For Quick Alerts
  ALLOW NOTIFICATIONS  
  For Daily Alerts

  ರಾಗಿಣಿಗೆ ಕನ್ನಡದಲ್ಲಿ ಬೇಡಿಕೆ ಕುಸಿದ ಸುದ್ದಿಗೆ ಕಾರಣ?

  |

  ನಟಿ ರಾಗಿಣಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಕುಸಿದಿದೆಯೇ? ಹೌದೆನ್ನುತ್ತಿವೆ ಗಾಂಧಿನಗರದ ಸುದ್ದಿಮೂಲಗಳು. ಶಿವಣ್ಣನ ಜೊತೆ 'ಶಿವ' ಹಾಗೂ ಆದಿತ್ಯ ಜೊತೆ 'ವಿಲನ್' ಚಿತ್ರೀಕರಣ ಮುಗಿಸಿರುವ ರಾಗಿಣಿ ಕೈನಲ್ಲಿ ಸದ್ಯಕ್ಕೆ ಬಾಕಿ ಇರುವುದು 'ರಾಗಿಣಿ ಐಪಿಎಸ್' ಚಿತ್ರ ಮಾತ್ರ. ಇನ್ಯಾವ ಚಿತ್ರಕ್ಕೂ ರಾಗಿಣಿ ಸಹಿ ಮಾಡಿರುವ ಸುದ್ದಿಯಿಲ್ಲ. ಈಗ ಲೂಸ್ ಮಾದ ಯೋಗೇಶ್ ಜೊತೆ 'ಬಂಗಾರಿ' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ ರಾಗಿಣಿ.

  ಇತ್ತೀಚಿಗಷ್ಟೇ ರಾಗಿಣಿ ಕನ್ನಡದ ಟಾಪ್ ನಾಯಕಿಯರಲ್ಲಿ ಒಬ್ಬರು ಎನ್ನಲಾಗಿತ್ತು. ರಮ್ಯಾ ಸಂಭಾವನೆಗೇ ಸಡ್ಡು ಹೊಡೆಯಲು ರಾಗಿಣಿ ಪ್ರಾರಂಭಿಸಿದ್ದಾರೆ ಎನ್ನಲಾಗಿತ್ತು. ಅವರ ಸಂಭಾವನೆಗೆ, ಹುಡುಕಿಕೊಂಡು ಹೋಗಿದ್ದ ಅದೆಷ್ಟೋ ನಿರ್ಮಾಪಕರು ಹೆದರಿ ವಾಪಸ್ ಆಗಿದ್ದಾರೆ ಎಂದೂ ಸುದ್ದಿಯಾಗಿತ್ತು. ಆದರೆ ಅವೆಲ್ಲಾ ಕೇವಲ 'ಗಾಸಿಪ್'ಗಳು ಎಂದೀಗ ಸುದ್ದಿ ಬರತೊಡಗಿದೆ. ಹಾಗಾದರೆ ರಾಗಿಣಿಯ ನಿಜವಾದ ಸಂಭಾವನೆಯೆಷ್ಟು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.

  ಇದೀಗ ಬಂದ ವರ್ತಮಾನದ ಪ್ರಕಾರ, ರಾಗಿಣಿ ಈ ನಡುವೆ ಹೆಚ್ಚು ಕನ್ನಡಚಿತ್ರಗಳಿಗೆ ಸಹಿ ಮಾಡುತ್ತಿಲ್ಲ. ಅವಕಾಶ ಕಡಿಮೆಯಾಗಿದೆಯೋ ಅಥವಾ ಅವರೇ ಬಂದ ಅವಕಾಶಕ್ಕೆ ದುಬಾರಿ ಸಂಭಾವನೆ ಕೇಳುತ್ತಾರೋ ಗೊತ್ತಾಗುತ್ತಿಲ್ಲ. ಆದರೆ ರಾಗಿಣಿ ಮಾತ್ರ ಈ ಆರೋಪಗಳೆಲ್ಲಾ ಸುಳ್ಳು. ನನಗೆ ಬೇಕಾದಷ್ಟು ಚಿತ್ರಗಳಿಗೆ ಆಫರ್ ಇದೆ. ಎಲ್ಲವನ್ನೂ ಒಟ್ಟಿಗೇ ಹೇಳಲಾಗುವುದಿಲ್ಲ. ಒಂದೊಂದಾಗಿ ಬರಲಿವೆ ನೋಡಿ ಎನ್ನುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Actress Ragini Dwivedi is not getting more opportunity in Kannada movie industries. The reason is High Remuneration is the gossip as sources are reviled. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X