»   » ಪವರ್ ಸ್ಟಾರ್ ಸಿನಿಮಾ 'ಕೆಂಡಸಂಪಿಗೆ' ಶೂಟಿಂಗ್?

ಪವರ್ ಸ್ಟಾರ್ ಸಿನಿಮಾ 'ಕೆಂಡಸಂಪಿಗೆ' ಶೂಟಿಂಗ್?

By: ಜೀವನರಸಿಕ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ಯಾಕೋ ಸ್ಯಾಂಡಲ್ ವುಡ್ ಕಿಂಗ್ ಡಾ.ಶಿವರಾಜ್ ಕುಮಾರ್ ತರಹ ಒಂದೇ ಸಾರಿ ಐದಾರು ಸಿನಿಮಾಗಳಲ್ಲಿ ಬಿಜಿಯಾಗ್ತಿದ್ದಾರೆ. ಈಗ ಪುನೀತ್ ಅಭಿನಯದ ಎರಡು ಸಿನಿಮಾಗಳು ರೆಡಿ ಇವೆ. ಇನ್ನೂ ಮೂರು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ.

ಆದರೆ ಅಚ್ಚರಿಯ ವಿಷಯ ಏನೆಂದರೆ ಪುನೀತ್ ಅವರ ಮತ್ತೊಂದು ಸಿನಿಮಾ ಶೂಟಿಂಗ್ ಸದ್ದಿಲ್ಲದಂತೆ ನಡೀತಿದೆ ಎಂಬುದು. 'ದೂಕುಡು' ರೀಮೇಕ್ ಪವರ್ ಸ್ಟಾರ್ ಸಿನಿಮಾ ಜುಲೈ ಕೊನೆಯಲ್ಲಿ ಅಥವಾ ಆಗಸ್ಟ್ ಮೊದಲಲ್ಲಿ ತೆರೆಗೆ ಬರುತ್ತೆ. [ಸೂರಿ, ಪುನೀತ್ ಸಂಗಮದ 'ದೊಡ್ಮನೆ ಹುಡುಗ' ಶುರು]


ಅದಾದ ಒಂದಷ್ಟು ದಿನಗಳಲ್ಲಿ ಕಮರ್ಷಿಯಲ್ ಅಲ್ಲದಿದ್ರೂ ವಿಭಿನ್ನ ನಿರೀಕ್ಷೆ ಮೂಡಿಸಿರೋ ಪುನೀತ್ ಹಾಗೂ ಮೋಹನ್ ಲಾಲ್ ಅಭಿನಯದ 'ಮೈತ್ರಿ' ಸಿನಿಮಾ ಬರಲಿದೆ. ಈ ಎರಡು ಸಿನಿಮಾಗಳ ನಂತರ 'ರಣವಿಕ್ರಮ' ತೆರೆಗೆ ಬರುತ್ತೆ.

'ರಣವಿಕ್ರಮ' ನಂತರ 'ದೊಡ್ಮನೆ ಹುಡುಗ' ಸಿನಿಮಾ ಶೂಟಿಂಗ್ ಶುರುವಾಗುತ್ತೆ. ಸೂರಿಯ ದೊಡ್ಮನೆ ಹುಡುಗ ಚಿತ್ರದ ನಂತರ 'ಉಗ್ರಂ' ನಿರ್ದೇಶಕ ಪ್ರಶಾಂತ್ ನೀಲ್ ಅಭಿನಯದ 'ಆಹ್ವಾನ' ಚಿತ್ರದಲ್ಲಿ ಅಭಿನಯಿಸೋಕೆ ಒಪ್ಪಿಗೆ ನೀಡಿದ್ದಾರೆ.

ಆದರೆ 'ಕೆಂಡಸಂಪಿಗೆ' ಸಿನಿಮಾದ ಶೂಟಿಂಗನ್ನು ಮೈಸೂರಿನಲ್ಲಿ ಸ್ವಲ್ಪ ದಿನಗಳ ಕಾಲ ಪುನೀತ್ ನಡೆಸಿದ್ದಾರೆ ಎನ್ನುತ್ತವೆ ಮೂಲಗಳು. ಹೀಗೊಂದು ಸಿನಿಮಾ ಯಾರಿಗೂ ಗೊತ್ತಿಲ್ಲದೆ ನಡೀತಿದೆಯಂತೆ ಹೌದಾ? ಪುನೀತ್ ಅವರೇ ಹೇಳಬೇಕಷ್ಟೆ. ಅಂದಹಾಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ದುನಿಯಾ ಸೂರಿ.

English summary
The Grapevine has it that Sandalwood Power Star Puneeth Rajkumar's upcoming movie 'Kendasampige' shooting is going in Mysore silently. The movie is directed by Duniya Soori. It is a Soori's 7th directional movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada