»   » ಹೇಗಿದೆ ನೋಡಿ ಪವರ್ ಸ್ಟಾರ್ ಪುನೀತ್ ಹೊಸ ಬೈಕ್?

ಹೇಗಿದೆ ನೋಡಿ ಪವರ್ ಸ್ಟಾರ್ ಪುನೀತ್ ಹೊಸ ಬೈಕ್?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಬೈಕ್ ಗಳೆಂದರೆ ಸಿಕ್ಕಾಪಟ್ಟೆ ಕ್ರೇಜ್. ವ್ರೂಮ್....ವ್ರೂಮ್....ಅಂತ ಫ್ರೀ ರೋಡ್ ನಲ್ಲಿ ಸ್ಪೀಡಾಗಿ ಡ್ರೈವ್ ಮಾಡೋದಂದ್ರೆ ಅಪ್ಪುಗೆ ಸಖತ್ ಖುಷಿ.

ಈಗ ಅಪ್ಪು ಬೈಕ್ ಕ್ರೇಜ್ ಬಗ್ಗೆ ನಾವು ಮಾತನಾಡುತ್ತಿರುವುದಕ್ಕೆ ಕಾರಣ ಈ ಫೋಟೋ. ನಿನ್ನೆಯಷ್ಟೇ ಹೊಸ ಸೂಪರ್ ಬೈಕ್ ವೊಂದನ್ನ ಏರಿ, ಅಪ್ಪು ತೆಗೆಸಿಕೊಂಡಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Puneeth Rajkumar's brand new Super Bike

ಅಪ್ಪು ಆಪ್ತ ವಲಯದಿಂದ ಲೀಕ್ ಆಗಿರುವ ಈ ಫೋಟೋ, ಪವರ್ ಸ್ಟಾರ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಹಾಗಾಗಿದೆ. ಇದು ರಿಯಲ್ಲೋ ಅಥವಾ ರೀಲ್ ಗಾಗಿ ನಡೆಸುತ್ತಿರುವ ತಯಾರಿಯೋ ಅನ್ನುವ ಕುತೂಹಲ ಅಭಿಮಾನಿಗಳಿಗೆ ಕಾಡುತ್ತಿದೆ. [ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಪ್ರೀತಿಯ ಕಾಣಿಕೆ]

'ರಣವಿಕ್ರಮ' ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪುನೀತ್ ರಾಜ್ ಕುಮಾರ್, ಸದ್ಯ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿದ್ದಾರೆ. ದುನಿಯಾ ಸೂರಿ ನಿರ್ದೇಶಿಸುತ್ತಿರುವ ಚಿತ್ರ 'ದೊಡ್ಮನೆ ಹುಡುಗ'.

ನಿಮಗೆ ನೆನಪಿದ್ದರೆ, ಇದೇ ಅಪ್ಪು ಮತ್ತು ದುನಿಯಾ ಸೂರಿ ಕಾಂಬಿನೇಷನ್ ನಲ್ಲಿ ಮೂಡಿಬಂದ 'ಅಣ್ಣಾ ಬಾಂಡ್' ಚಿತ್ರದಲ್ಲಿ ಅಪ್ಪುಗಾಗಿ ಸೂರಿ, ಸ್ಪೆಷಲ್ ಸ್ಕೆಲಿಟನ್ ಬೈಕ್ ರೆಡಿಮಾಡಿಸಿದ್ದರು. ಈಗ 'ದೊಡ್ಮನೆ ಹುಡುಗ' ಚಿತ್ರಕ್ಕಾಗಿ ಇಂತಹ ಸೂಪರ್ ಬೈಕ್ ಮೇಲೆ ಪುನೀತ್ ರನ್ನ ಕೂರಿಸಿದರೂ ಅಚ್ಚರಿ ಪಡಬೇಕಿಲ್ಲ. ಎಲ್ಲವೂ ಇನ್ನು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ.

    English summary
    Kannada Actor Puneeth Rajkumar was spotted posing with a Super Bike Yesterday (April 21st). Well, is the new bike is connected with Puneeth's upcoming film 'Dodmane Huduga'? is a question as of now.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada