»   » ಗೋಲ್ಡನ್ ಸ್ಟಾರ್ ಗಣಿಗೆ 'ಭಲೇ ಭಲೇ' ಎಂದ ರಾಕ್ ಲೈನ್!

ಗೋಲ್ಡನ್ ಸ್ಟಾರ್ ಗಣಿಗೆ 'ಭಲೇ ಭಲೇ' ಎಂದ ರಾಕ್ ಲೈನ್!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ತಮಿಳು-ತೆಲುಗು ಹಾಗೂ ಹಿಂದಿ ಭಾಷೆಗಳಲ್ಲೂ ತಮ್ಮ ಸಕ್ರೀಯ ಪಾಲ್ಗೊಳ್ಳುವಿಕೆಯನ್ನು ಕೈಗೊಂಡಿರುವವರು ಅಂದರೆ ಅದು ನಮ್ಮ ಕನ್ನಡದ ನಿರ್ಮಾಪಕರು-ನಟರು-ನಿರ್ದೇಶಕರು ಆಗಿರುವ ರಾಕ್ ಲೈನ್ ವೆಂಕಟೇಶ್ ಅವರು.

ಹಿಂದಿ ಚಿತ್ರ 'ಭಜರಂಗಿ ಭಾಯ್ ಜಾನ್' ಗೆ ಬಂಡವಾಳ ಸುರಿದು, ಹಾಕಿದ ಅಷ್ಟೂ ಹಣ ವಾಪಸ್‌ ಬಂದ ಖುಷಿಯಲ್ಲಿರುವ ರಾಕ್ ಲೈನ್ ವೆಂಕಿ ಅವರು ಮತ್ತೊಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.

Producer Rockline Venkatesh's 'Bhale Bhale' with Golden Star Ganesh

ಅಂದಹಾಗೆ ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಖ್ಯಾತಿ ಗಳಿಸಿರುವ ನಿರ್ಮಾಪಕರು ಮತ್ತೆ ಕನ್ನಡದ ತಮ್ಮ ತಾಯ್ನಾಡಿಗೆ ಮರಳಿ ಬಂದಿದ್ದಾರೆ. ಇದೀಗ ತೆಲುಗಿನ ಹಿಟ್ ಚಿತ್ರ 'ಭಲೇ ಭಲೇ ಮಗಾಡೀವೋಯ್' ರಿಮೇಕ್ ರೈಟ್ಸ್ ಖರೀದಿ ಮಾಡಿರುವ ರಾಕ್ ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ಕನ್ನಡದಲ್ಲಿ ತರುವ ನಿರ್ಧಾರ ಮಾಡಿದ್ದಾರೆ.[ರಾಕ್ ಲೈನ್ ನಿರ್ಮಾಣದಲ್ಲಿ ರೋಹಿತ್ ಶೆಟ್ಟಿ ಹಿಂದಿ ಚಿತ್ರ]

ತೆಲುಗು ನಿರ್ದೇಶಕ ಮಾರುತಿ ದಾಸರಿ ಅವರು ಆಕ್ಷನ್-ಕಟ್ ಹೇಳಿದ್ದ 'ಭಲೇ ಭಲೇ ಮಗಾಡೀವೋಯ್', ಚಿತ್ರ ಈ ವರ್ಷ ಟಾಲಿವುಡ್ ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದೆ.

ಇದೀಗ ಇದೇ ಚಿತ್ರವನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಕನ್ನಡಕ್ಕೆ ತರಲು ನಿರ್ಧರಿಸಿದ್ದಾರೆ. ತೆಲುಗಿನಲ್ಲಿ ನಟ ನಾನಿ ಹಾಗೂ ನಟಿ ಲಾವಣ್ಯ ತ್ರಿಪಾಟಿ ಅವರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.[ಕನ್ನಡ ಚಿತ್ರರಂಗದ ಸೀಕ್ರೆಟ್ ಬಿಚ್ಚಿಟ್ಟ ರಾಕ್ ಲೈನ್.!]

ಇದೀಗ ಅಂದುಕೊಂಡಂತೆ ಎಲ್ಲಾ ನಡೆದರೆ ತೆಲುಗಿನಲ್ಲಿ ನಾನಿ ಮಾಡಿದ ಪಾತ್ರವನ್ನು ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಾಡಲಿದ್ದಾರೆ. ಇದಕ್ಕಾಗಿ ನಟ ಗಣೇಶ್ ಅವರ ಜೊತೆ ಚಿತ್ರದ ಬಗ್ಗೆ ಮಾತುಕತೆಗಳು ನಡೆದಿವೆ.

Producer Rockline Venkatesh's 'Bhale Bhale' with Golden Star Ganesh

ಸದ್ಯಕ್ಕೆ ಎಲ್ಲವೂ ಮಾತುಕತೆಯ ಹಂತದಲ್ಲಿರುವುದರಿಂದ, ಇನ್ನೇನು 10-15 ದಿನಗಳೊಳಗಾಗಿ ಎಲ್ಲವೂ ಅಂತಿಮಗೊಳ್ಳುತ್ತವೆ ಎಂದು ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ.[ರಜನಿಕಾಂತ್ ಬಗ್ಗೆ ರಾಕ್ ಲೈನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]

ಇನ್ನು ಈಗಾಗಲೇ ಸುಮಾರು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು 'ಪಟಾಕಿ' ಹಾಗೂ ನಿರ್ದೇಶಕ ಶಶಾಂಕ್ ಅವರ ಜೊತೆ 'ಮುಂಗಾರು ಮಳೆ ಭಾಗ 2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಒಟ್ನಲ್ಲಿ ಗಣೇಶ್ ಅವರು ಫ್ರೀ ಆದರೆ ಹಾಗೂ ಎಲ್ಲವೂ ಸಾಂಗವಾಗಿ ನೆರವೇರಿದರೆ ಕನ್ನಡಕ್ಕೆ ಮತ್ತೊಂದು ರಿಮೇಕ್ ಚಿತ್ರ ಕಾಲಿಡುವುದರಲ್ಲಿ ಯಾವುದೇ ಅನುಮಾನನೇ ಇಲ್ಲ.

English summary
Producer Rockline Venkatesh, who established his name in Bollywood, is basking in the success of his debut Hindi project 'Bajrangi Bhaijan', starring Salman Khan. He is now back in Sandalwood, and this time he has chosen to remake of Actor Nani's Telugu movie 'Bhale Bhale Magadivoy', a psychological romantic comedy, in Kannada.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more