»   » ರಮ್ಯಾ, ರಾಧಿಕಾಗೆ ನಡುಕ ತಂದ ರಾಗಿಣಿ ಮಾತು

ರಮ್ಯಾ, ರಾಧಿಕಾಗೆ ನಡುಕ ತಂದ ರಾಗಿಣಿ ಮಾತು

Posted By:
Subscribe to Filmibeat Kannada
ನಟಿ ರಾಗಿಣಿ ದ್ವಿವೇದಿ ಭಾರಿ ಬುದ್ಧಿವಂತರಾಗಿದ್ದಾರೆ. ಅದರಲ್ಲೂ ಮುತ್ತಿನಂತಾ ಮಾತನ್ನೂ ಆಡಲು ಕಲಿತುಕೊಂಡಿದ್ದಾರೆ. ಕಿಚ್ಚ ಸುದೀಪ್ ಜೊತೆ ನಟಿಸಿದ 'ವೀರ ಮದಕರಿ' ಈಕೆ ನಟಿಸಿದ ಮೊದಲ ಚಿತ್ರ. ಮೊದಲ ಚಿತ್ರವೇ ಗೆದ್ದಾಗ ಸಹಜವಾಗಿ ಬಂದ ಅವಕಾಶಗಳನ್ನು ಉಪಯೋಗಿಸಿಕೊಂಡು ರಾಗಿಣಿ ಈಗ ನಂ ಒನ್ ಪಟ್ಟದತ್ತ ಸರಿದಿದ್ದಾರೆ. ಈಗ ರಾಗಿಣಿ ಕನ್ನಡದ ಅತಿ ಬೇಡಿಕೆ ನಟಿಯರಲ್ಲಿ ನಿಸ್ಸಂಶಯವಾಗಿಯೂ ಒಬ್ಬರು. ಸದ್ಯಕ್ಕೆ 'ನಂ 1' ಪಟ್ಟದಲ್ಲಿರುವ ರಮ್ಯಾ, ರಾಧಿಕಾಗೆ ನಡುಕ ಶುರುವಾಗಿದೆ.

ಕಿಚ್ಚ ಸುದೀಪ್‌ ಜೊತೆ 'ವೀರ ಮದಕರಿ' ಮಾಡಿದ ನಂತರ ದುನಿಯಾ ವಿಜಯ್ ಜತೆ 'ಶಂಕರ್ ಐಪಿಎಸ್', ಚಿತ್ರದಲ್ಲಿ ನಟಿಸಿದರು ರಾಗಿಣಿ. ನಂತರ ಮೋಹನ್‌ಲಾಲ್ ಹಾಗೂ ಅಮಿತಾಬ್ ಬಚ್ಚನ್ ಜತೆ 'ಕಂದಹಾರ್' ಆಯ್ತು. ಆಮೇಲೆ ರವಿಚಂದ್ರನ್ ಮತ್ತು ರಮೇಶ್ ಜೊತೆ ಸೇರಿ 'ಕಳ್ಳ ಮಳ್ಳ ಸುಳ್ಳ'ದಲ್ಲಿ ತುಪ್ಪ ಮಾರಿದ ರಾಗಿಣಿ, ಸೂಪರ್ ಸ್ಟಾರ್ ಉಪೇಂದ್ರ ಜೊತೆ 'ಆರಕ್ಷಕ' ಚಿತ್ರದಲ್ಲೂ ರೊಮಾನ್ಸ್ ಮಾಡಿದರು.

ನಂತರ ರಾಗಿಣಿ ಶಿವರಾಜ್ ಕುಮಾರ್ ಜೊತೆ ನಟಿಸಿರುವ ಚಿತ್ರ 'ಶಿವ', ಇದೀಗ ಪ್ರದರ್ಶನ ಕಾಣುತ್ತಿದೆ. ಇಷ್ಟರಲ್ಲೇ ನಾಯಕಿ ಪ್ರಧಾನ ಚಿತ್ರವಾದ 'ರಾಗಿಣಿ-ಐಪಿಎಸ್' ಚಿತ್ರೀಕರಣ ಮುಗಿಸಿದ್ದಾರೆ ರಾಗಿಣಿ. ಅದಕ್ಕೂ ಮೊದಲು ಮುಗಿದಿದೆ ಲೂಸ್ ಮಾದ ಜೊತೆಗಿನ 'ಬಂಗಾರಿ'. ಅದಾಗಲೇ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಜೊತೆ 'ಫೇಸ್ 2 ಫೇಸ್' ಮಾಡಿದ್ದಾಗಿದೆ ಈ ರಾಗಿಣಿ.

ಇಷ್ಟೆಲ್ಲಾ ಚಿತ್ರಗಳು, ಯಶಸ್ಸುಗಳು ಬೆನ್ನಿಗಿದ್ದರೂ ರಾಗಿಣಿ ಇವೆಲ್ಲವನ್ನೂ ತಲೆಗೆ ಹಚ್ಚಿಕೊಂಡಿಲ್ಲ. ವಯಸ್ಸಾದ ನಟರೊಂದಿಗೂ ನಟಿಸಿ ಸೈ ಎನ್ನಿಸಿಕೊಂಡಿರುವ ಇವರು ಅವಕಾಶ ಸಿಕ್ಕಾಗ 'ಐಟಂ ಡಾನ್ಸ್' ಗೂ ಓಕೆ ಎಂದಿದ್ದಾರೆ (ಆದರೆ ಅದಕ್ಕೆ 'ಕಂಡಿಷನ್ಸ್ ಅಪ್ಲೈ' ಎಂಬುದು ಗಮನದಲ್ಲಿರಲಿ). "ಈಗಿನ ನಾಯಕರು ವಯಸ್ಸಾಗಿದ್ದರೂ ಬಾಡಿಯನ್ನು ಚೆನ್ನಾಗಿಟ್ಟುಕೊಂಡಿರುತ್ತಾರೆ. ಅಷ್ಟಕ್ಕೂ ಅವರೊಂದಿಗೆ ಪಾತ್ರ ಮಾಡಲು ವಯಸ್ಸು ಕಟ್ಟಿಕೊಂಡು ನನಗೇನಾಗಬೇಕು" ಎಂದಿದ್ದಾರೆ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಗಿಣಿ.

ಒಟ್ಟಿನಲ್ಲಿ ರಾಗಿಣಿ ದ್ವಿವೇದಿ ಪ್ರಕಾಶಿಸುತ್ತಿದ್ದಾರೆ. ಸದ್ಯದಲ್ಲೇ 'ನಂ ಒನ್' ಪಟ್ಟಕ್ಕೆ ಲಗ್ಗೆ ಇಟ್ಟರೂ ಆಶ್ಚರ್ಯವಿಲ್ಲ ಎನ್ನುವಂತಿದೆ. ಆದರೆ ರಾಗಿಣಿ "ನನಗೆ ಆ 'ನಂ ಒನ್' ಪಟ್ಟದ ಮೇಲೆ ನಂಬಿಕೆಯಿಲ್ಲ, ನನಗೆ ಅದರ ಅಗತ್ಯವೂ ಇಲ್ಲ. ನನ್ನ ಜೀವನ ವೃತ್ತಿಪರತೆಯಷ್ಟೇ ನನ್ನದು. ಉಳಿದವರ ಜೊತೆ ನನಗೆ ಯಾವುದೇ ಸ್ಪರ್ಧೆ ಇಲ್ಲ" ಎಂದು ಮುದ್ದುಮುದ್ದಾಗಿ ಮುತ್ತಿನಂತ ಮಾತನ್ನಾಡಿದ್ದಾರೆ. ಭಲೇ ರಾಗಿಣಿ..! (ಒನ್ ಇಂಡಿಯಾ ಕನ್ನಡ)

English summary
Actress Ragini Dwivedi is very close ti Kannada actress No 1 list. but she told that she had no belief in that and all. She is concentrating more on her role and carrier, that's all she wants. And also she don't want to compete with anybody, as she added. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada