»   » ದ್ವಾರಕೀಶ್ ಪ್ರೊಡಕ್ಷನ್ಸ್ ನಲ್ಲಿ ಅಜೇಯ್ ರಾವ್ ಹೊಸ ಚಿತ್ರ.?

ದ್ವಾರಕೀಶ್ ಪ್ರೊಡಕ್ಷನ್ಸ್ ನಲ್ಲಿ ಅಜೇಯ್ ರಾವ್ ಹೊಸ ಚಿತ್ರ.?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಕೃಷ್ಣ ಅಂತಾನೇ ಖ್ಯಾತಿ ಗಳಿಸಿರುವ ನಟ ಅಜೇಯ್ ರಾವ್ ಅವರು 'ಕೃಷ್ಣ ರುಕ್ಕು' ಚಿತ್ರದ ನಂತರ 'ಜಾನ್ ಜಾನಿ ಜನಾರ್ಧನ' ಚಿತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ತದನಂತರ 'ಮಳೆ' ಚಿತ್ರದ ಖ್ಯಾತಿಯ ನಿರ್ದೇಶಕ ತೇಜಸ್ ಅವರ ಹೊಸ ಮುಂದಿನ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲು ಉತ್ಸಾಹ ತೋರಿದ್ದರು. ಇದೆಲ್ಲಾ ಹಳೇ ಕಥೆ, ಇದೀಗ ಹಾಟ್ ನ್ಯೂಸ್ ಏನಪ್ಪಾ ಅಂದ್ರೆ ಅಜೇಯ್ ರಾವ್ ಅವರು ಮತ್ತೊಂದು ಹೊಸ ಪ್ರಾಜೆಕ್ಟ್ ಗೆ ಓಕೆ ಎಂದಿದ್ದಾರೆ.[ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ]

Producer Yogish Dwarakish to produce Actor Ajay Rao's next film

ಹೌದು ಅಜೇಯ್ ರಾವ್ ಅವರು ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರ ಜೊತೆ ಹೊಸ ಪ್ರಾಜೆಕ್ಟ್ ಒಂದಕ್ಕೆ ಸಹಿ ಮಾಡಿದ್ದಾರೆ. ಈಗಾಗಲೇ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರು ನಟ ಅಜೇಯ್ ರಾವ್ ಅವರ ಜೊತೆ ಮಾತು-ಕತೆ ನಡೆಸಿದ್ದು, ಅಜೇಯ್ ಅವರು ನಟಿಸಲು ಒಪ್ಪಿಕೊಂಡಿದ್ದಾರೆ.

ಇನ್ನು ನಿರ್ದೇಶಕ ಹಾಗೂ ತಾಂತ್ರಿಕ ವರ್ಗ ಸೇರಿದಂತೆ ನಾಯಕಿ ನಟಿಯ ಆಯ್ಕೆಯು ಇನ್ನಷ್ಟೇ ಆಗಬೇಕಾಗಿದೆ. ಆದರೆ ಅಜೇಯ್ ರಾವ್ ಮತ್ತು ಯೋಗೀಶ್ ದ್ವಾರಕೀಶ್ ಅವರು ಹೊಸ ಚಿತ್ರದಲ್ಲಿ ಒಂದಾಗೋದು ಮಾತ್ರ ಪಕ್ಕಾ. ಈ ವರ್ಷಾಂತ್ಯದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.['ಕೃಷ್ಣ' ಅಜೇಯ್ ರಾವ್ ಮುಂದಿನ ಸಿನಿಮಾ ಯಾವುದು.?]

Producer Yogish Dwarakish to produce Actor Ajay Rao's next film

ಅಂದಹಾಗೆ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರು ಸದ್ಯಕ್ಕೆ 'ಚೌಕ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಅಜೇಯ್ ರಾವ್ ಅವರು 'ಜಾನ್ ಜಾನಿ ಜನಾರ್ಧನ' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಡು ಮುಗಿದ ನಂತರ ಅಜೇಯ್ ರಾವ್ ಮತ್ತು ಯೋಗೀಶ್ ಅವರು ಒಂದಾಗಲಿದ್ದು, ದ್ವಾರಕೀಶ್ ಪ್ರೊಡಕ್ಷನ್ಸ್ ನ 51ನೇ ಸಿನಿಮಾದಲ್ಲಿ ಅಜೇಯ್ ರಾವ್ ಮಿಂಚಲಿದ್ದಾರೆ.

ಸದ್ಯಕ್ಕೆ ಹೊರಬಿದ್ದಿರುವ ಖಾಸ್ ಖಬರ್ ಇಷ್ಟು. ಈ ಚಿತ್ರದ ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡ ಓದುತ್ತಿರಿ...

English summary
Kannada Producer Yogish Dwarakish of 'Aatagara' fame is all set to produce Kannada Actor Ajay Rao in his next movie. The film is yet to be titled and will go on floors soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada