»   » ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಟಾಪ್ ಕಳಚಿಬಿದ್ದ ಕ್ಷಣ

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಟಾಪ್ ಕಳಚಿಬಿದ್ದ ಕ್ಷಣ

By: ರವಿಕಿಶೋರ್
Subscribe to Filmibeat Kannada

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರಿಗೆ ಎದುರಾದ ಇರುಸುಮುರುಸು ಪ್ರಸಂಗವಿದು. ಶಾರ್ಜಾದಲ್ಲಿ ನಡೆದ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ (SIIMA Awards 2013) ವರ್ಣರಂಜಿತ ಕಾರ್ಯಕ್ರಮದಲ್ಲಿ ಅವರು ವೇದಿಕೆ ಮೇಲೆ ಹೆಜ್ಜೆ ಹಾಕಬೇಕಾದರೆ ಅವರ ಟಾಪ್ ಕಳಚಿ ಬಿದ್ದಿದೆ.

ಆದರೆ ಅವರು ಮೈಮರೆತು ಕುಣಿಯುತ್ತಿದ್ದ ಕಾರಣ ಈ ಅಚಾತುರ್ಯ ಅವರ ಗಮನಕ್ಕೆ ಬಂದಿಲ್ಲ. ಆದರೆ ಕಾರ್ಯಕ್ರಮವನ್ನು ಕಣ್ಣಾರೆ ನೋಡುತ್ತಿದ್ದವರು ಮಾತ್ರ ಅವಾಕ್ ಆಗಿದ್ದಾರೆ. ಲೇಸ್ ಔಟ್ ಫಿಟ್ ಧರಿಸಿದ್ದ ಕಾರಣ ಇವರು ಕುಣಿಯುವ ರಭಸಕ್ಕೆ ಅದು ಸಡಿಲವಾಗಿ ಕೆಳಗೆ ಬಿದ್ದಿದೆ.


ಆದರೆ ಇದನ್ನು ಗಮನಿದ ಕಾರ್ಯಕ್ರಮದ ನಿರೂಪಕರು ಕೂಡಲೆ ಲೈಟ್ಸ್ ಡಿಮ್ ಮಾಡಿ ರಾಗಿಣಿ ಅವರನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ. ರಾಗಿಣಿ ಅನುಪಸ್ಥಿತಿಯಲ್ಲಿ ಹಾಡು ಮುಂದುವರಿಯಿತು ಎಂದು ಮೂಲಗಳು ತಿಳಿಸಿವೆ.

ಹಾಡು ಮುಗಿದ ಬಳಿಕ ಅವರು ಮತ್ತೊಂದು ದಿರಿಸಿನಲ್ಲಿ ವೇದಿಕೆಗೆ ಆಗಮಿಸಿದ ಪ್ರಶಸ್ತಿಯನ್ನು ಸ್ವೀಕರಿಸಿದರು. 'ಶಿವ' ಚಿತ್ರದಲ್ಲಿನ ಅಭಿನಯಕ್ಕಾಗಿ ಈ ಬಾರಿ ರಾಗಿಣಿ ಅವರಿಗೆ ಅತ್ಯುತ್ತಮ ನಟಿ (ಕ್ರಿಟಿಕ್ಸ್) ಪ್ರಶಸ್ತಿ ನೀಡಲಾಗಿದೆ.

ಈ ಬಗ್ಗೆ ರಾಗಿಣಿ ಪ್ರತಿಕ್ರಿಯಿಸಿದ್ದು, ಈ ಘಟನೆಯಿಂದ ತಾವು ವಿಚಲಿತರಾಗಿಲ್ಲ. ತಮ್ಮ ಗಮನವೆಲ್ಲಾ ಡಾನ್ಸ್ ಮೇಲೆ ಇತ್ತು. ಆಗ ತಮ್ಮ ಟಾಪ್ ಕಳಚಿಬಿತ್ತು. ಆದರೂ ನಾನು ಕಾನ್ಫಿಡೆಂಟ್ ಆಗಿಯೇ ಆಡುತ್ತಿದ್ದೆ. ಅದು ಕೇವಲ ಐದು ಸೆಕೆಂಡ್ ಗಳ ಕಾಲವಷ್ಟೇ ನಡೆದದ್ದು. ಈ ರೀತಿ ಒಂದಲ್ಲಾ ಒಂದು ತಾರೆಗೆ ಆಗುತ್ತಲೇ ಇರುತ್ತದೆ ಬಿಡಿ. ಈ ಬಗ್ಗೆ ತಾವು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

English summary
Kannada actress Ragini Dwivedi faces wardrobe malfunction at SIIMA awards 2013. After the performance started a mishap happened and Ragini who was busy performing didn’t notice the malfunction. 
Please Wait while comments are loading...