For Quick Alerts
  ALLOW NOTIFICATIONS  
  For Daily Alerts

  ಲಕ್ಕಿ ಸ್ಟಾರ್ ರಮ್ಯಾ ಮೀರಿಸಿದ 'ಐಪಿಎಸ್ ರಾಗಿಣಿ'

  |

  ರಾಗಿಣಿ ದ್ವಿವೇದಿ ಈಗ ಭಾರೀ ದುಬಾರಿ ನಟಿ. ಕಳ್ಳ ಮಳ್ಳ ಸುಳ್ಳ'ದ ತುಪ್ಪ ಬೇಕಾ ತುಪ್ಪ ಹಾಡು ದೊಡ್ಡ ಬಿರುಗಾಳಿ ಎಬ್ಬಿಸಿದಾಗಲೇ ರಾಗಿಣಿ ದ್ವಿವೇದಿ ತಮ್ಮ ಸಂಭಾವನೆಯನ್ನು ಏರಿಸಿಬಿಟ್ಟಿದ್ದಾರೆ. ಅದೀಗ ಬರೋಬ್ಬರಿ 36 ಲಕ್ಷ ಎಂಬುದು ಸುದ್ದಿಮೂಲಗಳ ಮಾಹಿತಿ.

  ಇತ್ತೀಚಿಗಷಗಟೇ 'ಬಂಗಾರಿ' ಚಿತ್ರೀಕರಣವನ್ನು ಮುಗಿಸಿರುವ ಈ ಸಿಂಗಾರಿ ರಾಗಿಣಿ, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿರುವ 'ರಾಗಿಣಿ ಐಪಿಎಸ್' ಬರೋಬ್ಬರಿ 36 ಲಕ್ಷ ರೂಪಾಯಿ ಪಡೆದಿದ್ದಾರೆ. ಆ ಮೂಲಕ ಲಕ್ಕಿ ಸ್ಟಾರ್ ರಮ್ಯಾರನ್ನು ಓವರ್ ಟೇಕ್ ಮಾಡಿದ್ದಾರೆ.

  ರಮ್ಯಾ ಸಂಭಾವನೆ ಸದ್ಯಕ್ಕೆ ಇಷ್ಟೊಂದಿಲ್ಲ. ಅವರದೇನಿದ್ದರೂ 30 ಲಕ್ಷ ರು ಸಮೀಪವಿದೆ ಅಷ್ಟೇ. ಆದರೆ ಈ ಇಬ್ಬರೂ ನಟಿಯರ ಕನ್ನಡದ ಟಾಪ್ ನಟಿಯರ ಲಿಸ್ಟ್ ನಲ್ಲೇ ಇದ್ದಾರೆ. ಅವರ ಸಮೀಪವಿರುವ ಮತ್ತೊಬ್ಬ ನಟಿ ಎಂದರೆ ಅದು ರಾಧಿಕಾ ಪಂಡಿತ್. ಇವೆಲ್ಲಾ ಕೇವಲ ಸುದ್ದಿಮೂಲಗಳಿಂದ ಬಂದ ಮಾಹಿತಿಗಳು.

  ರಾಗಿಣಿ ಈಗ ಸಿಕ್ಕ ಸಿಕ್ಕ ಆಫರ್ ಗಳಿಗೆ ಸಹಿ ಹಾಕುತ್ತಿಲ್ಲ. ತಾವು ಕೇಳಿದಷ್ಟು ಸಂಭಾವನೆ ಸಿಕ್ಕಿದರೆ ಮಾತ್ರ ಸರಿ, ಇಲ್ಲದಿದ್ದರೆ ಸೈಡ್ ಗೆ ಇರಿ ಎನ್ನುತ್ತಿದ್ದಾರೆ. ಆ ಕಾರಣಕ್ಕೆ ಇತ್ತೀಚಿಗೆ ರಾಗಿಣಿ ಕೈಯಲ್ಲಿರುವ ಚಿತ್ರಗಳು ಬೆರಳಣಿಕೆಯಷ್ಟೇ. ಬಿಡುಗಡೆಗೆ ಸಿದ್ಧವಾಗಿರುವ ಬಂಗಾರಿ ಬಿಟ್ಟರೆ ಶಿವ, ವಿಲನ್, ಹಾಗೂ ರಾಗಿಣಿ ಐಪಿಎಸ್ ಮಾತ್ರ.

  ಕೆ. ಮಂಜು ನಿರ್ಮಾಣದ 'ಕಳ್ಳ ಮಳ್ಳ ಸುಳ್ಳ' ಚಿತ್ರದ ಹಾಡಿನಲ್ಲೇ ರಾಗಿಣಿ ಭಾರೀ ಹೆಸರು ಮಾಡಿದ್ದು. ಕಾಕತಾಳೀಯ ಎನ್ನುವಂತೆ, ಈಗ ಅವರದ್ದೇ ನಿರ್ಮಾಣದ 'ರಾಗಿಣಿ ಐಪಿಎಸ್'ನಲ್ಲಿ ಬರೋಬ್ಬರಿ 36 ಲಕ್ಷ ರೂಪಾಯಿ ಬೇಡಿಕೆಯಿಟ್ಟು ಅದಕ್ಕೆ ಮಂಜು ಒಪ್ಪುವಂತೆ ಮಾಡಿದ್ದಾರೆ. ಜೊತೆಗೆ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

  ರಾಗಿಣಿಯ ಈ ದಿಢೀರ್ ಬೆಳವಣಿಗೆಯಿಂದಾಗಿ ಇತ್ತೀಚಿಗೆ ಕೆಲವು ನಿರ್ಮಾಪಕರು ರಾಗಿಣಿ ಕಾಲ್ ಶೀಟ್ ಪಡೆಯಲು ವಿಫಲರಾಗಿದ್ದಾರೆ. ಅದಕ್ಕೆ ಸಾಕ್ಷಿ, ದಿನೇಶ್ ಗಾಂಧಿ ತಮ್ಮ 'ಛತ್ರಪತಿ' ಚಿತ್ರಕ್ಕೆ ನಾಯಕಿಯಾಗ್ತೀರಾ ಅಂತ ರಾಗಿಣಿಯನ್ನು ಕೇಳಿರುವುದು ಹಾಗೂ ಅದಕ್ಕೆ ರಾಗಿಣಿ 45 ಲಕ್ಷ ರೂಪಾಯಿ ಸಂಭಾವನೆ ಕೊಡ್ತೀರಾ? ಎಂದು ಕೇಳಿರುವುದು. ಇವಿಷ್ಟೂ ಗಾಸಿಪ್ ಎಂಬುದು ನೆನಪಿರಲಿ...(ಒನ್ ಇಂಡಿಯಾ ಕನ್ನಡ)

  English summary
  Actress Ragini Dwivedi beats Lucky Star Ramya in Remuneration Race. As the sources are reviled, Ragini Dwivedi charges Rs. 36 Lakhs for her upcoming movie 'Ragini IPS'. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X