»   » ದರ್ಶನ್ ದರ್ಬಾರ್ ನಲ್ಲಿ 'ಕುರುಕ್ಷೇತ್ರ ಪಾರ್ಟ್ 2' ಬರುತ್ತಾ..?

ದರ್ಶನ್ ದರ್ಬಾರ್ ನಲ್ಲಿ 'ಕುರುಕ್ಷೇತ್ರ ಪಾರ್ಟ್ 2' ಬರುತ್ತಾ..?

Posted By:
Subscribe to Filmibeat Kannada

'ಕುರುಕ್ಷೇತ್ರ' ಸಿನಿಮಾಗೆ ನಿನ್ನೆ(ಆಗಸ್ಟ್ 6) ತಾನೇ ಚಾಲನೆ ಸಿಕ್ಕಿದೆ. ಅಷ್ಟರಲ್ಲಾಗಲೇ, 'ಕುರುಕ್ಷೇತ್ರ ಪಾರ್ಟ್ 2' ಸಿನಿಮಾ ಕೂಡ ಬರುತ್ತದೆಯಾ ಎಂಬ ಅನುಮಾನ ಮೂಡಿದೆ.

'ಕುರುಕ್ಷೇತ್ರ'ದಲ್ಲಿ ಕಾಣಿಸದ ಕನ್ನಡದ ಸ್ಟಾರ್ ನಟರು: ಅಸಲಿ ಕಾರಣ ಕೊಟ್ಟ ಮುನಿರತ್ನ!

ಸಾಮಾನ್ಯವಾಗಿಯೇ ಈ ರೀತಿಯ ದೊಡ್ಡ ಸಿನಿಮಾಗಳು ಬರುವಾಗ ಅದರ ಮುಂದಿನ ಭಾಗ ಕೂಡ ಬರುತ್ತದೆಯಾ ಎನ್ನುವ ಪ್ರಶ್ನೆ ಇರುತ್ತದೆ. ಅದೇ ರೀತಿ 'ಕುರುಕ್ಷೇತ್ರ' ಚಿತ್ರದ ಮುಂದಿನ ಭಾಗವಾಗಿ 'ಕುರುಕ್ಷೇತ್ರ ಪಾರ್ಟ್ 2' ಚಿತ್ರ ಬರುತ್ತದೆಯಾ ಎಂಬ ಕುತೂಹಲ ಈಗ ಹುಟ್ಟಿದೆ. ಅದಕ್ಕೆ ಕಾರಣ ಆಗಿರುವುದು ನಿರ್ಮಾಪಕ ನಿರ್ಮಾಪಕ ಮುನಿರತ್ನ ಅವರ ಮಾತು.

Producer Munirathna spoke about 'Kurukshetra Part 2' Movie.

'ಕುರುಕ್ಷೇತ್ರ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ 'ಕುರುಕ್ಷೇತ್ರ ಪಾರ್ಟ್ 2' ಸಿನಿಮಾ ಬರುತ್ತಾ ಎಂಬ ಪ್ರಶ್ನೆಗೆ ಮುನಿರತ್ನ ಉತ್ತರಿಸಿದರು. ''ನಾವು ಇನ್ನೂ ಪಾರ್ಟ್ 2 ಬಗ್ಗೆ ಯೋಚನೆ ಮಾಡಿಲ್ಲ.. ಆದರೆ ಮುಂದೆ 'ಕುರುಕ್ಷೇತ್ರ ಪಾರ್ಟ್ 2' ಸಿನಿಮಾ ಬಂದರೂ ಬರಬಹುದು'' ಎಂದು ನಿಧಾನವಾಗಿ ಹೇಳಿ ಎಲ್ಲರ ತಲೆಗೆ ಹುಳ ಬಿಟ್ಟರು.

'ಕುರುಕ್ಷೇತ್ರ'ಕ್ಕೆ ಅದ್ಧೂರಿ ಚಾಲನೆ: ಎಲ್ಲ ಊಹಾಪೋಹಗಳಿಗೆ ಸಿಕ್ತು ಉತ್ತರ

ಮುನಿರತ್ನ ಸದ್ಯ 'ಕುರುಕ್ಷೇತ್ರ ಪಾರ್ಟ್ 2' ಬಗ್ಗೆ ಬಹಿರಂಗವಾಗಿ ಹೇಳದಿದ್ದರು, ಚಿಕ್ಕದಾಗಿ ಒಂದು ಸುಳಿವು ನೀಡಿದ್ದಾರೆ. ಆದರೆ ಮುಂದೆ 'ಕುರುಕ್ಷೇತ್ರ ಪಾರ್ಟ್ 2' ಸಿನಿಮಾ ಬರುತ್ತಾ.. ಇಲ್ವಾ.. ಎಂಬ ಗೊಂದಲವನ್ನು ಅವರೇ ನಿವಾರಿಸಬೇಕಿದೆ.

English summary
Producer Munirathna spoke about 'Kurukshetra Part 2' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada