For Quick Alerts
  ALLOW NOTIFICATIONS  
  For Daily Alerts

  'ಲವ್ ಮಾಕ್ಟೈಲ್ 2' ಚಿತ್ರಕ್ಕೆ ನಾಯಕಿ ಸಿಕ್ಕಿದ್ಲು, ಯಾರು ಈ ರಾಚೆಲ್ ಡೇವಿಡ್?

  |

  'ಲವ್ ಮಾಕ್ಟೈಲ್' ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಲವ್ ಮಾಕ್ಟೈಲ್ 2 ಸಿನಿಮಾ ಘೋಷಣೆ ಮಾಡಿದ್ದರು ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಫಸ್ಟ್ ಲುಕ್ ಸಹ ಬಿಡುಗಡೆಯಾಗಿತ್ತು.

  ಆದರೆ, 'ಲವ್ ಮಾಕ್ಟೈಲ್-2' ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಕಾಡುತ್ತಿತ್ತು. ಅಂತಿಮವಾಗಿ ಮುಂದುವರಿದ ಮಾಕ್ಟೈಲ್ ಕಥೆಗೆ ನಾಯಕಿ ಸಿಕ್ಕಿದ್ದಾಳೆ. ಇದು ಈಕೆಗೆ ಮೊದಲ ಕನ್ನಡ ಸಿನಿಮಾ. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡುತ್ತಿರುವ ಲವ್ ಮಾಕ್ಟೈಲ್ 2 ಚಿತ್ರಕ್ಕೆ ರಾಚೆಲ್ ಡೇವಿಡ್ ನಾಯಕಿಯಾಗಿದ್ದಾರೆ ಎಂದು ಸುದ್ದಿ ಹೊರಬಿದ್ದಿದೆ. ಆದರೆ, ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಯಾರು ಈ ರಾಚೆಲ್ ಡೇವಿಡ್? ಮುಂದೆ ಓದಿ...

  ಬೆಂಗಳೂರಿನ ಹುಡುಗಿ

  ಬೆಂಗಳೂರಿನ ಹುಡುಗಿ

  ರಾಚೆಲ್ ಡೇವಿಡ್ ಮೂಲತಃ ಬೆಂಗಳೂರಿನ ಹುಡುಗಿ. ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಓದಿರುವ ರಾಚೇನ್, ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದುಕೊಂಡಿದ್ದಾರೆ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು.

  ಲವ್ ಮಾಕ್ಟೇಲ್ 2 ಚಿತ್ರಕ್ಕೆ ಎಂಟ್ರಿ ಕೊಟ್ಟ ಹೊಸ ನಟಿ ಸುಶ್ಮಿತಾ

  ರಾಚೆಲ್ ಡೇವಿಡ್ ಕೇರಳದವರು

  ರಾಚೆಲ್ ಡೇವಿಡ್ ಕೇರಳದವರು

  ರಾಚೆಲ್ ಡೇವಿಡ್ ಅವರ ತಂದೆ ಮೂಲತಃ ಕೇರಳದವರು. ಆದರೆ, ರಾಚೆಲ್ ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ಅವರ ತಂದೆ ಮೈಸೂರಿನಲ್ಲಿ ಗಾರ್ಮೆಂಟ್ಸ್ ನಡೆಸುತ್ತಿದ್ದರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಚೆಲ್ ತಾಯಿ ಮತ್ತು ತಂಗಿ ಸಹ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

  ಮೋಹನ್‌ ಲಾಲ್‌ ಮಗನ ಚಿತ್ರದಲ್ಲಿ ನಾಯಕಿ

  ಮೋಹನ್‌ ಲಾಲ್‌ ಮಗನ ಚಿತ್ರದಲ್ಲಿ ನಾಯಕಿ

  ಮೋಹನ್‌ ಲಾಲ್‌ ಅವರ ಪುತ್ರ ಪ್ರಣವ್ ಮೋಹನ್‌ ಲಾಲ್‌ ಜೊತೆಗೆ 'ಇರುಪತಿಯೊನ್ನಮ್ ನೂಟ್ರಾಂಡು' ಚಿತ್ರದಲ್ಲಿ ರಾಚೆಲ್ ಡೇವಿಡ್ ನಟಿಸಿದ್ದರು. ನಂತರ 'ಒರೊನ್ನನರ ಪ್ರಣಯಕದಾ' ಹಾಗೂ 'ಕಬೀರಿಂದೆ ದಿವಸಂಗಳ್' ಚಿತ್ರಗಳಲ್ಲು ಅಭಿನಯಿಸಿದರು. ಇದೀಗ, 'ಕಾವಲ್' ಎಂಬ ಚಿತ್ರ ಮಾಡಿದ್ದು, ಇನ್ನು ಬಿಡುಗಡೆಯಾಗಿಲ್ಲ.

  ಅಕ್ಟೋಬರ್ 16ಕ್ಕೆ ಮತ್ತೆ 'ಲವ್ ಮೋಕ್ಟೆಲ್' ಸಿನಿಮಾ ಬಿಡುಗಡೆ

  ಕನ್ನಡದಲ್ಲಿ ಮೊದಲ ಸಿನಿಮಾ ಇದು

  ಕನ್ನಡದಲ್ಲಿ ಮೊದಲ ಸಿನಿಮಾ ಇದು

  ಬೆಂಗಳೂರಿನ ಹುಡುಗಿ ಆಗಿದ್ದರೂ ಇದುವರೆಗು ಕನ್ನಡದಲ್ಲಿ ಸಿನಿಮಾ ಮಾಡಿರಲಿಲ್ಲ. ಇದೀಗ, ಲವ್ ಮಾಕ್ಟೈಲ್ 2 ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಇದಕ್ಕೂ ಮುಂಚೆ ಸುಶ್ಮಿತಾ ಎಂಬ ನವನಟಿ ಸಹ ಲವ್ ಮಾಕ್ಟೈಲ್ 2 ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

  English summary
  Rachel David Bags the Female Lead in Darling Krishna's Love Mocktail Sequel. the movie directed by Darling Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X