»   » 'ಬ್ರೇಕಿಂಗ್ ನ್ಯೂಸ್' ಕೊಡ್ತಾರಂತೆ ನಿರ್ದೇಶಕ ಆರ್.ಚಂದ್ರು

'ಬ್ರೇಕಿಂಗ್ ನ್ಯೂಸ್' ಕೊಡ್ತಾರಂತೆ ನಿರ್ದೇಶಕ ಆರ್.ಚಂದ್ರು

Posted By:
Subscribe to Filmibeat Kannada

ನಿರ್ದೇಶಕ ಆರ್.ಚಂದ್ರು ಸದ್ಯದಲ್ಲೇ 'ಬ್ರೇಕಿಂಗ್ ನ್ಯೂಸ್' ಒಂದನ್ನ ಕೊಡ್ತಾರಂತೆ. ಹೀಗಂತ ಹೇಳಿದವರು ಅವರೇ. ಅದಕ್ಕೆ ಕಾರಣ ಅವರಿಗೆ ಸಿಕ್ಕಿರುವ ಬೊಂಬಾಟ್ ಆಫರ್..!

ಬೊಂಬಾಟ್ ಆಫರ್ ಅಂದ್ರೆ, ಆರ್.ಚಂದ್ರು ಏನಾದ್ರೂ ಬಾಲಿವುಡ್ ಗೆ ಹಾರಲಿದ್ದಾರಾ.? ಟಾಲಿವುಡ್ ಸೂಪರ್ ಸ್ಟಾರ್ ಗಳ ಕಾಲ್ ಶೀಟ್ ಹಿಡಿದಿದ್ದಾರಾ ಅಂದ್ರೆ ಖಂಡಿತ ಇಲ್ಲ. ಪ್ರಖ್ಯಾತ ರಾಜಕಾರಣಿ ಒಬ್ಬರು ಇಂದು ಬೆಳ್ಳಗ್ಗೆ ಆರ್.ಚಂದ್ರು ರನ್ನ ಭೇಟಿ ಮಾಡಿದ್ದಾರೆ.

ಅಲ್ಲಿಗೆ, ಆರ್.ಚಂದ್ರು ರಾಜಕಾರಣಕ್ಕೆ ಧುಮುಕಲಿದ್ದಾರೆ ಅಂತ ನೀವೇ ನಿರ್ಧಾರಕ್ಕೆ ಬರುವ ಮುನ್ನ ಪೂರಾ ಮ್ಯಾಟರ್ ಕೇಳಿ. ಅಂದ್ಹಾಗೆ, ಆ ಪ್ರಸಿದ್ಧ ರಾಜಕಾರಣಿ ಆರ್.ಚಂದ್ರು ಭೇಟಿ ಮಾಡಿದಕ್ಕೆ ಕಾರಣ ಅವರ ಸುಪುತ್ರನ ಸಿಲ್ವರ್ ಸ್ಕ್ರೀನ್ ಎಂಟ್ರಿ ಬಗ್ಗೆ ಮಾತನಾಡುವುದಕ್ಕೆ. [ಅಣ್ಣಾವ್ರ ಹುಟ್ಟುಹಬ್ಬಕ್ಕಿಲ್ಲ ಶಿವಣ್ಣನ 'ಬಾದ್ ಷ'..!?]

R.Chandru to launch a famous Politician's son to Silver Screen

ಹೌದು, ರಾಜಕಾರಣಿಯೊಬ್ಬರ ಮಗನನ್ನ ಬೆಳ್ಳಿತೆರೆಗೆ ಪರಿಚಯಿಸುವ ಸುವರ್ಣಾವಕಾಶ ಒಂದು ನಿರ್ದೇಶಕ ಆರ್.ಚಂದ್ರು ಬಳಿ ಹುಡುಕ್ಕೊಂಡು ಬಂದಿದೆ. ಆರ್.ಚಂದ್ರು ನಿರ್ದೇಶನದ ಎಲ್ಲಾ ಚಿತ್ರಗಳನ್ನ ನೋಡಿ ಮೆಚ್ಚಿಕೊಂಡಿರುವ ಆ ರಾಜಕಾರಣಿ ಮತ್ತವರ ಮಗ, ಚಂದ್ರು ಗರಡಿಯಲ್ಲೇ ಲಾಂಚ್ ಆಗಬೇಕು ಅಂತ ಡಿಸೈಡ್ ಮಾಡಿದ್ದಾರಂತೆ. ['ಕುಚ್ಚಿಕ್ಕು' ಗೆಳೆಯರೆಂದರೆ ಹೀಗಿರಬೇಕು ನೋಡಿ...]

ಸದ್ಯಕ್ಕೆ 'ಮಳೆ' ಮತ್ತು 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರಗಳಲ್ಲಿ ಬಿಜಿಯಾಗಿರುವ ಆರ್.ಚಂದ್ರು, ಅವೆರಡು ಮುಗಿದ ಬಳಿಕ ಶಿವಣ್ಣನ 'ಬಾದ್ ಷ' ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಅಷ್ಟರಲ್ಲಿ ಒಳ್ಳೆ ಸ್ಕ್ರಿಪ್ಟ್ ಮಾಡುತ್ತೇನೆ ಅಂತ ರಾಜಕಾರಣಿಗೆ ಭರವಸೆ ನೀಡಿದ್ದಾರಂತೆ.

ಅಂದ್ಹಾಗೆ ಆ ರಾಜಕಾರಣಿ ಯಾರು ಅಂತ ಆರ್.ಚಂದ್ರು ಬಾಯಿಬಿಡ್ಲಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಲ್ಲ ಅನ್ನೋದನ್ನ ಮಾತ್ರ ಕನ್ಫರ್ಮ್ ಮಾಡಿದ್ದಾರೆ. ಎಲ್ಲವೂ ಚಂದ್ರು ಪ್ಲಾನ್ ಪ್ರಕಾರ ನಡೆದು ಈ ಪ್ರಾಜೆಕ್ಟ್ ಪಕ್ಕಾ ಆದ್ರೆ ಸದ್ಯದಲ್ಲೇ 'ಬ್ರೇಕಿಂಗ್ ನ್ಯೂಸ್' ಕೊಡ್ತಾರಂತೆ.

English summary
According to the sources, R.Chandru has bagged an offer from a famous politician to launch his son to Silver Screen. The director, who is currently busy in two films, has agreed the offer. The Politician and his son identity is confidential as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada