For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್.!

  |
  ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್.! | FILMIBEAT KANNADA

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸುತ್ತಿರುವ ಪೊಗರು ಸಿನಿಮಾ ಬಹುದೊಡ್ಡ ಸದ್ದು ಮಾಡ್ತಿದೆ. ಪೋಸ್ಟರ್ ಮತ್ತು ಟೀಸರ್ ಮೂಲಕ ಪೊಗರು ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸುತ್ತಿದೆ.

  ಈ ಚಿತ್ರದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವುದು ಇನ್ನು ಕುತೂಹಲ ಹೆಚ್ಚಿಸಿದೆ. ಹೀಗಿರುವಾಗ, ಮತ್ತೊಂದು ಬಿಗ್ ಎಕ್ಸ್ ಕ್ಲೂಸಿವ್ ಸುದ್ದಿಯೊಂದು ಹೊರಬಿದ್ದಿದೆ.

  ಯುವರಾಜ್ ಕುಮಾರ್ ಡ್ಯಾನ್ಸ್ ನೋಡಿ ಕಣ್ಣೀರಿಟ್ಟ ತಾಯಿ ಮಂಗಳ

  ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ದೊಡ್ಮನೆ ನಟ ರಾಘವೇಂದ್ರ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಪಾತ್ರಕ್ಕಾಗಿ ರಾಘಣ್ಣ ಎಂಟ್ರಿ ಕೊಡಲಿದ್ದು, ಪೊಗರು ಚಿತ್ರದ ಧಮ್ಮು ಹೆಚ್ಚಲಿದೆಯಂತೆ. ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ.

  ವಿನಯ್ ಮದ್ವೆ ಬಗ್ಗೆ ರಾಘಣ್ಣ ಕೊಟ್ರು ಬಿಗ್ ಬ್ರೇಕಿಂಗ್.!

  ಸದ್ಯ, ಪೊಗರು ಚಿತ್ರದಲ್ಲಿ ರಾಘಣ್ಣನ ಪಾತ್ರದ ಬಗ್ಗೆ ಯಾವುದು ಸುಳಿವು ಸಿಕ್ಕಿಲ್ಲ. ಆದ್ರೆ, ಮುಖ್ಯಪಾತ್ರವೆಂಬುದು ಮಾತ್ರ ಪಕ್ಕಾ ಎನ್ನಲಾಗಿದೆ. ಇನ್ನುಳಿದಂತೆ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಪೊಗರು ಈಗ ಎರಡನೇ ಹಂತದ ಶೂಟಿಂಗ್ ಮಾಡುತ್ತಿದೆ.

  ಸುಮಾರು ವರ್ಷದ ನಂತರ ಮತ್ತೆ ಬಿಗ್ ಸ್ಕ್ರೀನ್ ಗೆ ಕಂಬ್ಯಾಕ್ ಮಾಡಿರುವ ರಾಘಣ್ಣ, 'ಅಮ್ಮನ ಮನೆ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ, ಪೊಗರು ಸಿನಿಮಾಗೂ ಓಕೆ ಎನ್ನುವ ಮೂಲಕ ತಮ್ಮ ಹೊಸ ಇನ್ನಿಂಗ್ ಭರ್ಜರಿಯಾಗಿ ಆರಂಭಿಸಿದ್ದಾರೆ.

  English summary
  Raghavendra rajkumar to star in dhruva sarja and rashmika starrer Pogaru. to play a major role in the film directed by nanda kishore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X