»   » 'ಕುರುಕ್ಷೇತ್ರ' ತೋರಿಸಲು ಮುನಿರತ್ನ ಹಾಕುತ್ತಿರುವ ಬಂಡವಾಳ ಎಷ್ಟು..?

'ಕುರುಕ್ಷೇತ್ರ' ತೋರಿಸಲು ಮುನಿರತ್ನ ಹಾಕುತ್ತಿರುವ ಬಂಡವಾಳ ಎಷ್ಟು..?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 'ಕುರುಕ್ಷೇತ್ರ' ಸಿನಿಮಾ ಸಖತ್ ಹೈಪ್ ಸೃಷ್ಟಿ ಮಾಡಿದೆ. ಅದಕ್ಕೆ ಮುಖ್ಯ ಕಾರಣ ಅಂದರೆ ಸಿನಿಮಾದ ಬಜೆಟ್. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಜೆಟ್ ಎಷ್ಟು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

'ಕುರುಕ್ಷೇತ್ರ'ದಲ್ಲಿ ಕಾಣಿಸದ ಕನ್ನಡದ ಸ್ಟಾರ್ ನಟರು: ಅಸಲಿ ಕಾರಣ ಕೊಟ್ಟ ಮುನಿರತ್ನ!

ಸಾಮಾನ್ಯವಾಗಿ ಈ ರೀತಿಯ ಪೌರಾಣಿಕ ಸಿನಿಮಾಗಳಿಗೆ ಹೆಚ್ಚು ಬಂಡವಾಳ ಬೇಕಾಗುತ್ತದೆ. ಅದೇ ರೀತಿ ಈ ಹಿಂದೆ 'ಕುರುಕ್ಷೇತ್ರ' ಸಿನಿಮಾದ ಬಜೆಟ್ 50 ರಿಂದ 60 ಕೋಟಿ ಆಗಲಿದೆ ಎಂದು ಸುದ್ದಿ ಹರಿದಾಡಿತ್ತು.

Producer Munirathna spoke about 'Kurukshetra' budget

'ಕುರುಕ್ಷೇತ್ರ' ಸಿನಿಮಾದ ಬಜೆಟ್ ಬಗ್ಗೆ ಸದ್ಯ ನಿರ್ಮಾಪಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ''ಇದು ಅದ್ದೂರಿ ಸಿನಿಮಾ. ಸಿನಿಮಾಗೆ ಎಷ್ಟು ಬಜೆಟ್ ಬೇಕೋ ಅದನ್ನು ಒದಗಿಸುವಂತಹ ಕೆಲಸ ನಾನು ಮಾಡಿದ್ದೇನೆ.'' ಅಂತ ಹೇಳಿ ಚಿತ್ರದ ಬಜೆಟ್ ಮೊತ್ತವನ್ನು ಗುಪ್ತವಾಗಿಯೇ ಇಟ್ಟಿದ್ದಾರೆ.

'ಕುರುಕ್ಷೇತ್ರ'ಕ್ಕೆ ಅದ್ಧೂರಿ ಚಾಲನೆ: ಎಲ್ಲ ಊಹಾಪೋಹಗಳಿಗೆ ಸಿಕ್ತು ಉತ್ತರ

ಅಂದಹಾಗೆ, 'ಕುರುಕ್ಷೇತ್ರ' ಚಿತ್ರದ ಬಜೆಟ್ ಮೊತ್ತ ಸರಿಯಾಗಿ ತಿಳಿಯದಿದ್ದರೂ ಕನ್ನಡ ಸಿನಿಮಾರಂಗದಲ್ಲಿಯೇ ಇದು ಬಿಗೆಸ್ಟ್ ಬಜೆಟ್ ಸಿನಿಮಾ ಆಗಿರುವುದಂತೂ ನಿಜ.

English summary
Producer Munirathna spoke about 'Kurukshetra' movie budget

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada