»   » ಪುನೀತ್ ರಾಜ್ ಕುಮಾರ್ ಮತ್ತು ಧನುಷ್! ಏನಿದು 'ಮೈತ್ರಿ'?!

ಪುನೀತ್ ರಾಜ್ ಕುಮಾರ್ ಮತ್ತು ಧನುಷ್! ಏನಿದು 'ಮೈತ್ರಿ'?!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸುತ್ತಿರುವ 'ಮೈತ್ರಿ' ಸಿನಿಮಾ ನಾಳೆ ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಸ್ಯಾಂಡಲ್ ವುಡ್ ಮತ್ತು ಮಾಲಿವುಡ್ ಚಿತ್ರರಂಗದ ಇಬ್ಬರು ಸ್ಟಾರ್ ಗಳು ಒಂದಾಗಿರುವುದರಿಂದ ಚಿತ್ರಕ್ಕೆ 'ಮೈತ್ರಿ' ಅಂತ ಟೈಟಲ್ ಇಡಲಾಗಿದೆ.

ಆದರೀಗ, ನಾವು ಮಾತನಾಡುತ್ತಿರುವ 'ಮೈತ್ರಿ' ಬೇರೆ. ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಟಾಪ್ ಹೀರೋಗಳಿಬ್ಬರ 'ಮೈತ್ರಿ' ಒಂದೇ ಕ್ಯಾರಾವ್ಯಾನ್ ನಲ್ಲಾಗಿದೆ. ಯಾರವರು ಅಂತ ತಿಳಿದುಕೊಳ್ಳಬೇಕು ಅಂದ್ರೆ, ಮೊದಲು ಈ ಫೋಟೋ ನೋಡಿ....


ಯೆಸ್, ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಮತ್ತು ಸ್ಯಾಂಡಲ್ ವುಡ್ ನ ವರನಟ ಡಾ.ರಾಜ್ ಕುಮಾರ್ ಸುಪುತ್ರ ಪುನೀತ್ ರಾಜ್ ಕುಮಾರ್ 'ಮೈತ್ರಿ' ಆಗಿರುವ ಫೋಟೋ ಇದು.


Puneeth Rajkumar and Dhanush are snapped together

ಹಸಿರು ಬಣ್ಣದ ಸ್ಟ್ರೈಪ್ಸ್ ಇರುವ ಒಂದೇ ತರಹದ ಟಿ-ಶರ್ಟ್ ತೊಟ್ಟು ಅಕ್ಕಪಕ್ಕ ಕೂತು ಅಪ್ಪು ಮತ್ತು ಧನುಷ್ ಕ್ಲಿಕ್ ಮಾಡಿಸಿಕೊಂಡಿರುವ ಅಪರೂಪದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ['ಮೈತ್ರಿ' ಚಿತ್ರದ ನಿರ್ದೇಶಕ ಗಿರಿರಾಜ್ ವಿಶೇಷ ಸಂದರ್ಶನ]


ಇಬ್ಬರು ಸ್ಟಾರ್ ನಟರು ಒಂದಾಗಿರುವ ಈ ಫೋಟೋ, ಇರುವ ಕ್ಯಾರಾವ್ಯಾನ್ ನೋಡಿದ್ರೆ...ಇದು ಯಾವುದೋ ಶೂಟಿಂಗ್ ಸಂದರ್ಭದಲ್ಲಿ ಕ್ಲಿಕ್ ಆಗಿರುವುದು ಅಂತ ಅನಿಸುವುದು ಸಹಜ. ಹಾಗಂದ ಮಾತ್ರಕ್ಕೆ, ಪುನೀತ್ ಅಭಿನಯದ ಕನ್ನಡ ಚಿತ್ರದಲ್ಲಿ ಧನುಷ್ ನಟಿಸುತ್ತಿದ್ದಾರೆ. ಇಲ್ಲಾ ಕಾಲಿವುಡ್ಡಿಗೆ ಅಪ್ಪು ಹಾರಿದ್ದಾರೆ ಅಂತಲ್ಲ. [ಕನ್ನಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್]


ಪುನೀತ್ ಮತ್ತು ಧನುಷ್ ಇಬ್ಬರೂ 7UP ನ ಪ್ರಚಾರ ರಾಯಭಾರಿಗಳು. ಅದರ ಶೂಟಿಂಗ್ ಸ್ಪಾಟ್ ನಲ್ಲಿ ಒಂದೇ ಉಡುಗೆ ತೊಟ್ಟು ಇಬ್ಬರು ಫೋಟೋ ಹಿಡಿಸಿಕೊಂಡಿದ್ದಾರೆ ಅಷ್ಟೆ ಅನ್ನುತ್ತಿವೆ ಅಪ್ಪು ಆಪ್ತ ಮೂಲಗಳು.


ಈ 'ಮೈತ್ರಿ'ಯನ್ನ ಕಂಡು ಇಬ್ಬರ ಅಭಿಮಾನಿಗಳಂತೂ ದಿಲ್ ಖುಷ್ ಆಗಿದ್ದಾರೆ. ತೆರೆಮೇಲೂ ಇದೇ 'ಮೈತ್ರಿ' ಆದರೆ, ಯಾರು ಬೇಡ ಅಂತಾರೆ ಹೇಳಿ..!? (ಫಿಲ್ಮಿಬೀಟ್ ಕನ್ನಡ)

English summary
Actor Puneeth Rajkumar and Kollywood sensation Dhanush are snapped together. Take a look at the picture here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada