For Quick Alerts
  ALLOW NOTIFICATIONS  
  For Daily Alerts

  ಪುನೀತ್-ಪವನ್ ಸೇರ್ಕೊಂಡು ಮತ್ತೇನೋ ಮಾಡೋಕೆ ಹೊರಟಿದ್ದಾರೆ

  By Suneetha
  |

  'ಗೋವಿಂದಾಯ ನಮಃ' ನಿರ್ದೇಶಕ ಪವನ್ ಒಡೆಯರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ರಣ ವಿಕ್ರಮ' ಚಿತ್ರದ ಮೂಲಕ ಕಮಾಲ್ ಮಾಡಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು.

  'ರಣ ವಿಕ್ರಮ' ಚಿತ್ರ ಹಿಟ್ ಆಗಿದ್ದು ಮಾತ್ರವಲ್ಲದೇ, ಸಾಕಷ್ಟು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಸಿನಿಮಾ ಕ್ಲಿಕ್ ಆಯ್ತು ಅಂದಾಗ ಈ ಜೋಡಿ ಮತ್ತೆ ಹೊಸ ಸಿನಿಮಾದಲ್ಲಿ ಒಂದಾಗುತ್ತೆ ಅಂತ ಗಾಂಧಿನಗರದಲ್ಲಿ ಭಾರಿ ಸುದ್ದಿಯಾಯ್ತು.[ಚಿತ್ರ ವಿಮರ್ಶೆ: 'ರಣವಿಕ್ರಮ' ಪವನ್ ಇನ್ನೊಂದು ಗೂಗ್ಲಿ]

  ಆದರೆ ಆ ವಿಚಾರ ಬಂದಷ್ಟೇ ವೇಗವಾಗಿ ಮಾಯವಾಯ್ತು. ಇದೀಗ ಮತ್ತೆ ಆ 'ಅಂತೆ-ಕಂತೆ ಸುದ್ದಿಗೆ ಚಾಲನೆ ಸಿಕ್ಕಿದ್ದು, ಪುನೀತ್ ಮತ್ತು ಪವನ್ ಒಡೆಯರ್ ಅವರು ಮಗದೊಮ್ಮೆ ಒಂದಾಗೋದು ಪಕ್ಕಾ ಅಂತಿವೆ ಬಲ್ಲ ಮೂಲಗಳು.

  ಅಷ್ಟಕ್ಕೂ ಈ ಜೋಡಿ ಯಾವ ಚಿತ್ರದ ಮೂಲಕ?, ಯಾವಾಗ? ಅನ್ನೋದನ್ನು ತಿಳಿಯೋ ಕುತೂಹಲ ಇದ್ದಲ್ಲಿ ಮುಂದೆ ಓದಿ.....

  ಮತ್ತೆ ಒಂದಾದ 'ರಣ ವಿಕ್ರಮ' ಜೋಡಿ

  ಮತ್ತೆ ಒಂದಾದ 'ರಣ ವಿಕ್ರಮ' ಜೋಡಿ

  'ರಣ ವಿಕ್ರಮ' ಹಿಟ್ ಆಗಿದ್ದೇ ತಡ ಮತ್ತೆ ಈ ಜೋಡಿ ತೆರೆ ಮೇಲೆ ಕಮಾಲ್ ಮಾಡಲು ಸಜ್ಜಾಗಿದೆ ಎನ್ನಲಾಗುತ್ತಿದೆ. 'ರಣ ವಿಕ್ರಮ' ಚಿತ್ರದಲ್ಲಿ ಒಂದು ವಿಭಿನ್ನ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ, ಮುಂಬರುವ ಹೊಸ ಚಿತ್ರದಲ್ಲೂ ಒಂದೊಳ್ಳೆ ಕಥೆಯನ್ನು ತೆರೆಯ ಮೇಲೆ ತೋರಿಸಲಿದ್ದಾರಂತೆ.

  ಹೊಸ ಸಿನಿಮಾದ ಹೆಸರೇನು?

  ಹೊಸ ಸಿನಿಮಾದ ಹೆಸರೇನು?

  ಪುನೀತ್ ರಾಜ್ ಕುಮಾರ್ ಅವರಿಗಾಗಿ ಅಂತಾನೇ, ಪವನ್ ಒಡೆಯರ್ ಅವರು ಒಂದು ವಿಶಿಷ್ಟ ಕಥೆ ರಚಿಸಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಹೊಸ ಚಿತ್ರದ ಶೀರ್ಷಿಕೆ 'ವೀರ ಆಂಜನೇಯ ಪ್ರಸಾದ'(ವಿಎಪಿ). ಈ ವಿಭಿನ್ನ ಟೈಟಲ್ ನೋಡಿ ಪುನೀತ್ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರಂತೆ.

  ನಿರ್ಮಾಣ ಯಾರದ್ದು?

  ನಿರ್ಮಾಣ ಯಾರದ್ದು?

  ಪವನ್ ಒಡೆಯರ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ 'ಗೋವಿಂದಾಯ ನಮಃ' ನಿರ್ಮಾಣ ಮಾಡಿದ್ದ, ನಿರ್ಮಾಪಕ ಶಿರಿಷಾ ಲಗದಪತಿ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಲಿದ್ದಾರೆ. ಇನ್ನು ಈ ಚಿತ್ರದ ಬಗ್ಗೆ ಅಧೀಕೃತ ಹೇಳಿಕೆ ಹೊರಬೀಳಲಿಲ್ಲ, ಸದ್ಯಕ್ಕೆ ಅಂತೆ-ಕಂತೆ ಸುದ್ದಿ ಓಡಾಡುತ್ತಿದೆ. ಮುಂದಿನ ವಾರ ಮುಹೂರ್ತ ನೆರವೇರಿಸಿ, ಮುಂದಿನ ವರ್ಷ ಚಿತ್ರೀಕರಣ ನಡೆಸುವ ಪ್ಲ್ಯಾನ್ ಮಾಡಿದ್ದಾರೆ ನಿರ್ದೇಶಕ ಪವನ್ ಒಡೆಯರ್ ಅವರು. ಒಟ್ನಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಪುನೀತ್ ಅವರು 'ವಿಎಪಿ' ಆಗೋದು ಪಕ್ಕಾ.

  ಪುನೀತ್ 'ರಾಜಕುಮಾರ' ಸೆಟ್ ನಲ್ಲಿ ಬಿಜಿ

  ಪುನೀತ್ 'ರಾಜಕುಮಾರ' ಸೆಟ್ ನಲ್ಲಿ ಬಿಜಿ

  ಸದ್ಯಕ್ಕೆ ಪುನೀತ್ ರಾಜ್ ಕುಮಾರ್ ಅವರ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಇದಾದ ಮೇಲೆ ಪವನ್ ಒಡೆಯರ್ ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ.

  'ನಟರಾಜ ಸರ್ವಿಸ್' ತೆರೆಗೆ ಅಪ್ಪಳಿಸಲು ರೆಡಿ

  'ನಟರಾಜ ಸರ್ವಿಸ್' ತೆರೆಗೆ ಅಪ್ಪಳಿಸಲು ರೆಡಿ

  ಇನ್ನು ಪವನ್ ಒಡೆಯರ್ ನಿರ್ದೇಶನದ 'ನಟರಾಜ್ ಸರ್ವಿಸ್' ತೆರೆಗೆ ಬರಲು ಸಜ್ಜಾಗಿದ್ದು, ಅಕ್ಟೋಬರ್ 20ಕ್ಕೆ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಲಿದೆ. ಚಿತ್ರದಲ್ಲಿ ನಟ ಶರಣ್ ಮತ್ತು ಮಯೂರಿ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.

  English summary
  Kannada Director Pawan Wadeyar will be directing Actor Puneeth Rajkumar again. After Kannada Movie 'Rana Vikrama' Pawan Wadeyar who has titled Puneeth’s new entertainer as VAP (Veera Anjaneya Prasada).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X