For Quick Alerts
  ALLOW NOTIFICATIONS  
  For Daily Alerts

  'ಪುಷ್ಪ'ರಾಜ್‌ಗೆ ಪೊಗರ್ದಸ್ತ್​​​​ ಆಫರ್: ಹಾಲಿವುಡ್ ಸೂಪರ್ ಹೀರೊ ಚಿತ್ರದಲ್ಲಿ ಅಲ್ಲು ಅರ್ಜುನ್?

  |

  ಬ್ಲಾಕ್‌ಬಸ್ಟರ್‌ 'ಪುಷ್ಪ' ಸಿನಿಮಾದಿಂದ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಅಲ್ಲು ಅರ್ಜುನ್ ಗೆದ್ದಿದ್ದಾರೆ. ಸ್ಟೈಲಿಶ್‌ ಸ್ಟಾರ್‌ಗೆ ಈಗ ಬಾಲಿವುಡ್‌ನಿಂದಲೂ ಭಾರೀ ಆಫರ್ಸ್ ಬರ್ತಿವೆ. ಸದ್ಯ 'ಪುಷ್ಪ' ಸಿನಿಮಾದಲ್ಲಿ ನಟಿಸೋಕೆ ಐಕಾನ್ ಸ್ಟಾರ್ ಸಿದ್ಧತೆ ನಡೆಸಿದ್ದಾರೆ. ಇಂತಹ ಹೊತ್ತಲ್ಲೇ ಅಲ್ಲು ಅರ್ಜುನ್‌ಗೆ ಹಾಲಿವುಡ್ ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರಿಂದ ಸಿನಿಮಾ ಮಾಡುವಂತೆ ಬುಲಾವ್ ಬಂದಿದೆಯಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದೆ.

  75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇತ್ತೀಚೆಗೆ ನ್ಯೂಯಾರ್ಕ್‌ನ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ನಡೆಸಿದ ಬೃಹತ್ ಪರೇಡ್‌ನಲ್ಲಿ ನಟ ಅಲ್ಲು ಅರ್ಜುನ್‌ ಭಾಗವಹಿಸಿದ್ದರು. ಕಳೆದೊಂದು ವಾರದಿಂದ ಅಲ್ಲು ಅರ್ಜುನ್, ಪತ್ನಿ ಸ್ನೇಹ ರೆಡ್ಡಿ ಸಮೇತ ನ್ಯೂಯಾರ್ಕ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಹಾಲಿವುಡ್ ನಿರ್ದೇಶಕರೊಬ್ಬರು ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ನೋಡಿ ಥ್ರಿಲ್ಲಾಗಿದ್ದಾರಂತೆ. ಸದ್ಯ ತಾವು ನಿರ್ದೇಶಿಸುತ್ತಿರುವ ಚಿತ್ರದಲ್ಲಿ 'ಪುಷ್ಪ'ರಾಜ್‌ಗಾಗಿ ಒಂದು ಪವರ್‌ಫುಲ್ ಪಾತ್ರವನ್ನು ಡಿಸೈನ್ ಮಾಡಿದ್ದಾರಂತೆ. ಸದ್ಯ ನ್ಯೂಯಾರ್ಕ್‌ ಪ್ರವಾಸದಲ್ಲಿರುವ ಅಲ್ಲು ಅರ್ಜುನ್‌ನ ಭೇಟಿ ಮಾಡಿ ಹಾಲಿವುಡ್ ನಿರ್ದೇಶಕರು ಹಾಗೂ ನಿರ್ಮಾಪಕರು ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

  ಹೆಂಡತಿ ಪಕ್ಕ ಇರುವಾಗಲೇ ಬೇರೊಬ್ಬಳ ಜೊತೆ ಏನ್ ಮಾಡ್ತಿದ್ದೀರಾ ಅಲ್ಲು ಅರ್ಜುನ್? ವಿಡಿಯೋ ವೈರಲ್!ಹೆಂಡತಿ ಪಕ್ಕ ಇರುವಾಗಲೇ ಬೇರೊಬ್ಬಳ ಜೊತೆ ಏನ್ ಮಾಡ್ತಿದ್ದೀರಾ ಅಲ್ಲು ಅರ್ಜುನ್? ವಿಡಿಯೋ ವೈರಲ್!

  'ಪುಷ್ಪ' ಸಿನಿಮಾ ಬರೀ ಆಂಧ್ರ, ತೆಲಂಗಾಣ ಮಾತ್ರವಲ್ಲ ಉತ್ತರ ಭಾರತದಲ್ಲೂ ಸಖತ್ ಸದ್ದು ಮಾಡಿತ್ತು. ಓವರ್‌ಸೀಸ್ ಮಾರ್ಕೆಟ್‌ನಲ್ಲೂ ಸ್ಟೈಲಿಶ್ ಸ್ಟಾರ್ ಧೂಳೆಬ್ಬಿಸಿದರು. ವಿದೇಶದ ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ನ್ಯೂಯಾರ್ಕ್‌ ಪ್ರವಾಸದಲ್ಲಿರುವ ಅಲ್ಲು ಅರ್ಜುನ್ ಅಲ್ಲಿನ ಮೇಯರ್‌ ಭೇಟಿ ಮಾಡಿದ್ದರು. ಈ ವೇಳೆ ಮೇಯರ್ ಎರಿಕ್ ಆಡಮ್ಸ್ 'ಪುಷ್ಪ' ಚಿತ್ರದ 'ತಗ್ಗೊದೇ ಇಲ್ಲ' ಸ್ಟೈಲ್ ಮಾಡಿ ತೋರಿಸಿದ್ದರು. ಅದರ ಫೋಟೊಗಳನ್ನು ಸ್ವತಃ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೊರ ದೇಶಗಳಲ್ಲಿ ಅಲ್ಲು ಅರ್ಜುನ್‌ಗಿರುವ ಕ್ರೇಜ್ ನೋಡಿ ಹಾಲಿವುಡ್‌ ಸಿನಿಮಾದಲ್ಲಿ ನಟಿಸುವಂತೆ ಅಪ್ರೋಚ್ ಮಾಡಲಾಗಿದೆಯಂತೆ.

  ದೇಶ್ಯಾದ್ಯಂತ ಅಲ್ಲು ಅರ್ಜುನ್ ಕ್ರೇಜ್ ಜೋರಾಗಿದೆ. ಹಾಗಾಗಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ಸಿಗುತ್ತಿದೆ. ಇತ್ತೀಚೆಗೆ ಗುಟ್ಕಾ ಪಾನ್ ಮಸಾಲಾ ಜಾಹಿರಾತಿನಲ್ಲಿ ನಟಿಸಲು ಭಾರೀ ಆಫರ್ ಕೂಡ ಬಂದಿತ್ತಂತೆ. ಆದರೆ ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ. ಇದನ್ನು ಸೇವಿಸಲು ನಾನೇ ಅಭಿಮಾನಿಗಳನ್ನು ಪ್ರೇರೇಪಿಸಿದಂತಾಗುತ್ತದೆ. ಹಾಗಾಗಿ ಇಂತಹ ಜಾಹಿರಾತುಗಳಲ್ಲಿ ನಟಿಸಬಾರದು ಎಂದು ಅಲ್ಲು ಅರ್ಜುನ್ ನಿರ್ಧರಿಸಿದ್ದಾರೆ. ಸ್ಟೈಲಿಶ್ ಸ್ಟಾರ್ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

  Pushpa Actor Stylish Star Allu Arjun Offered Hollywood Project

  ಸೋಮವಾರವಷ್ಟೇ 'ಪುಷ್ಪ'-2 ಸಿನಿಮಾ ಮುಹೂರ್ತ ನೆರವೇರಿದೆ. ಮೊದಲ ಭಾಗ ನಿರೀಕ್ಷೆ ಮೀರಿ ಸಕ್ಸಸ್ ಕಂಡ ಕಾರಣ ಎರಡನೇ ಭಾಗವನ್ನು ಮತ್ತಷ್ಟು ಅದ್ಧೂರಿಯಾಗಿ ಕಟ್ಟಿಕೊಡುವ ಲೆಕ್ಕಚಾರ ನಡೀತಿದೆ. ಮೊದಲು ಅಂದುಕೊಂಡಿದ್ದ ಕಥೆಯನ್ನು ಮತ್ತಷ್ಟು ಬದಲಿಸಿ ಬಹಳ ರೋಚಕವಾಗಿ ಸಿನಿಮಾ ತೆರೆಗೆ ತರಲು ನಿರ್ದೇಶಕ ಸುಕುಮಾರ್ ಕಸರತ್ತು ನಡೆಸುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮುಂದುವರೆಯಲಿದ್ದಾರೆ. ಎರಡನೇ ಭಾಗದಲ್ಲಿ 'ಪುಷ್ಪ'ರಾಜ್‌ ವರ್ಸಸ್ ಭನ್ವರ್ ಸಿಂಗ್ ಶೇಖಾವತ್ ಕಾದಾಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮುಂದಿನ ವರ್ಷ ಸಮ್ಮರ್‌ನಲ್ಲಿ 'ಪುಷ್ಪ' ಸೀಕ್ವೆಲ್ ತೆರೆಗೆ ಬರುವ ಸಾಧ್ಯತೆಯಿದೆ.

  English summary
  Pushpa Actor Stylish Star Allu Arjun Offered Hollywood Project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X