twitter
    For Quick Alerts
    ALLOW NOTIFICATIONS  
    For Daily Alerts

    ಸೌತ್‌ ಸಿನಿಮಾರಂಗಕ್ಕೆ ಬಾಲಿವುಡ್‌ ಮೀರಿಸಲು ಸಾಧ್ಯವಿಲ್ಲ: ನಟ ಮಾಧವನ್!

    |

    ಬಾಲಿವುಡ್ ಸಿನಿಮಾರಂಗ ಸೋಲಿನ ಸುಳಿಯಲ್ಲಿ ಸಿಲುಕಿದೆ. ಬಾಲಿವುಡ್‌ನಲ್ಲಿ ಸರಣಿ ಸೋಲು ಮುಂದುವರೆದಿದೆ. ದೊಡ್ಡ ಸಿನಿಮಾಗಳು, ಸ್ಟಾರ್ ನಟರ ಚಿತ್ರಗಳು, ಭಾರಿ ನಿರೀಕ್ಷೆ ಹುಟ್ಟುಹಾಕಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲು ಕಾಣುತ್ತಿವೆ.

    ಇತ್ತೀಚಿಗಷ್ಟೆ ರಿಲೀಸ್ ಆದ ಬಾಲಿವುಡ್‌ನ ನಿರೀಕ್ಷಿತ ಸಿನಿಮಾ 'ಲಾಲ್ ಸಿಂಗ್ ಚಡ್ಡ'. ಈ ಚಿತ್ರದಲ್ಲಿ ನಟ ಆಮಿರ್ ಖಾನ್ ಮತ್ತು ಕರೀನಾ ಕಪೂರ್ ಜೋಡಿಯಾಗಿದೆ. ಜೊತೆಗೆ ಅಕ್ಷಯ್ ಕುಮಾರ್ ಅಭಿನಯದ 'ರಕ್ಷಾಬಂಧನ್' ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿವೆ.

    ಬಾಯ್‌ಕಾಟ್ ಎನ್ನುವರ ಬಾಯ್‌ಕಾಟ್ ಮಾಡಿ: ಮೊಬೈಲ್ ಪಕ್ಕಕ್ಕಿಟ್ಟು ಒಳ್ಳೆ ಸಿನಿಮಾ ನೋಡಿಬಾಯ್‌ಕಾಟ್ ಎನ್ನುವರ ಬಾಯ್‌ಕಾಟ್ ಮಾಡಿ: ಮೊಬೈಲ್ ಪಕ್ಕಕ್ಕಿಟ್ಟು ಒಳ್ಳೆ ಸಿನಿಮಾ ನೋಡಿ

    ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾಗಳು ಸದ್ದು ಮಾಡಿಲ್ಲ. ಈ ನಡುವೆ ಬಾಲಿವುಡ್‌ಗೆ ಬಾಯ್‌ಕಾಟ್ ಸಮಸ್ಯೆ ಕೂಡ ಎದುರಾಗಿದೆ. ಹಲವು ಹಿಂದಿ ಸಿನಿಮಾಗಳ ವಿರುದ್ಧ ಬಾಯ್‌ಕಾಟ್ ಅಭಿಯಾನ ಕೂಡ ನಡೆದಿದೆ. ಎಲ್ಲೆಲ್ಲೂ ಸೌತ್ ಸಿನಿಮಾಗಳೇ ಬೆಸ್ಟ್ ಎನ್ನುವ ಮಾತು ಕೇಳಿ ಬರ್ತಿದೆ.

    ಬಾಕ್ಸಾಫೀಸ್‌ನಲ್ಲಿ ನೆಲಕಚ್ಚಿದ 'ಲಾಲ್ ಸಿಂಗ್ ಚಡ್ಡ'!

    ಬಾಕ್ಸಾಫೀಸ್‌ನಲ್ಲಿ ನೆಲಕಚ್ಚಿದ 'ಲಾಲ್ ಸಿಂಗ್ ಚಡ್ಡ'!

    ಇತ್ತೀಚಿಗೆ ರಿಲೀಸ್ ಆದ 'ಲಾಲ್ ಸಿಂಗ್ ಚಡ್ಡ' ಸಿನಿಮಾಗೂ ಬಾಯ್‌ಕಾಟ್ ಸಮಸ್ಯೆ ಎದುರಿಸಿತ್ತು. ಈ ಸಿನಿಮಾ ರಿಲೀಸ್ ಆದ ಮೊದಲ 6 ದಿನಗಳಲ್ಲಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಒದ್ದಾಡಿದೆ. ಆಮಿರ್ ಖಾನ್ ಬಹುತೇಕ ಸಿನಿಮಾಗಳು ರಿಲೀಸ್ ಆದ ದಿನವೇ 50ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿದ್ದವು. ಆದರೆ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಹೀನಾಯ ಸೋಲು ಕಂಡಿದೆ. ಸಾಲು ಸಾಲು ಸೋಲುಗಳಿಂದ ಬೇಸತ್ತಿದ್ದ ಬಾಲಿವುಡ್‌ಗೆ ಆಮಿರ್ ಖಾನ್ ಮೇಲೆ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ.

    'ಲಾಲ್ ಸಿಂಗ್ ಚಡ್ಡ' ಸಿನಿಮಾದಿಂದ ವಿತರಕರಿಗೆ ನಷ್ಟವಾಗಿದೆ ಎಂಬುದು ಸುಳ್ಳು: ನಿರ್ಮಾಣ ಸಂಸ್ಥೆ'ಲಾಲ್ ಸಿಂಗ್ ಚಡ್ಡ' ಸಿನಿಮಾದಿಂದ ವಿತರಕರಿಗೆ ನಷ್ಟವಾಗಿದೆ ಎಂಬುದು ಸುಳ್ಳು: ನಿರ್ಮಾಣ ಸಂಸ್ಥೆ

    ಬಾಲಿವುಡ್ ಸೋಲಿನ ಬಗ್ಗೆ ಮಾಧವನ್ ಮಾತು!

    ಬಾಲಿವುಡ್ ಸೋಲಿನ ಬಗ್ಗೆ ಮಾಧವನ್ ಮಾತು!

    ಬಾಲಿವುಡ್ ಸಿನಿಮಾಗಳ ಹೀನಾಯ ಸೋಲಿನ ಬಗ್ಗೆ 'ರಾಕೆಟ್ರಿ' ಸ್ಟಾರ್ ಆರ್ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಮತ್ತು ಸೌತ್ ಸಿನಿಮಾರಂಗವನ್ನು ಹೋಲಿಕೆ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ. ಇತ್ತೀಚೆಗೆ ಸೌತ್ ಸಿನಿಮಾರಂಗದಿಂದ ಬಂದ 'RRR', 'ಕೆಜಿಎಫ್ 2', 'ವಿಕ್ರಮ್' ಮತ್ತು 'ವಿಕ್ರಾಂತ್ ರೋಣ' ಮುಂತಾದ ಸಿನಿಮಾಗಳು ಒಂದೇ ಅವಧಿಯಲ್ಲಿ ಕೋಟಿ ಕೋಟಿ ಹಣ ಬಾಚಿಕೊಂಡಿವೆ. ಈ ಸಿನಿಮಾಗಳು ಹಿಂದಿ ಚಿತ್ರಗಳ ಕಲೆಕ್ಷನ್ ಮೀರಿಸಿವೆ. ಈ ಬಗ್ಗೆ ಮಾಧವನ್ ಅವರಿಗೆ ಪ್ರಶ್ನೆ ಎದುರಾಗಿದೆ. 'ದೋಖ' ಸಿನಿಮಾದ ಟ್ರೈಲರ್ ರಿಲೀಸ್‌ಗೆ ಆಗಮಿಸಿದ್ದ ಮಾಧವನ್ ಈ ಬಗ್ಗೆ ಮಾತನಾಡಿದ್ದಾರೆ.

    ಬಾಲಿವುಡ್‌ ಮೀರಿಸಲ್ಲ ಸೌತ್: ಮಾಧವನ್!

    ಬಾಲಿವುಡ್‌ ಮೀರಿಸಲ್ಲ ಸೌತ್: ಮಾಧವನ್!

    ಇನ್ನು ದಕ್ಷಿಣ ಭಾರಾತ ಸಿನಿಮಾಗಳ ಯಶಸ್ಸಿನ ಬಗ್ಗೆ ಮಾತನಡಿದ ಅವರು, "ಇದೇ ವೇಳೆ ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಮೀರಿಸುತ್ತವೆ ಎನ್ನುವ ಗ್ರಹಿಕೆ ತಪ್ಪು. ದಕ್ಷಿಣದಿಂದ ಬಂದ 'ಬಾಹುಬಲಿ 1', 'ಬಾಹುಬಲಿ 2', 'RRR', ' ಪುಷ್ಪ', 'ಕೆಜಿಎಫ್ 1' ಮತ್ತು 'ಕೆಜಿಎಫ್ 2' ಮಾತ್ರ ಹಿಂದಿ ಚಲನಚಿತ್ರ ನಟರ ಚಲನಚಿತ್ರಗಳಿಗಿಂತ ಉತ್ತಮವಾಗಿದ್ದು, ಸೂಪರ್ ಹಿಟ್ ಆಗಿವೆ. ಕೇವಲ ಐದಾರು ಚಿತ್ರಗಳು ಹಿಟ್ ಆಗಿದ್ದಕ್ಕೆ ಸೌತ್ ಸಿನಿರಂಗ ಬಾಲಿವುಡ್‌ಗೆ ಮಾದರಿ ಅಂತ ಹೇಳಲು ಸಾಧ್ಯವಿಲ್ಲ. ಒಳ್ಳೆಯ ಚಿತ್ರಗಳು ಬಂದರೆ ಬಾಲಿವುಡ್ ಸಿನಿಮಾಗಳು ಹಿಟ್ ಆಗುತ್ತವೆ" ಎಂದು ಹೇಳಿದ್ದಾರೆ ಮಾಧವನ್.

    ಪ್ರೇಕ್ಷಕರ ಅಭಿರುಚಿ ಬದಲಾಗಿದೆ!

    ಪ್ರೇಕ್ಷಕರ ಅಭಿರುಚಿ ಬದಲಾಗಿದೆ!

    ಇನ್ನು 'ಲಾಲ್ ಸಿಂಗ್ ಚಡ್ಡ' ಚಿತ್ರದ ಸೋಲಿನ ಬಗ್ಗೆ ಮಾತನಾಡಿ. "ಲಾಲ್ ಸಿಂಗ್ ಚಡ್ಡ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವರ್ಕೌಟ್ ಆಗಿಲ್ಲ ಎಂದರೆ, ನಾವೆಲ್ಲರೂ ಹಿಟ್ ಚಿತ್ರಗಳನ್ನು ಮಾತ್ರ ಮಾಡುತ್ತಿದ್ದೆವು. ನಾವು ಫ್ಲಾಪ್ ಚಿತ್ರ ಮಾಡುತ್ತಿದ್ದೇವೆ ಎಂದು ಯಾರಿಗೂ ಗೊತ್ತಿರಲ್ಲ. ಎಲ್ಲಾ ಸಿನಿಮಾಗಳನ್ನು ಒಳ್ಳೆಯ ಸಿನಿಮಾ ಎಂದುಕೊಂಡೇ ಕೆಲಸ ಮಾಡುತ್ತೇವೆ. ಪ್ರೇಕ್ಷಕರಿಗೆ ಉತ್ತಮ ಕಂಟೆಂಟ್ ಇರುವ ಸಿನಿಮಾ ನೀಡಿದರೆ, ಭಾಷೆಯ ಹೊರತಾಗಿಯೂ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ವೀಕ್ಷಿಸುತ್ತಾರೆ. ಕೊರೊನಾ ಬಳಿಕ ಪ್ರೇಕ್ಷಕರ ಆಧ್ಯತೆ ಬದಲಾಗಿದೆ. ಹಿಂದಿ ಸಿನಿಮಾಗಳ ಸೋಲಿಗೆ ಇದೇ ಕಾರಣ." ಎಂದು ಮಾಧವನ್ ಹೇಳಿದರು.

    English summary
    R Madhavan Says South Films Are Not Model For Bollywood Films, Know More,
    Friday, August 19, 2022, 12:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X