»   » ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ಯಾರು.?

ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ಯಾರು.?

Posted By:
Subscribe to Filmibeat Kannada

ಸ್ಟಾರ್ ನಟರಿಗೆ ಸಿಗುವ ಸಂಭಾವನೆಯಲ್ಲಿ ಅರ್ಧದಷ್ಟೂ ಕೂಡ ನಾಯಕಿಯರಿಗೆ ಸಿಗುವುದಿಲ್ಲ ಎಂಬ ಮಾತಿದೆ. ಇನ್ನೂ ಸ್ಯಾಂಡಲ್ ವುಡ್ ನಲ್ಲಿ ನಟಿಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೂಗು ಅಲ್ಲಲ್ಲಿ ಕೇಳಿ ಬಂದಿತ್ತು.

ಆದ್ರೀಗ, ಕನ್ನಡದ ನಟಿಯೊಬ್ಬರಿಗೆ ನೀಡಿರುವ ಸಂಭಾವನೆ ಬಗ್ಗೆ ಬ್ರೇಕ್ ಆಗಿರುವ ಸುದ್ದಿ ಕೇಳಿದ್ರೆ ನೀವು ಕಣ್ಣರಳಿಸುವುದು ಕನ್ಫರ್ಮ್. [ಐಂದ್ರಿತಾಗೂ ಮೊದಲೇ ಸ್ಯಾಂಡಲ್ ವುಡ್ ಬಗ್ಗೆ ಉರಿದುಬಿದ್ದಿದ್ದ ರಮ್ಯಾ.!]


ಸ್ಯಾಂಡಲ್ ವುಡ್ ಇತಿಹಾಸದಲ್ಲಿಯೇ ನಟಿಯೊಬ್ಬರಿಗೆ ಅತಿ ಹೆಚ್ಚು ಸಂಭಾವನೆ ನೀಡಲಾಗಿದೆ. ಯಾರು ಆ ನಟಿ, ಅಷ್ಟೊಂದು ಸಂಬಳ ನೀಡಲು ಮುಂದಾಗಿರುವ ಚಿತ್ರತಂಡ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ.....


ಆ ನಟಿ ಈಕೆಯೇ...ರಾಗಿಣಿ ದ್ವಿವೇದಿ..!

ಗಾಂಧಿನಗರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ಬೇರಾರೂ ಅಲ್ಲ, ನಟಿ ರಾಗಿಣಿ ದ್ವಿವೇದಿ.! ['ಸಂಭಾವನೆ' ವಿಚಾರದ ಬಗ್ಗೆ ಸಿಡಿದೆದ್ದ ನಟಿ ಸುಧಾರಾಣಿ]


ರಾಗಿಣಿ ಪಡೆದ ಸಂಭಾವನೆ ಎಷ್ಟು.?

ನಟಿ ರಾಗಿಣಿ ದ್ವಿವೇದಿ ರವರಿಗೆ ಬರೋಬ್ಬರಿ 75 ಲಕ್ಷ ರೂಪಾಯಿ ಸಂಭಾವನೆ ನೀಡಲು ನಿರ್ಮಾಪಕರು ಮುಂದಾಗಿದ್ದಾರಂತೆ.! [ನಟಿ ಐಂದ್ರಿತಾ ರೇ ಕೊಟ್ಟ ಏಟಿಗೆ ಕನ್ನಡ ಚಿತ್ರರಂಗದವರ ತಿರುಗೇಟು.!]


ಯಾವ ಚಿತ್ರಕ್ಕೆ.?

'ಜೋಗಿ' ಪ್ರೇಮ್ ಅಭಿನಯಿಸುವ 'ಗಾಂಧಿಗಿರಿ' ಚಿತ್ರಕ್ಕೆ ನಟಿ ರಾಗಿಣಿ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ನಿನ್ನೆಯಷ್ಟೇ ಬ್ರೇಕ್ ಆಗಿತ್ತು. ಈಗ ಅದೇ ಅಡ್ಡದಿಂದ ಬಂದಿರುವ ಸುದ್ದಿ ಪ್ರಕಾರ, ನಟಿ ರಾಗಿಣಿಗೆ 'ಗಾಂಧಿಗಿರಿ' ಚಿತ್ರದ ನಿರ್ಮಾಪಕರು 75 ಲಕ್ಷ ರೂಪಾಯಿ ಸಂಭಾವನೆ ನೀಡಲು ತಯಾರಿದ್ದಾರಂತೆ. ['ಗಾಂಧಿಗಿರಿ' ಚಿತ್ರದಲ್ಲಿ ಪ್ರೇಮ್ ಗೆ ರಾಗಿಣಿ ನಾಯಕಿ.!]


ಈವರೆಗೂ ಅತಿ ಹೆಚ್ಚು ಮೊತ್ತ.!

ಸ್ಯಾಂಡಲ್ ವುಡ್ ನಲ್ಲಿ ಇದುವರೆಗೂ ಯಾವ ನಟಿಗೂ ಸಂಭಾವನೆ ರೂಪದಲ್ಲಿ ಇಷ್ಟು ದೊಡ್ಡ ಮೊತ್ತ ಸಿಕ್ಕಿರ್ಲಿಲ್ಲ.


ಅತಿ ಹೆಚ್ಚು ಪಡೆದಿದ್ದವರು ರಮ್ಯಾ ಮಾತ್ರ

50-60 ಲಕ್ಷ ರೂಪಾಯಿ ಸಂಭಾವನೆ ಪಡೆದು 'ಕನ್ನಡದ ಹೈಯೆಸ್ಟ್ ಪೇಯ್ಡ್ ನಟಿ' ಎಂಬ ಟ್ಯಾಗ್ ಸಿಕ್ಕಿದ್ದು ರಮ್ಯಾ ಗೆ ಮಾತ್ರ.


ರಮ್ಯಾ ರವರನ್ನು ಮೀರಿಸಿದ್ದಾರೆ ರಾಗಿಣಿ

ಏಕ್ದಂ 75 ಲಕ್ಷ ರೂಪಾಯಿ ಪಡೆಯುವ ಮೂಲಕ ರಮ್ಯಾ ರವರನ್ನ ಹಿಂದಕ್ಕೆ ತಳ್ಳಿ ರಾಗಿಣಿ 'ಅತಿ ಹೆಚ್ಚು ಸಂಭಾವನೆ ಪಡೆದ ನಟಿ' ಪಟ್ಟಕ್ಕೆ ಏರಿದ್ದಾರೆ.


ತೆಳ್ಳಗೆ ಆದ್ಮೇಲೆ ರಾಗಿಣಿಗೆ ಡಿಮ್ಯಾಂಡ್.!

ದುಂಡು ದುಂಡಾಗಿದ್ದ ರಾಗಿಣಿ, ಜಿಮ್ ನಲ್ಲಿ ಹಗಲಿರುಳು ವರ್ಕೌಟ್ ಮಾಡಿ ತೆಳ್ಳಗೆ ಆದ್ಮೇಲೆ ಸ್ಯಾಂಡಲ್ ವುಡ್ ನಲ್ಲಿ ಅವರಿಗೆ ಡಿಮ್ಯಾಂಡ್ ಹೆಚ್ಚಾಗ್ಬಿಟಿದೆ.


'ಗಾಂಧಿಗಿರಿ' ಚಿತ್ರದಲ್ಲಿ ರಾಗಿಣಿ ಪಾತ್ರ ಏನು.?

'ಗಾಂಧಿಗಿರಿ' ಚಿತ್ರದಲ್ಲಿ ಶಿಕ್ಷಕಿ ಪಾತ್ರ ನಿರ್ವಹಿಸಲಿದ್ದಾರೆ ನಟಿ ರಾಗಿಣಿ.


ಸಂಭಾವನೆ ಬಗ್ಗೆ ರಾಗಿಣಿ ಖುಷಿ.!

''ಸಂಭಾವನೆ ಎಷ್ಟು ಅಂತ ನಾನು ಕಾಮೆಂಟ್ ಮಾಡಲ್ಲ. ಆದ್ರೆ, ಇವತ್ತು ಕನ್ನಡ ಚಿತ್ರರಂಗದಲ್ಲಿ ನಟಿಯರಿಗೂ ಗೌರವ ನೀಡುತ್ತಿರುವುದು ಖುಷಿ ತಂದಿದೆ'' ಎನ್ನುತ್ತಾರೆ ನಟಿ ರಾಗಿಣಿ


'ಗಾಂಧಿಗಿರಿ' ಚಿತ್ರದ ಬಗ್ಗೆ....

ರಘು ಹಾಸನ್ ಎಂಬುವರು ಆಕ್ಷನ್ ಕಟ್ ಹೇಳಲಿರುವ 'ಗಾಂಧಿಗಿರಿ' ಚಿತ್ರಕ್ಕೆ 'ಜೋಗಿ' ಪ್ರೇಮ್ ನಾಯಕ. ಅವರ ತಾಯಿ ಪಾತ್ರದಲ್ಲಿ ಅರುಂಧತಿ ನಾಗ್ ಬಣ್ಣ ಹಚ್ಚಲಿದ್ದಾರೆ. ['ಜೋಗಿ'ಗೆ ಮತ್ತೆ ಅಮ್ಮನಾದ ಅರುಂಧತಿ ನಾಗ್..!]


ಇದೇ ತಿಂಗಳಿಂದ ಶೂಟಿಂಗ್ ಶುರು.!

ಆಗಸ್ಟ್ 17 ರಿಂದ 'ಗಾಂಧಿಗಿರಿ' ಚಿತ್ರದ ಶೂಟಿಂಗ್ ಶುರುವಾಗಲಿದೆ


English summary
According to the reports, The makers of Kannada Movie 'Gandhigiri' have offered Kannada Actress Ragini Dwivedi Rs.75 lakh as Remuneration.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada