»   » ಶ್ರೀಕೃಷ್ಣನಾದ ಕಿಚ್ಚನ ಜೊತೆ ಇಬ್ಬರು ಗೋಪಿಕೆಯರು, ಯಾರವರು.?

ಶ್ರೀಕೃಷ್ಣನಾದ ಕಿಚ್ಚನ ಜೊತೆ ಇಬ್ಬರು ಗೋಪಿಕೆಯರು, ಯಾರವರು.?

Posted By:
Subscribe to Filmibeat Kannada

ಹಿಂದಿ 'ಓ ಮೈ ಗಾಡ್' ಚಿತ್ರದ ರೀಮೇಕ್ ಆಗಿರುವ 'ಮುಕುಂದ ಮುರಾರಿ' ಫಸ್ಟ್ ಲುಕ್ ಮೊನ್ನೆ ಮೊನ್ನೆ ರಿಲೀಸ್ ಆಯ್ತು. ಕಿಚ್ಚ ಸುದೀಪ್ ಅವರು ಶ್ರೀಕೃಷ್ಣನ ಅವತಾರದಲ್ಲಿ ಕಾಣಿಸಿಕೊಂಡಿರುವ ಫಸ್ಟ್ ಲುಕ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಸುಳ್ಳಲ್ಲ.

ಇದೀಗ ಈ ಚಿತ್ರತಂಡದಿಂದ ಮತ್ತೊಂದು ಬ್ಲಾಸ್ಟಿಂಗ್ ನ್ಯೂಸ್ ಹೊರಬಿದ್ದಿದೆ. ಈ ಚಿತ್ರದಲ್ಲಿ ಸುದೀಪ್ ಅವರಿಗಾಗಿ ಅಂತಾನೇ ಒಂದು ವಿಶೇಷ ಹಾಡಿದ್ದು, ಆ ಹಾಡಿನಲ್ಲಿ ಕಿಚ್ಚನಿಗೆ ಸಾಥ್ ಕೊಡಲು ಇಬ್ಬರು ಸುಂದರಿಯರು ಇರುತ್ತಾರಂತೆ. ['ಮುಕುಂದ ಮುರಾರಿ' ಅಡ್ಡದಿಂದ ಲೀಕ್ ಆಗಿರುವ 'ಕೃಷ್ಣ' ಸುದೀಪ್ ಫೋಟೋ ಇದೇ.!] ಯಾರು ಆ ಸುಂದರಿಯರು ಮುಂದೆ ಓದಿ......


ರಚಿತಾ ರಾಮ್ ಮತ್ತು ಭಾವನಾ

ಅವರು ಬೇರಾರು ಅಲ್ಲ, 'ರನ್ನ'ನ ರಾಣಿ ರಚಿತಾ ರಾಮ್ ಮತ್ತು 'ವಿಷ್ಣುವರ್ಧನ'ನ ಬೆಡಗಿ ಭಾವನಾ ಮೆನನ್ ಎನ್ನುತ್ತಿವೆ ಚಿತ್ರತಂಡದ ಮೂಲಗಳು.[ಉಪ್ಪಿ ಹುಟ್ಟುಹಬ್ಬಕ್ಕೆ 'ಮುಕುಂದ ಮುರಾರಿ' ರಿಲೀಸ್.?]


ಉಪ್ಪಿ ಮತ್ತು ಕಿಚ್ಚನ ಜುಗಲ್ ಬಂದಿ

ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರು ಒಂದಾಗಿ ಕಾಣಿಸಿಕೊಂಡಿದ್ದಾರೆ. ನಟಿ ನಿಖಿತಾ ತುಕ್ರಾಲ್ ಅವರು ಉಪ್ಪಿ ಜೊತೆ ಡ್ಯುಯೆಟ್ ಹಾಡುತ್ತಿದ್ದು, ನಟ ರವಿಶಂಕರ್ ಅವರು ಲೀಲಾನಂದ ಸ್ವಾಮೀಜಿಯಾಗಿ ಮಿಂಚಿದ್ದಾರೆ.


ಲಿಸ್ಟ್ ನಲ್ಲಿದ್ದರು ನಾಲ್ವರು ಬೆಡಗಿಯರು

ಶ್ರೀ ಕೃಷ್ಣ ಪರಮಾತ್ಮನಾಗಿ ಕಾಣಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ್ ಅವರ ಜೊತೆ ವಿಶೇಷ ಹಾಡಿಗೆ ಹೆಜ್ಜೆ ಹಾಕಲು, ಈ ಮೊದಲು ಗುಳಿಕೆನ್ನೆ ಬೆಡಗಿ ರಚಿತಾ ರಾಮ್, ಭಾವನಾ, ತೆಲುಗು ನಡಿ ರೆಜಿನಾ ಕಸೆಂಡ್ರಾ ಮತ್ತು ಲಕ್ಷ್ಮಿ ರೈ ಅವರು ಲಿಸ್ಟ್ ನಲ್ಲಿದ್ದರು. ಕೊನೆಗೆ ರಚಿತಾ ರಾಮ್ ಮತ್ತು ಭಾವನಾ ಅವರು ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.


'ಹೆಬ್ಬುಲಿ' ಶೂಟ್ ನಲ್ಲಿ ಕಿಚ್ಚ ಬಿಜಿ

ಸದ್ಯಕ್ಕೆ ಕಾಶ್ಮೀರದಲ್ಲಿ 'ಹೆಬ್ಬುಲಿ' ಶೂಟಿಂಗ್ ನಲ್ಲಿ ಬಿಜಿಯಾಗಿರುವ ಕಿಚ್ಚ ಸುದೀಪ್ ಅವರು ವಾಪಸಾದ ಮೇಲೆ ಈ ವಿಶೇಷ ಹಾಡಿನ ಶೂಟಿಂಗ್ ನಡೆಯಲಿದೆ, ಎನ್ನುತ್ತಿವೆ ಮೂಲಗಳು. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


ಉಪ್ಪಿ ಬರ್ತ್ ಡೇಗೆ ಆಡಿಯೋ

ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದಂದು ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಮೊದಲು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಸುದೀಪ್ ಅವರ ಮೊದಲ ನೋಟ ಬಿಡುಗಡೆ ಮಾಡಿದ್ದಾರೆ.


English summary
The makers of Kannada Movie 'Mukunda Murari', who were planning a special song with Sudeep in Mukunda Murari are likely to feature Rachita Ram and Bhavana. Directed by Nanda Kishore, the film will also see Upendra in the lead along with Nikitha Thukral.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada