»   » ರಾಮಾಚಾರಿ ಡೈರೆಕ್ಟರ್ ಪುನೀತ್ ಗೆ ಆಕ್ಷನ್ ಕಟ್

ರಾಮಾಚಾರಿ ಡೈರೆಕ್ಟರ್ ಪುನೀತ್ ಗೆ ಆಕ್ಷನ್ ಕಟ್

Posted By:
Subscribe to Filmibeat Kannada

ಮೊದಲನೇ ಸಿನಿಮಾ ಹಿಟ್ ಆಯ್ತು. ವರ್ಷಗಳ ಕನಸು ಈಡೇರಿತು. ಚೊಚ್ಚಲ ಪ್ರಯತ್ನದಲ್ಲೇ ಕನ್ನಡ ಪ್ರೇಕ್ಷಕರು ಕೈಹಿಡಿದರು. ಮುಂದೇನು..? 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಿರ್ದೇಶಕ ಸಂತೋಷ್ ಅನಂದರಾಮ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಈಗ ಕೇಳಿ ಬರುತ್ತಿರುವ ಮಾತುಗಳಿವು.

ಫಸ್ಟ್ ಅಟೆಂಪ್ಟ್ ನಲ್ಲಿ ಸಿಕ್ಸರ್ ಬಾರಿಸಿರುವ ಸಂತೋಷ್ ಅನಂದರಾಮ್ ಈಗೇನು ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆಗೆ ಗಾಂಧಿನಗರದಲ್ಲಿ ಉತ್ತರ ಸಿಕ್ಕಿದೆ. ಅದಾಗಲೇ ಎರಡನೇ ಚಿತ್ರದ ಸ್ಕ್ರಿಪ್ಟಿಂಗ್ ನಲ್ಲಿ ಸಂತೋಷ್ ಅನಂದರಾಮ್ ಬಿಜಿಯಾಗಿದ್ದಾರೆ. [ರಾಕಿಂಗ್ ಸ್ಟಾರ್ 'ರಾಮಾಚಾರಿ' ಮತ್ತೊಂದು ದಾಖಲೆ]

Puneeth Rajkumar to star in Santhosh Ananddram's directorial next?

ಮೊದಲ ಚಿತ್ರದಲ್ಲೇ ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಿದ್ದ ಸಂತೋಷ್ ಅನಂದರಾಮ್, ತಮ್ಮ ಎರಡನೇ ಚಿತ್ರದ ಹೀರೋ ಪಾತ್ರಕ್ಕೆ ಯಾರನ್ನ ಸೆಲೆಕ್ಟ್ ಮಾಡಿದ್ದಾರೆ ಅನ್ನುವ ಕುತೂಹಲ ಕಾಡುವುದು ಸಹಜ. ಆದ್ರೆ, ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ ನಿಜವೇ ಆಗಿದ್ದರೆ, ಸಂತೋಷ್ ತಮ್ಮ ಎರಡನೇ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರವನ್ನ ನೋಡಿ ನಿರ್ದೇಶಕ ಸಂತೋಷ್ ಅನಂದರಾಮ್ ಗೆ ಅಪ್ಪು ಭೇಷ್ ಅಂದಿದ್ದಾರಂತೆ. ಇದನ್ನೇ ಸ್ಪೂರ್ಥಿಯಾಗಿ ಪಡೆದ ಸಂತೋಷ್, ಅಪ್ಪುಗಾಗಿ ಒಂದು ಕಥೆ ರೆಡಿಮಾಡಿದ್ದಾರೆ. ಒಂದು ಸುತ್ತು ಅಪ್ಪು ಜೊತೆಗೆ ಮಾತುಕತೆ ಕೂಡ ನಡೆಸಿದ್ದಾರೆ. ['ರಾಮಾಚಾರಿ' ನಿರ್ದೇಶಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!]

Puneeth Rajkumar to star in Santhosh Ananddram's directorial next?

ಆದ್ರೆ, ಪುನೀತ್ ಕೈಯಲ್ಲಿನ್ನೂ 'ಧೀರ ರಣವಿಕ್ರಮ', 'ದೊಡ್ಮನೆ ಹುಡುಗ', 'ಆಹ್ವಾನ' ಚಿತ್ರಗಳಿವೆ. ಈ ಎಲ್ಲಾ ಚಿತ್ರಗಳು ಮುಗಿದ ಬಳಿಕವಷ್ಟೇ ಅಪ್ಪು ಸಂತೋಷ್ ಗೆ ಕಾಲ್ ಶೀಟ್ ನೀಡುವುದು. ಅಷ್ಟರೊಳಗೆ ಚಿತ್ರಕಥೆ ರೆಡಿಯಾಗಿ, ಅಪ್ಪು ಹ್ಹೂಂ ಅಂದುಬಿಟ್ಟರೆ ಇಬ್ಬರು ಪ್ರತಿಭಾನ್ವಿತರ 'ಬ್ಲಾಕ್ ಬಸ್ಟರ್' ಸಿನಿಮಾ ರೆಡಿಯಾಗುವುದು ಪಕ್ಕಾ.

    English summary
    After the success of MR And Mrs Ramachari, Director Santhosh Ananddram is planning for his directorial next with Power Star Puneeth Rajkumar.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada