Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪುಷ್ಪ - 2' ನಂತರ ಸ್ಟಾರ್ ನಿರ್ದೇಶಕನ ಚಿತ್ರದಲ್ಲಿ ಅಲ್ಲು ಅರ್ಜುನ್? ಆ ಸಿನಿಮಾ ಸೀಕ್ವೆಲ್ ಮಾಡ್ತಾರಾ ಬನ್ನಿ?
ಸೂಪರ್ ಸ್ಟಾರ್‌ಗಳು ಒಂದು ಸಿನಿಮಾ ಮುಗಿಯೋಕು ಮೊದ್ಲೆ ಮತ್ತೊಂದು ಸಿನಿಮಾ ಲೈನ್‌ನಲ್ಲಿ ಇಟ್ಟುಕೊಳ್ಳುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ'- 2 ರಿಲೀಸ್ ಆಗುವವರೆಗೂ ಬೇರೆ ಸಿನಿಮಾ ಸಿನಿಮಾ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎನ್ನುತ್ತಿದ್ದಾರೆ. ಹಾಗಾದ್ರೆ ಬನ್ನಿ ನೆಕ್ಸ್ಟ್ ಪ್ರಾಜೆಕ್ಟ್ ಯಾವ್ದು? ಎನ್ನುವ ಚರ್ಚೆ ಶುರುವಾಗಿದೆ.
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸಿದ 'ಪುಷ್ಪ' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅದರ ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆ ಇದೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೀತಿದೆ. ಮುಂದಿವ ವರ್ಷಾಂತ್ಯಕ್ಕೆ ತೆರೆಮೇಲೆ 'ಪುಷ್ಪ'ರಾಜ್ ಆರ್ಭಟ ಶುರುವಾಗುವ ಸಾಧ್ಯತೆಯಿದೆ. ಇನ್ನು ಒಂದು ವರ್ಷ ಕಾಯಬೇಕಾ? ಎಂದು ಅಭಿಮಾನಿಗಳು ತಲೆ ಕೆಡಸಿಕೊಂಡಿದ್ದಾರೆ. 2 ವರ್ಷಕ್ಕೆ 1 ಸಿನಿಮಾ ಅಂದರೆ ಹೇಗೆ ಎಂದು ಕೇಳುತ್ತಿದ್ದಾರೆ. 'ಪುಷ್ಪ'- 2 ಮುಗಿಯೋದು ಯಾವಾಗ? ಮತ್ತೊಂದು ಸಿನಿಮಾ ಶುರುವಾಗುವುದು ಯಾವಾಗ? ಎಂದು ಕೇಳುತ್ತಿದ್ದಾರೆ.
ನಲವತ್ತರ
ಹರೆಯದಲ್ಲಿ
ಸರೋಗಸಿಗೆ
ಮನಸ್ಸು
ಮಾಡಿದ್ರಾ
ಅನುಷ್ಕಾ
ಶೆಟ್ಟಿ?
'ಪುಷ್ಪ' ಸೀಕ್ವೆಲ್ ಶೂಟಿಂಗ್ ಮುಗಿಸಿ ಮತ್ತೊಂದು ಸಿನಿಮಾ ಶುರು ಮಾಡಲು ಸ್ಟೈಲಿಶ್ ಸ್ಟಾರ್ ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಈಗ ಕಥೆಯ ಹುಡುಕಾಟದಲ್ಲಿದ್ದಾರೆ. ಅಭಿಮಾನಿಗಳಿಗೆ ಮತ್ತೆ ನಿರಾಸೆ ಮಾಡುವುದು ಬೇಡ ಎಂದು ನಿರ್ಧರಿಸಿದ್ದಾರೆ. 'ಪುಷ್ಪ'- 2 ಶೂಟಿಮಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಶುರುವಾಗುವ ವೇಳೆಗೆ ಮತ್ತೊಂದು ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗಲು ಮನಸ್ಸು ಮಾಡಿದ್ದಾರೆ.

'ರೇಸುಗುರಂ' ಕಾಂಬಿನೇಷನ್‌ನಲ್ಲಿ ಚಿತ್ರ
ಅಲ್ಲು ಅರ್ಜುನ್ ಕರಿಯರ್‌ನಲ್ಲಿ 'ರೇಸುಗುರಂ' ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಎನಿಸಿಕೊಂಡಿತ್ತು. 2014ರಲ್ಲಿ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸಿನಿಮಾ ಸಾಂಗ್ಸ್ ಎಲ್ಲಾ ಸೂಪರ್ ಹಿಟ್ ಆಗಿತ್ತು. ಇದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಮಾಡಲು ಬನ್ನಿ ಉತ್ಸುಕರಾಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸುರೇಂದರ್ ರೆಡ್ಡಿನ ಕರೆದು ಒಂದೊಳ್ಳೆ ಕಥೆ ಮಾಡೋಕೆ ಸ್ಟೈಲಿಶ್ ಸ್ಟಾರ್ ಹೇಳಿದ್ದಾರೆ ಎಂದು ಫಿಲ್ಮ್ ನಗರ್‌ನಲ್ಲಿ ಗುಸುಗುಸು ಕೇಳಿಬರ್ತಿದೆ. 'ರೇಸುಗುರಂ' -2 ಬಂದರೂ ಅಚ್ಚರಿಪಡಬೇಕಿಲ್ಲ.

ಹಿಟ್ ಚಿತ್ರಗಳನ್ನ ಕೊಟ್ಟ ನಿರ್ದೇಶಕ
'ಅತನೊಕ್ಕಡೆ', 'ಅಶೋಕ್', 'ಕಿಕ್', 'ರೇಸುಗುರಂ', 'ಧ್ರುವ' ರೀತಿಯ ಹಿಟ್ ಸಿನಿಮಾಗಳನ್ನು ಸುರೇಂದರ್ ರೆಡ್ಡಿ ಕೊಟ್ಟಿದ್ದಾರೆ. 'ಪುಷ್ಪ' ಸಿನಿಮಾ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಾಗಾಗಿ ಸುರೇಂದರ್ ರೆಡ್ಡಿ ರೀತಿಯ ಅನುಭವಿ ನಿರ್ದೇಶಕರು ಮಾತ್ರ ಅಂತಹ ನಟರನ್ನು ಹ್ಯಾಂಡಲ್ ಮಾಡಲು ಸಾಧ್ಯ. ಸದ್ಯ ಅಖಿಲ್ ಅಕ್ಕಿನೇನಿ ನಟನೆಯ 'ಏಜೆಂಟ್' ಚಿತ್ರಕ್ಕೆ ಸುರಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಆ ನಂತರ ಅಲ್ಲು ಅರ್ಜುನ್ ಜೊತೆ ಕೈಜೋಡಿಸುತ್ತಾರೆ ಎನ್ನಲಾಗ್ತಿದೆ.

'ಪುಷ್ಪ- 2' ಟಾರ್ಗೆಟ್ 1000 ಕೋಟಿ
KGF ಚಾಪ್ಟರ್ 1 ಒಟ್ಟು 250 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ಚಾಪ್ಟರ್-2 ಬರೋಬ್ಬರಿ 1200 ಕೋಟಿ ಬಾಚಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 'ಪುಷ್ಪ' ಪ್ರೀಕ್ವೆಲ್ ಸೂಪರ್ ಹಿಟ್ ಆಗಿದೆ. ಸೀಕ್ವೆಲ್ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಇದನ್ನು ಎನ್‌ಕ್ಯಾಶ್ ಮಾಡಿಕೊಂಡು 1000 ಕೋಟಿ ಕಲೆಕ್ಷನ್ ಟಾರ್ಗೆಟ್ ಇಟ್ಟುಕೊಂಡು 'ಪುಷ್ಪ- 2' ಸಿನಿಮಾ ಪ್ಲ್ಯಾನ್ ಮಾಡಲಾಗ್ತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್ ಮಾಡಲು ಚಿತ್ರತಂಡ ಮುಂದಾಗಿದೆ.

ರಷ್ಯಾದಲ್ಲಿ 'ಪುಷ್ಪ'ಗೆ 5 ಕೋಟಿ ನಷ್ಟ
ಪಕ್ಕಾ ಮಾಸ್ ಮಸಾಲಾ ಎಂಟರ್‌ಟೈನರ್ ಸಿನಿಮಾ 'ಪುಷ್ಪ'. ಅಲ್ಲು ಅರ್ಜುನ್ ಚಿತ್ರದಲ್ಲಿ 'ಪುಷ್ಪ'ರಾಜ್ ಆಗಿ ಅಬ್ಬರಿಸಿದ್ದರು. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ದರು. ಇತ್ತೀಚೆಗೆ ಚಿತ್ರವನ್ನು ರಷ್ಯಾ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. 5 ಕೋಟಿ ವೆಚ್ಚದಲ್ಲಿ ಚಿತ್ರದ ಪ್ರಮೋಷನ್ ಮಾಡಿದ್ದರು. ಚಿತ್ರತಂಡ ಕೂಡ ಹೋಗಿ ಪ್ರಮೋಷನ್‌ನಲ್ಲಿ ಭಾಗಿ ಆಗಿತ್ತು. ಆದರೆ ಸಿನಿಮಾ ಹೀನಾಯವಾಗಿ ಅಲ್ಲಿ ಸೋಲುಂಡು 3 ಕೋಟಿ ನಷ್ಟ ತಂದೊಡ್ಡಿದೆ ಎಂದು ವರದಿ ಆಗ್ತಿದೆ.