»   » ಮತ್ತೊಮ್ಮೆ ಮೋಹನ್ ಲಾಲ್; ಮುನಿರತ್ನ ದರ್ಭಾರ್

ಮತ್ತೊಮ್ಮೆ ಮೋಹನ್ ಲಾಲ್; ಮುನಿರತ್ನ ದರ್ಭಾರ್

Posted By:
Subscribe to Filmibeat Kannada
ಕಠಾರಿವೀರ ಸುರಸುಂದರಾಂಗಿ ಚಿತ್ರವನ್ನು ನಿರ್ಮಿಸಿ, ಸಾಕಷ್ಟು ವಾದ-ವಿವಾದಗಳ ಮೂಲಕ ಪ್ರಚಾರ ಕೊಟ್ಟು ಬಿಡುಗಡೆ ಮಾಡಿ ಈಗ ಗೆಲುವಿನ ನಗೆ ಬೀರುತ್ತಿರುವ ನಿರ್ಮಾಪಕ ಮುನಿರತ್ನ, ಮತ್ತೊಂದು ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಅವರು ತಮ್ಮ ಚಿತ್ರಕ್ಕೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಹಾಟ್ ಬೆಡಗಿ ನಮಿತಾ ಹಾಗೂ ರಂಗಾಯಣ ರಘು ಅವರೇ ಬೇಕು ಎಂದಿದ್ದಾರೆ.

ಈ ಮೂವರು ತಮ್ಮ ಚಿತ್ರದಲ್ಲಿ ಇರಲೇಬೇಕು ಎಂದು ನಿರ್ಧರಿಸಿರುವ ಮುನಿರತ್ನ, ಮಿಕ್ಕಂತೆ ನಾಯಕ, ನಾಯಕಿ ಹಾಗೂ ತಂತ್ರಜ್ಞರ ಬಳಗದ ಗುಟ್ಟನ್ನು ಮಾಧ್ಯಮಕ್ಕೆ ಬಿಟ್ಟುಕೊಟ್ಟಿಲ್ಲ. ಮುನಿರತ್ನ ನಿರ್ಮಾಣದ ಚಿತ್ರ 'ಕಠಾರಿವೀರ ಸುರಸುಂದರಾಂಗಿ', ಯಶಸ್ವಿ 50 ದಿನಗಳನ್ನು ಪೂರೈಸಿ ಮುಂದಕ್ಕೆ ಹೆಜ್ಜೆಯಿಟ್ಟಿದೆ. ಈ ಚಿತ್ರವು 50 ದಿನಗಳಲ್ಲೇ ರು. 10 ಕೋಟಿಗಿಂತಲೂ ಹೆಚ್ಚು ಹಣ ವಾಪಸ್ ಪಡೆದಿದ್ದಾಗಿ ಮುನಿರತ್ನ ಹೇಳಿದ್ದಾರೆ.

ಬಿಬಿಎಂಪಿ ಕೌನ್ಸಿಲರ್ ಕೂಡ ಆಗಿರುವ ಮುನಿರತ್ನ ಅವರು ನಿರ್ಮಾಪಕರ ಸಂಘದ ಅಧ್ಯಕ್ಷರೂ ಹೌದು. ರಾಜಕೀಯ ಹಿನ್ನಲೆಯಿರುವ ಮುನಿರತ್ನರು ಸದ್ಯ ಕಾಂಗ್ರೆಸ್ ಪಕ್ಷದ ಮೆಂಬರ್ ಕೂಡ ಆಗಿದ್ದು ಮುಂಬರುವ ತಮ್ಮ ಚಿತ್ರದ ಕಥಾವಸ್ತು 'ರಾಜಕೀಯ' ಎಂದಿದ್ದಾರೆ. ಮುನಿರತ್ನರ ಚಿತ್ರದ ಕಥೆ 'ರಾಜಕೀಯ ಸಬ್ಜೆಕ್ಟ್' ಒಳಗೊಂಡಿರುವುದು ಸಾಕಷ್ಟು ಜನರ ಕುತೂಹಲ ಕೆರಳಿಸಿದೆ. ಚಿತ್ರ ಯಾವಾಗ ಪ್ರಾರಂಭ ಎಂಬ ಮಾಹಿತಿ ಸದ್ಯಕ್ಕಿಲ್ಲ.

ಮುನಿರತ್ನ ಏನೇ ಮಾಡಿದರೂ 'ಸ್ಪೆಷಲ್' ಆಗಿರುತ್ತೆ ಎಂಬುದು ಸದ್ಯಕ್ಕೆ ಚಾಲ್ತಿಯಲ್ಲಿರುವ ಮಾತು. ಅದಕ್ಕೆ ತಕ್ಕಂತೆ, ಮೋಹಲ್ ಲಾಲ್, ನಮಿತಾ ಹಾಗೂ ರಂಗಾಯಣ ರಘು ಕಾಂಬಿನೇಷನ್ ಈಗಾಗಲೇ ಸಿದ್ಧ ಮಾಡಿಕೊಂಡಿರುವ ಮುನಿರತ್ನ, ನಾಯಕ-ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಬಹುದೆಂಬ ಕುತೂಹಲ ಈಗ ಎಲ್ಲರಲ್ಲಿದೆ. ಆಮೇಲೆ ಮುನಿರತ್ನ ಮಾಡಬಹುದಾದ ಪ್ರಚಾರಕ್ಕೆ ಈಗಲೇ ಗಾಂಧಿನಗರ ಬೆಚ್ಚಿಬಿದ್ದಿದೆ. (ಒನ್ ಇಂಡಿಯಾ ಕನ್ನಡ)

English summary
Producer Munirathan Decided to produce the movie, which will be includes Malayalam Super Star Mohanlal, Hot Actress Namitha and Ranghayana Raghu starer. For his Upcoming Project, he wants these star-cast. His released Katariveera Surasundarangi recorded Success in Box Office. 
 
Please Wait while comments are loading...