For Quick Alerts
  ALLOW NOTIFICATIONS  
  For Daily Alerts

  ಆಚಾರ್ಯ vs ಪುಷ್ಪ: ಮೆಗಾಸ್ಟಾರ್‌ಗಾಗಿ ಮುಂದಕ್ಕೆ ಹೋದ ಅಲ್ಲು ಅರ್ಜುನ್?

  |

  ದಕ್ಷಿಣ ಭಾರತದ ಸ್ಟಾರ್ ನಟರ ಚಿತ್ರಗಳು ಬಿಡುಗಡೆ ದಿನಾಂಕ ಘೋಷಿಸಿ ತಯಾರಿ ನಡೆಸಿದೆ. ಇನ್ನು ಕೆಲವು ಸ್ಟಾರ್‌ಗಳು ಸೂಕ್ತ ದಿನಾಂಕ ಸಿಗದ ಗೊಂದಲಕ್ಕೆ ಬಿದ್ದಿದ್ದಾರೆ. ಈ ಹಂತದಲ್ಲಿ ಕೆಲವು ನಿರೀಕ್ಷೆಯ ಚಿತ್ರಗಳು ಒಂದೇ ದಿನ ತೆರೆಗೆ ಬರುವ ಸನ್ನಿವೇಶವೂ ಸೃಷ್ಟಿಯಾಗಿದೆ. ದಸರಾ, ದೀಪಾವಳಿ, ಕ್ರಿಸ್‌ಮಸ್‌, ಸಂಕ್ರಾಂತಿ ಹಬ್ಬಗಳಿಗೆ ದೊಡ್ಡ ಚಿತ್ರಗಳು ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ.

  ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಭಾಗ 1 ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಡಿಸೆಂಬರ್ 17 ರಂದು ಪುಷ್ಪ ಚಿತ್ರ ಐದು ಭಾಷೆಯಲ್ಲಿ ಥಿಯೇಟರ್‌ಗೆ ಬರ್ತಿದೆ. ಅದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ಇದುವರೆಗೂ ಪುಷ್ಪ ಚಿತ್ರಕ್ಕೆ ಯಾವ ಬೇರೆ ಸಿನಿಮಾನೂ ಎದುರಾಗಿ ಬರ್ತಿಲ್ಲ. ಈಗಿನ ವರದಿಗಳಂತೆ ಮೆಗಾಸ್ಟಾರ್ ನಟನೆಯ ಆಚಾರ್ಯ ಸಿನಿಮಾ ಪುಷ್ಪ ರಿಲೀಸ್ ದಿನಾಂಕದ ಮೇಲೆ ಕಣ್ಣಿಟ್ಟಿದೆ ಎಂಬ ಸುದ್ದಿ ಕೇಳಿ ಬರ್ತಿದೆ.

  ಡಿಸೆಂಬರ್ 17ಕ್ಕೆ ಆಚಾರ್ಯ

  ಡಿಸೆಂಬರ್ 17ಕ್ಕೆ ಆಚಾರ್ಯ

  ಸದ್ಯದವರೆಗೂ ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದ ರಿಲೀಸ್ ದಿನಾಂಕ ಖಚಿತವಾಗಿಲ್ಲ. ದೀಪಾವಳಿ, ಕ್ರಿಸ್‌ಮಸ್, ಸಂಕ್ರಾಂತಿ ಹಬ್ಬಕ್ಕೆ ನಿರೀಕ್ಷೆಯ ಚಿತ್ರಗಳು ರೆಡಿಯಾಗಿವೆ. ಇವುಗಳ ಮಧ್ಯೆ ಇನ್ನು ಕಾಯಬೇಕು ಅಂದ್ರೆ ಜನವರಿ ಸೆಕೆಂಡ್ ಹಾಫ್‌ ಆದ್ಮೇಲೆ ಬರಬೇಕು. ಹಾಗಾಗಿ, ಈಗಿರುವ ದಿನಾಂಕಗಳಲ್ಲೇ ಯಾವುದಾದರೂ ಒಂದನ್ನು ಪಕ್ಕಾ ಮಾಡುವ ಆಲೋಚನೆಯಲ್ಲಿದ್ದ ಆಚಾರ್ಯ ಚಿತ್ರತಂಡ ಡಿಸೆಂಬರ್ 17ಕ್ಕೆ ಮುಹೂರ್ತ ನಿಗದಿ ಮಾಡಿದೆಯಂತೆ.

  ರಜನಿಕಾಂತ್‌ಗೆ ಬಾಲಯ್ಯ, ಅಲ್ಲು ಅರ್ಜುನ್‌ಗೆ ಚಿರಂಜೀವಿ ಸವಾಲು?ರಜನಿಕಾಂತ್‌ಗೆ ಬಾಲಯ್ಯ, ಅಲ್ಲು ಅರ್ಜುನ್‌ಗೆ ಚಿರಂಜೀವಿ ಸವಾಲು?

  ಆಚಾರ್ಯ ಎಂಟ್ರಿ, ಪುಷ್ಪ ಮುಂದಕ್ಕೆ

  ಆಚಾರ್ಯ ಎಂಟ್ರಿ, ಪುಷ್ಪ ಮುಂದಕ್ಕೆ

  ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಡಿಸೆಂಬರ್ 17ಕ್ಕೆ ಬರುವುದಾಗಿ ಈಗಾಗಲೇ ಘೋಷಿಸಿದೆ. ಈಗ ಆಚಾರ್ಯ ಚಿತ್ರವೂ ಅದೇ ದಿನ ಬರಲು ಮುಂದಾಗಿರುವ ಬಗ್ಗೆ ಸುದ್ದಿ ಇದೆ. ಒಂದು ವೇಳೆ ಆಚಾರ್ಯ ಅದೇ ದಿನ ಆಗಮನವಾಗುವುದಾದರೆ, ಪುಷ್ಪ ಸಿನಿಮಾ ಮುಂದಕ್ಕೆ ಹೋಗುವುದು ಪಕ್ಕಾ ಎನ್ನಲಾಗಿದೆ. ಮೊದಲೇ ಅಲ್ಲು ಅರ್ಜುನ್‌ಗೆ ಮೆಗಾಸ್ಟಾರ್ ಅಂದ್ರೆ ಅತಿಯಾದ ಗೌರವ. ಆಚಾರ್ಯ ಬರುವುದಾದರೆ ಪುಷ್ಪ ಪೋಸ್ಟ್ ಪೋನ್ ಮಾಡುವುದಕ್ಕೆ ಐಕಾನ್ ಸ್ಟಾರ್ ಸಿದ್ಧವಾಗಿದ್ದಾರೆ ಎಂಬ ಮಾತಿದೆ.

  ಮಾರ್ಚ್‌ಗೆ ಪುಷ್ಪ?

  ಮಾರ್ಚ್‌ಗೆ ಪುಷ್ಪ?

  ಒಂದು ವೇಳೆ ಆಚಾರ್ಯ ಚಿತ್ರಕ್ಕಾಗಿ ಪುಷ್ಪ ಚಿತ್ರತಂಡ ಮುಂದಕ್ಕೆ ಹೋಗುವುದಾದರೆ ಹೊಸ ದಿನಾಂಕ ಯಾವುದು ಎಂಬ ಕುತೂಹಲ ಕಾಡ್ತಿದೆ. ಈಗಿರುವ ಅಪ್‌ಡೇಟ್‌ ಪ್ರಕಾರ ಮಾರ್ಚ್ ತಿಂಗಳಲ್ಲಿ ಪುಷ್ಪ ಅದ್ಧೂರಿ ಬಿಡುಗಡೆಗೆ ಪ್ಲಾನ್ ಮಾಡಬಹುದು. ಪುಷ್ಪ ಕೊನೆಯ ಹಂತದ ಚಿತ್ರೀಕರಣ ಇನ್ನು ನಡೆಯುತ್ತಿದೆ. ಪ್ರಮುಖ ದೃಶ್ಯಗಳ ಶೂಟಿಂಗ್ ಮುಗಿದಿದ್ದು, ಬಾಕಿ ಉಳಿದಿರುವ ಕೆಲವು ಪೋಷನ್ ಮಾಡಬೇಕಿದೆ. ಜೊತೆಗೆ ಪೋಸ್ಟ್ ಪ್ರೊಡಕ್ಷನ್‌ ಕೆಲಸವೂ ಬಾಕಿ ಇದೆ. ಇದೆಲ್ಲ ಗಮನಿಸಿದರೆ ಪುಷ್ಪ ಚಿತ್ರತಂಡ ಮೆಗಾಸ್ಟಾರ್‌ಗೆ ದಾರಿ ಬಿಡಬಹುದು ಎಂದು ಹೇಳಲಾಗಿದೆ.

  'ಪುಷ್ಪ'ದಲ್ಲಿ ಬಾಲಿವುಡ್ ಬೆಡಗಿ ಡ್ಯಾನ್ಸ್: ಆಕೆ ಕೇಳ್ತಿದ್ದಾಳೆ ದುಬಾರಿ ಹಣ!'ಪುಷ್ಪ'ದಲ್ಲಿ ಬಾಲಿವುಡ್ ಬೆಡಗಿ ಡ್ಯಾನ್ಸ್: ಆಕೆ ಕೇಳ್ತಿದ್ದಾಳೆ ದುಬಾರಿ ಹಣ!

  ರಾಮ್ ಚರಣ್-ಚಿರಂಜೀವಿ

  ರಾಮ್ ಚರಣ್-ಚಿರಂಜೀವಿ

  ಕೊರಟಲಾ ಶಿವ ನಿರ್ದೇಶನದಲ್ಲಿ ತಯಾರಾಗಿರುವ ಆಚಾರ್ಯ ಚಿತ್ರವನ್ನು ರಾಮ್ ಚರಣ್ ತೇಜ ನಿರ್ಮಿಸಿದ್ದಾರೆ. ಚಿರಂಜೀವಿ, ಕಾಜಲ್ ಅಗರ್‌ವಾಲ್, ಸೋನು ಸೂದ್, ಸೌರವ್ ಲೋಕೇಶ್, ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ತೇಜ ಮತ್ತು ಪೂಜಾ ಹೆಗ್ಡೆ ಸಹ ಆಚಾರ್ಯ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

  ಸುಕುಮಾರ್ ಪುಷ್ಪ

  ಸುಕುಮಾರ್ ಪುಷ್ಪ

  ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಎರಡು ಭಾಗಗಳಾಗಿ ಪ್ರೇಕ್ಷಕರೆದುರು ಬರಲಿದೆ. ಅಲ್ಲು ಅರ್ಜುನ್ ಜೊತೆ ಮಲಯಾಳಂ ಖ್ಯಾತ ನಟ ಫಾಹದ್ ಫಾಸಿಲ್ ಹಾಗೂ ಕನ್ನಡದ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಪುಷ್ಪ ಸಿನಿಮಾದ ಎರಡನೇ ಹಾಡು ಅಕ್ಟೋಬರ್ 13ಕ್ಕೆ ಬರ್ತಿದೆ.

  English summary
  Chances for Allu Arjun starrer Pushpa to be postponed as Acharya is likely to release on December 17.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X