»   » ಪುನೀತ್ ಜೊತೆ ಮತ್ತೊಮ್ಮೆ 'ಜಾಕಿ' ರಾಣಿ ಭಾವನಾ

ಪುನೀತ್ ಜೊತೆ ಮತ್ತೊಮ್ಮೆ 'ಜಾಕಿ' ರಾಣಿ ಭಾವನಾ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಯಶಸ್ವಿ ಜೋಡಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದೆ. 'ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರರಸಿಕರ ಕೆನ್ನೆ ಸವರಿದ್ದ ಮಲ್ಲು ಬೆಡಗಿ ಭಾವನಾ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜೊತೆಯಾಗಲಿದ್ದಾರೆ.

'ಅಣ್ಣಾಬಾಂಡ್' ಚಿತ್ರದ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹಿ ಹಾಕಿರುವ ಚಿತ್ರ 'ಯಾರೇ ಕೂಗಾಡಲಿ'. ಈ ಚಿತ್ರದ ನಿರ್ಮಾಪಕರು ಭಾವನಾರನ್ನು ಕರೆತರಲು ಮುಂದಾಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕುಂಟಾಬಿಲ್ಲೆಯಾಡುತ್ತಿದೆ.

ಚಿತ್ರದಲ್ಲಿ ಅಭಿನಯಿಸಲು ಭಾವನಾ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲವಂತೆ. ಆದರೆ ಪುನೀತ್ ಜೊತೆ ಮತ್ತೆಮ್ಮೊ ಅಭಿನಯಿಸಲು ಆಸಕ್ತಿ ತೋರಿಸಿದ್ದಾಗಿ ಸುದ್ದಿ ಇದೆ. ಈಗ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುವುದೇ ಭಾವನಾ ಮುಂದಿರುವ ದೊಡ್ಡ ಸಮಸ್ಯೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ತಿಂಗಳಲ್ಲಿ 'ಯಾರೇ ಕೂಗಾಡಲಿ' ಚಿತ್ರತಂಡವನ್ನು ಭಾವನಾ ಸೇರಿಕೊಳ್ಳಬಹುದು. ಈ ಚಿತ್ರದ ಮತ್ತೊಬ್ಬ ನಾಯಕ ನಟ ಯೋಗೇಶ್. ಚಿತ್ರದಲ್ಲಿ ನಮ್ಮ ಲೂಸ್ ಮಾದನಿಗೆ ಇನ್ನೂ ಜೋಡಿ ಸಿಕ್ಕಿಲ್ಲ. ಸೂಕ್ತ ಜೋಡಿಗಾಗಿ ನಿರ್ಮಾಪಕರು ಬಲೆ ಬೀಸಿದ್ದಾರೆ.

ತಮಿಳಿನ ಯಶಸ್ವಿ ಚಿತ್ರ 'ಪೊರಲಿ' ಚಿತ್ರದ ರೀಮೇಕ್ 'ಯಾರೇ ಕೂಗಾಡಲಿ'. ಸಮುಥಿರಕನಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವನ್ನು ರಾಘವೇಂದ್ರ ರಾಜ್ ಕುಮಾರ್ ನಿರ್ಮಿಸುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ, ಸುಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಇನ್ನು 'ಪೊರಲಿ' ಕತೆಯನ್ನು ಕೊಂಚ ಕೇಳುತ್ತಾ ಹಾಗೆಯೇ ಕಲ್ಪನಾ ವಿಲಾಸಕ್ಕೆ ಜಾರಿಕೊಳ್ಳಿ. ರಾತ್ರಿ ಧೋ ಎಂದು ಸುರಿಯುವ ಮಳೆಯ ಮೂಲಕ ಚಿತ್ರ ಆರಂಭವಾಗುತ್ತದೆ. ಚಿತ್ರದ ನಾಯಕ ನಟರು ಮೆಂಟಲ್ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಓಡಿಬರುತ್ತಾರೆ.

ಪ್ರಾಮಾಣಿಕ ಹಾಗೂ ಪರೋಪಕಾರ ಬುದ್ಧಿಯಿಂದಾಗಿ ಶೀಘ್ರದಲ್ಲೇ ಇವರು ಜನರ ಪ್ರೀತಿಗೆ ಪಾತ್ರರಾಗುತ್ತಾರೆ. ಏತನ್ಮಧ್ಯೆ ಹುಡುಗಿಯೊಬ್ಬಳ ರಂಗಪ್ರವೇಶವಾಗುತ್ತದೆ. ಹುಡುಗಿಗೆ ಇವರಿಬ್ಬರನ್ನು ತಪ್ಪಾಗಿ ಅರ್ಥಮಾಡಿಕೊಂಡಿರುತ್ತಾಳೆ. ರೀಲು ತಿರುಗುತ್ತಾ ತಿರುಗುತ್ತಾ ಹೋದಂತೆ ನಾಯಕನ ಮೇಲಿನ ಆಕೆ ಅಭಿಪ್ರಾಯ ಬದಲಾಗುತ್ತದೆ.

ಕ್ಷಣಗಳು ಕಳೆದಂತೆ ಇಬ್ಬರ ನಡುವೆ ಪ್ರೇಮ ಚಿಗುರುತ್ತದೆ. ಚಿತ್ರದ ಮೊದಲಾರ್ಧದಲ್ಲಿ ಒಂದು ಟ್ವಿಸ್ಟ್. ವಿರಾಮದ ಬಳಿಕ ಮತ್ತೊಂದು ತಿರುವುಪಡೆದುಕೊಳ್ಳುತ್ತದೆ. ಪ್ರೇಕ್ಷಕರಿಗೆ ಎರಡು ಚಿತ್ರಗಳನ್ನು ನೋಡಿದ ಅನುಭವವಾಗುತ್ತದೆ. ಮೊದಲರ್ಧ ಒಂದು ಚಿತ್ರವಾದರೆ ದ್ವಿತೀಯಾರ್ಧ ಮತ್ತೊಂದು ಚಿತ್ರದಂತೆ ಭಾಸವಾಗುತ್ತದೆ. ಇದಿಷ್ಟು 'ಪೊರಾಲಿ' ಚಿತ್ರದ ಕಥಾಹಂದರ. (ಒನ್ ಇಂಡಿಯಾ ಕನ್ನಡ)

English summary
Energetic Puneet Rajkumar and stunning Bhavana's combo had worked well in Suri's Jackie. Considering it, now the makers of forthcoming Yaare Koogadali have approached the Mallu girl to play the female lead, who is likely to give nod to act with him again.
Please Wait while comments are loading...