರು ವಿತರಿಸಿದ, ತೆಲುಗಿನ ಅಕ್ಕಿನೇನಿ ಕುಡಿ, ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ ಅಭಿನಯದ 'ಅಖಿಲ್' ಸಿನಿಮಾ ಅಟ್ಟರ್ ಫ್ಲಾಪ್ ಆಗಿ ಕನಕಪುರ ಶ್ರೀನಿವಾಸ್ ಅವರಿಗೆ ನಷ್ಟ ಉಂಟಾಯಿತು.


ಭಟ್ಟರ 'ದನ ಕಾಯೋನು'

ಇದೀಗ ಯೋಗರಾಜ್ ಭಟ್ಟರ 'ದನ ಕಾಯೋನು' ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಹೊತ್ತುಕೊಂಡಿರುವುದರಿಂದ ಸಿನಿಮಾ ಬಿಡುಗಡೆ ಆಗಲು ರೆಡಿ ಇದ್ದರೂ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ನಟಿ ಪ್ರಿಯಾಮಣಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.


ಒಡೆಯರ್ 'ಜೆಸ್ಸಿ'

ನಿರ್ದೇಶಕ ಪವನ್ ಒಡೆಯರ್ ಅವರ 'ಜೆಸ್ಸಿ' ಸಿನಿಮಾವನ್ನು ಕೂಡ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ನಿರ್ಮಾಣ ಮಾಡಿದ್ದು, ಅದೂ ಅರ್ಧಕ್ಕೆ ನಿಂತಿದೆ. ನಟಿ ಪಾರುಲ್ ಯಾದವ್ ಮತ್ತು 'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ್ ಅವರು ಕಾಣಿಸಿಕೊಂಡಿರುವ 'ಜೆಸ್ಸಿ' ಸಿನಿಮಾ ಬಿಡುಗಡೆಗೆ ತಯಾರಾಗಿ ನಿಂತಿದೆ.[ಊಟಿಯ ಲವ್ಲಿ ವಾತಾವರಣದಲ್ಲಿ 'ಜೆಸ್ಸಿ' ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯ]


ಧ್ರುವ ಅವರ 'ಭರ್ಜರಿ'

'ಅದ್ಧೂರಿ' ಮತ್ತು 'ಬಹದ್ದೂರ್' ಸಿನಿಮಾ ಮಾಡಿದ ನಟ ಧ್ರುವ ಸರ್ಜಾ ಅವರ 'ಭರ್ಜರಿ' ಸಿನಿಮಾ ಸದ್ಯಕ್ಕೆ ಶೂಟಿಂಗ್ ಹಂತದಲ್ಲಿದ್ದು, ಈ ಚಿತ್ರಕ್ಕೂ ಕನಕಪುರ ಶ್ರೀನಿವಾಸ್ ಅವರೇ ಬಂಡವಾಳ ಹೂಡುತ್ತಿದ್ದಾರೆ.


ಚಿತ್ರ ನಿರ್ಮಾಪಕ ಕನಕಪುರ ಶ್ರೀನಿವಾಸ್

ಸದ್ಯಕ್ಕೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಸುಮಾರು 10 ಕೋಟಿ ನಷ್ಟ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕನಕಪುರ ಶ್ರೀನಿವಾಸ್ ಅವರು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿದರೆ 'ದನ ಕಾಯೋನು' ಮತ್ತು 'ಜೆಸ್ಸಿ' ಸಿನಿಮಾಗಳು ತೆರೆ ಕಾಣುತ್ತವೆ.


English summary
Producer Kanakapura Srinivas is very much upset these days. The reason for that is none other than the current finance problem for kannada film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada