»   » 'ಹೆಬ್ಬುಲಿ' ನಿರ್ಮಾಪಕನ ಮುಂದಿನ ಚಿತ್ರದ ಹೀರೋ ಪುನೀತ್

'ಹೆಬ್ಬುಲಿ' ನಿರ್ಮಾಪಕನ ಮುಂದಿನ ಚಿತ್ರದ ಹೀರೋ ಪುನೀತ್

Posted By:
Subscribe to Filmibeat Kannada

'ಹೆಬ್ಬುಲಿ' ಚಿತ್ರದ ಸಕ್ಸಸ್ ನಂತರ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಉಮಾಪತಿ ಶ್ರೀನಿವಾಸ್ ಮತ್ತೆ ಕಿಚ್ಚ ಸುದೀಪ್ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಅವರ ಆಸೆ ತಕ್ಷಣಕ್ಕೆ ಈಡೇರಲಿಲ್ಲ. ಈಗ ಉಮಾಪತಿ ಶ್ರೀನಿವಾಸ್ ರವರು ಪುನೀತ್ ರಾಜ್ ಕುಮಾರ್ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

'ರಾಜಕುಮಾರ' 100 ಡೇಸ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿ

ಹೌದು, 'ಉಮಾಪತಿ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ತಮ್ಮ ಮೊದಲ ಸಿನಿಮಾವನ್ನೇ ಕಿಚ್ಚ ಸುದೀಪ್ ಚಿತ್ರದ ಮೂಲಕ ನಿರ್ಮಾಣ ಮಾಡಲು ಶುರುಮಾಡಿದ ಯುವ ನಿರ್ಮಾಪಕ ಉಮಾಪತಿ ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರಂತೆ. ಇವರ ಚಿತ್ರದಲ್ಲಿ ಪುನೀತ್ ಸಹ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

Puneeth Rajkumar to act in 'Hebbuli' Producer Umapathy Srinivas film

ಅಂದಹಾಗೆ ಉಮಾಪತಿ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ಚಿತ್ರ 2018 ಕ್ಕೆ ಸೆಟ್ಟೇರಲಿದ್ದು, ಚಿತ್ರಕ್ಕೆ ಈಗಾಗಲೇ ನಿರ್ಮಾಪಕ ಪುನೀತ್ ಅವರೊಂದಿಗೆ ಮಾತನಾಡಿ ಡೇಟ್ಸ್ ಸಹ ಪಡೆದಿದ್ದಾರಂತೆ. ಆದರೆ ಈ ಸಕ್ಸಸ್ ಫುಲ್ ನಿರ್ಮಾಪಕ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯ ಚಿತ್ರಕ್ಕೆ ನಿರ್ದೇಶಕರು ಯಾರು ಎಂಬುದು ಇನ್ನು ಫೈನಲ್ ಆಗಿಲ್ಲವಂತೆ. ಉಮಾಪತಿ ಈ ಚಿತ್ರಕ್ಕಾಗಿ ಯುವ ನಿರ್ದೇಶಕರ ಹುಡುಕಾಟದಲ್ಲಿದ್ದಾರಂತೆ.

ಸದ್ಯದಲ್ಲಿ 'ಕನ್ನಡದ ರಾಜರತ್ನ' ಪುನೀತ್ ರಾಜ್ ಕುಮಾರ್ ರವರು ಹರ್ಷ ನಿರ್ದೇಶನದ 'ಅಂಜನಿಪುತ್ರ' ಚಿತ್ರದಲ್ಲಿ ಬ್ಯುಸಿ ಆಗಿದ್ದು, ಈ ಚಿತ್ರದ ನಂತರ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬುದರ ಬಗ್ಗೆ ಇನ್ನು ಯಾವುದೇ ಸುದ್ದಿ ಹೊರಬಿದ್ದಿಲ್ಲ.

English summary
According to Grapevine, Kannada Actor Puneeth Rajkumar to act in 'Hebbuli' Producer Umapathy Srinivas Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada