For Quick Alerts
  ALLOW NOTIFICATIONS  
  For Daily Alerts

  ಜಿಯೋ ಜೊತೆ ಸೇರಿ ವರ್ಷಕ್ಕೆ ಮೂರು ಸಿನಿಮಾ ಮಾಡಲು ಹೊರಟಿದ್ದರು ಪವರ್​ಸ್ಟಾರ್

  |

  ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಎಲ್ಲೇ ಇದ್ದರೂ ಸಿನಿಮಾ ಬಿಟ್ಟು ಬೇರೆ ಮಾತಾಡುತ್ತಿದ್ದದ್ದು ಕಡಿಮೆ. ಅಪ್ಪನಂತಹ ನಟನಾಗಬೇಕು ಅಂತ ಅದೆಷ್ಟು ಆಸೆ ಇತ್ತೋ ಹಾಗೇ ಅಮ್ಮನಂತೆ ಯಶಸ್ವಿ ನಿರ್ಮಾಪಕನಾಗಬೇಕು ಅನ್ನೋ ಹಂಬಲ ಕೂಡ ಇತ್ತು. ಇದೇ ಕಾರಣಕ್ಕಾಗಿಯೇ ಅಮ್ಮ ಪಾರ್ವತಮ್ಮ ರಾಜ್​ಕುಮಾರ್ ನಿಧನದ ಬಳಿಕವೇ ಅಮ್ಮನ ನೆನಪಿಗಾಗಿ ಪಿಆರ್​ಕೆ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಆ ಸಂಸ್ಥೆಯಿಂದಲೇ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು. ಪುನೀತ್ ನಿಧನಕ್ಕೂ ಮುನ್ನ ಜಿಯೋ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದ್ದರು ಅನ್ನೋ ಮಾತು ಆಪ್ತವಲಯದಲ್ಲಿ ಕೇಳಿಬರುತ್ತಿದೆ.

  ಪಿಆರ್​ಕೆ-ಜಿಯೋ ಸಹಯೋಗದೊಂದಿಗೆ ವರ್ಷಕ್ಕೆ ಮೂರು ಸಿನಿಮಾ
  ಪುನೀತ್ ರಾಜ್​ಕುಮಾರ್ ಪಿಆರ್​ಕೆ ಸಂಸ್ಥೆ ಹೊಸಬರಿಗಾಗಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಹೊಸ ಕಲ್ಪನೆಗಳು ಹಾಗೂ ಯುವ ಕಲಾವಿದರಿಗೆ ಪಿಆರ್​ಕೆ ಸಂಸ್ಥೆ ಹೆಚ್ಚು ಮನ್ನಣೆ ನೀಡುತ್ತಿತ್ತು. ಇದೇ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಿಸಿದ ಬಹುತೇಕ ಸಿನಿಮಾಗಳು ಓಟಿಟಿಯಲ್ಲಿ ತೆರೆಕಂಡಿವೆ. ಆದರೆ, ಪುನೀತ್ ಇನ್ನೂ ಒಂದು ಹೆಜ್ಜೆ ಮುಂದಿಡಲು ಮುಂದಾಗಿದ್ದರು. ಜಿಯೋ ಸಂಸ್ಥೆಯ ಸಹಯೋಗದೊಂದಿಗೆ ವರ್ಷಕ್ಕೆ ಮೂರು ಸಿನಿಮಾ ನಿರ್ಮಾಣ ಮಾಡುವ ಆಲೋಚನೆ ಹೊಂದಿದ್ದರು. ಈ ಮೂಲಕ ಮತ್ತಷ್ಟು ಯುವ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರೊಂದಿಗೆ ಅವರಿಗೆ ಅವಕಾಶ ನೀಡಲು ಮುಂದಾಗಿದ್ದರು ಎಂದು ಆಪ್ತ ವಲಯಗಳು ಹೇಳುತ್ತಿವೆ.

  2020ರಲ್ಲಿ ಪಿಆರ್​ಕೆ ಸಂಸ್ಥೆಯ 3 ಸಿನಿಮಾ ತೆರೆಕಂಡಿತ್ತು
  ರಾಜ್​ ಬಿ ಶೆಟ್ಟಿ ಹಾಗೂ ವಸಿಷ್ಠ ಸಿಂಹ ನಟಿಸಿದ ಮಾಯಾಬಜಾರ್ 2016 ಥಿಯೇಟರ್​ನಲ್ಲಿ ತೆರೆಕಂಡಿತ್ತು. ಆದರೆ ಈ ಸಿನಿಮಾಗೆ ಚಿತ್ರಮಂದಿರದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ತಿಂಗಳ ಬಳಿಕ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ನಟನೆಯ ಲಾ ಹಾಗೂ ದ್ಯಾನಿಶ್ ಸೇಠ್ ನಟನೆಯ ಫ್ರೆಂಚ್ ಬಿರಿಯಾನಿ ಓಟಿಟಿಯಲ್ಲಿ ಬಿಡುಗಡೆಗೊಂಡಿತ್ತು.

  2019ರಲ್ಲಿ ಕವಲುದಾರಿ ಸಿನಿಮಾ ನಿರ್ಮಿಸಿದ್ದ ಪುನೀತ್
  ಪಿಆರ್​ಕೆ ಬ್ಯಾನರ್​ನಲ್ಲಿ ಪುನೀತ್ ರಾಜ್​ಕುಮಾರ್ ನಿರ್ಮಿಸಿದ ಮೊದಲ ಸಿನಿಮಾ ಕವಲುದಾರಿ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ದೇಶಕ ಹೇಮಂತ್ ಎಂ. ರಾವ್ ಕವಲುದಾರಿಯ ಸೂತ್ರಧಾರರಾಗಿದ್ದರು. ರಿಷಿ, ಆನಂತ್ ನಾಗ್ ನಟಿಸಿದ ಈ ಚಿತ್ರಕ್ಕೆ ಥಿಯೇಟರ್​ನಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು.

  ನಿರ್ಮಾಣ ಹಂತದಲ್ಲಿತ್ತು ಮೂರು ಸಿನಿಮಾ
  ಲಿಖಿತ್ ಶೆಟ್ಟಿ, ಅಮೃತ ಅಯ್ಯಂಗಾರ್ ಕಾಂಬಿನೇಷನ್ ಸಿನಿಮಾ ಫ್ಯಾಮಿಲಿ ಪ್ಯಾಕ್, ರಾಮ ರಾಮ ರೇ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶಿಸಬೇಕಿದ್ದ ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಓ2 ಅನ್ನುವ ಸಿನಿಮಾಗಳು ನಿರ್ಮಾಣ ಹಂತದಲ್ಲಿತ್ತು.

  ದ್ಯಾನಿಶ್ ಸೇಠ್ ಜೊತೆ ಒನ್ ಕಟ್ ಟು ಕಟ್
  ಪುನೀತ್ ರಾಜ್​ಕುಮಾರ್ ಪಿಆರ್​ಕೆ ಪ್ರೊಡಕ್ಷನ್ ಒನ್ ಕಟ್ ಟು ಕಟ್ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ದ್ಯಾನಿಶ್ ಈ ಸಿನಿಮಾದಲ್ಲಿ ಗೋಪಿ ಪಾತ್ರದಲ್ಲಿ ನಟಿಸಲು ಮುಂದಾಗಿದ್ದರು. ಇಷ್ಟು ಸಿನಿಮಾಗಳ ಗತಿಯೇನು? ಅನ್ನುವ ಪ್ರಶ್ನೆ ಕಾಡುತ್ತಿದೆ. ಈ ಮಧ್ಯೆ ಜಿಯೋ ಸಹಯೋಗದಲ್ಲಿ ಅಪ್ಪು 3 ಸಿನಿಮಾ ನಿರ್ಮಾಣದ ಕನಸು ಕಂಡಿದ್ದರು ಎನ್ನಲಾಗಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಮತ್ತಷ್ಟು ಯುವ ಪ್ರತಿಭೆಗಳಿಗೆ ಪಿಆರ್​ಕೆ ಪ್ರೊಡಕ್ಷನ್ ವೇದಿಕೆಯಾಗಿ ನಿಲ್ಲುವುದರಲ್ಲಿ ಅನುಮಾನವೇ ಇರುತ್ತಿರಲಿಲ್ಲ.

  English summary
  Puneeth Rajkumar's PRK Production house wanted to produce 3 movies in a year with collaboration of Jio:
  Wednesday, November 3, 2021, 21:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X