»   » 'ರಣವಿಕ್ರಮ'ನ ಪರಾಕ್ರಮಕ್ಕೆ ಬಾಕ್ಸ್ ಆಫೀಸ್ ಉಡೀಸ್

'ರಣವಿಕ್ರಮ'ನ ಪರಾಕ್ರಮಕ್ಕೆ ಬಾಕ್ಸ್ ಆಫೀಸ್ ಉಡೀಸ್

Posted By:
Subscribe to Filmibeat Kannada

ಸದ್ಯ ಗಾಂಧಿನಗರದ ಮೂಲೆ ಮೂಲೆಯಲ್ಲೂ ಕೇಳಿ ಬರುತ್ತಿರುವ ಹೆಸರು ಒಂದೇ. ಅದೇ 'ರಣವಿಕ್ರಮ'. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರಕ್ಕೆ ಭರ್ಜರಿ ಓಪನ್ನಿಂಗ್ ಸಿಕ್ಕಿದೆ. ತೆರೆ ಮೇಲೆ ಅಪ್ಪು ಪವರ್ ಫುಲ್ ಪರ್ಫಾಮೆನ್ಸ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ರಾಜ್ಯದಾದ್ಯಂತ ಎಲ್ಲಾ ಥಿಯೇಟರ್ ಗಳಲ್ಲೂ 'ರಣವಿಕ್ರಮ'ನ ಆರ್ಭಟ ಜೋರಾಗಿದೆ. ಬಹುತೇಕ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ರಣವಿಕ್ರಮ' ಕಲೆಕ್ಷನ್ ನಲ್ಲೂ ದಾಖಲೆ ಬರೆಯುವುದಕ್ಕೆ ಸಜ್ಜಾಗುತ್ತಿದೆ. ಅಂದಾಜಿನ ಪ್ರಕಾರ ಮೊದಲನೇ ದಿನ 'ರಣವಿಕ್ರಮ' ಕಲೆಕ್ಷನ್ ಮಾಡಿರುವುದು ಬರೋಬ್ಬರಿ 3 ಕೋಟಿ 75 ಲಕ್ಷ ರೂಪಾಯಿ.! ['ರಣವಿಕ್ರಮ' ನೋಡಿ ವಿಮರ್ಶಕರು ಏನೆಂದರು?]


ranavikrama

ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿರುವ 'ರಣವಿಕ್ರಮ' ಹೊರ ರಾಜ್ಯದಲ್ಲಿ 40 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗುತ್ತಿದೆ. ಬೆಂಗಳೂರು ಒಂದರಲ್ಲೇ ಮೊದಲ ದಿನ 112 ಶೋಗಳನ್ನ ಕಂಡಿರುವ 'ರಣವಿಕ್ರಮ' 3.75 ಕೋಟಿ ರೂಪಾಯಿ ಕಮಾಯಿ ಮಾಡಿದೆ ಅನ್ನುತ್ತಿದ್ದಾರೆ ಗಾಂಧಿನಗರದ ಪಂಡಿತರು.[ಚಿತ್ರ ವಿಮರ್ಶೆ: 'ರಣವಿಕ್ರಮ' ಪವನ್ ಇನ್ನೊಂದು ಗೂಗ್ಲಿ]


ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್, ಪೂಣೆ ಮತ್ತು ದೆಹಲಿಯಲ್ಲಿ 'ರಣವಿಕ್ರಮ'ನ ಫಸ್ಟ್ ಡೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿತ್ತು. ಎಲ್ಲಾ ಕಡೆಯಿಂದ ಕಲೆಕ್ಷನ್ ಕಲೆಹಾಕಿರುವ ಪ್ರಕಾರ ಮೊದಲ ದಿನವೇ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ 'ರಣವಿಕ್ರಮ'. ಅಷ್ಟರಮಟ್ಟಿಗೆ ಗಲ್ಲಪೆಟ್ಟಿಗೆಯಲ್ಲಿ 'ರಣವಿಕ್ರಮ'ನ ಪರಾಕ್ರಮ ಜೋರಾಗಿದೆ. ಟಾಲಿವುಡ್ ನಲ್ಲಿ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾ ರಿಲೀಸ್ ಆಗಿದ್ದರೂ, 'ರಣವಿಕ್ರಮ'ನ ಕಲೆಕ್ಷನ್ ಗೆ ಹೊಡೆತ ಬಿದ್ದಿಲ್ಲ ಅನ್ನುವುದಕ್ಕೆ ಇದೇ ಸಾಕ್ಷಿ. (ಏಜೆನ್ಸೀಸ್)

English summary
Power Star Puneeth Rajkumar starrer 'Ranavikrama' is gathering huge response from critics and audience. According to the reports, 'Ranavikrama' has collected 3.75 crores (approx) on its Day 1 at the Box Office.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada