»   » ತುಪ್ಪದ ಬೆಡಗಿ ರಾಗಿಣಿ ಅಭಿನಯದ 'ಅಮ್ಮ' ಸಿನಿಮಾ ನಿಂತ್ಹೋಯ್ತಾ?

ತುಪ್ಪದ ಬೆಡಗಿ ರಾಗಿಣಿ ಅಭಿನಯದ 'ಅಮ್ಮ' ಸಿನಿಮಾ ನಿಂತ್ಹೋಯ್ತಾ?

Posted By:
Subscribe to Filmibeat Kannada

ನಟಿ ರಾಗಿಣಿ ದ್ವಿವೇದಿ ಅಭಿನಯದ 'ಅಮ್ಮ' ಸಿನಿಮಾ ಬಗ್ಗೆ ಕೇಳಿದ್ದೀರಾ ಅಲ್ವಾ?

2014 ರಲ್ಲಿ, ಅಂದ್ರೆ ಎರಡು ವರ್ಷಗಳ ಹಿಂದೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹುಟ್ಟುಹಬ್ಬದಂದು ಮುಹೂರ್ತ ಕಂಡಿದ್ದ ಸಿನಿಮಾ 'ಅಮ್ಮ'.

ಎರಡು ವರ್ಷಗಳಿಂದ ಇನ್ನೂ ಚಿತ್ರೀಕರಣ ಹಂತದಲ್ಲೇ ಇರುವ 'ಅಮ್ಮ' ಸಿನಿಮಾ ಸದ್ಯಕ್ಕೆ ಬಿಡುಗಡೆ ಆಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಬಾಲಿವುಡ್ ನಿರ್ದೇಶಕ ಫೈಸಲ್ ಸೈಫ್ ಆಕ್ಷನ್ ಕಟ್ ಹೇಳಿರುವ ನೈಜ ಘಟನೆ ಆಧಾರಿತ ಚಿತ್ರ ಅಂತಲೇ ಬಿಂಬಿತವಾಗಿರುವ 'ಅಮ್ಮ' ಚಿತ್ರಕ್ಕೆ ಸದ್ಯಕ್ಕೆ ಫುಲ್ ಸ್ಟಾಪ್ ಇಡುವ ಪರಿಸ್ಥಿತಿ ಎದುರಾಗಿದೆ. [ಜಯಲಲಿತಾ ಅಲ್ಲ.! ಮಿಸ್ ಜಯಮಾಲಿನಿ ಆದ 'ಅಮ್ಮ' ರಾಗಿಣಿ]

'ಅಮ್ಮ' ಚಿತ್ರ ಕುರಿತು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿರುವ ಖಾಸ್ ಖಬರ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

'ಅಮ್ಮ' ಚಿತ್ರದ ಚಿತ್ರೀಕರಣಕ್ಕೆ ಫುಲ್ ಸ್ಟಾಪ್.!

ಬರೋಬ್ಬರಿ ಎರಡು ವರ್ಷಗಳಿಂದ ಶೂಟಿಂಗ್ ಮಾಡುತ್ತಿರುವ 'ಅಮ್ಮ' ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ.['ಅಮ್ಮ' ಆಗಲಿರುವ ಘಮಘಮ ತುಪ್ಪದ ಬೆಡಗಿ ರಾಗಿಣಿ]

ಗಮನ ಹರಿಸುವುದಕ್ಕೆ ಯಾರೂ ಇಲ್ಲ!

'ಅಮ್ಮ' ಚಿತ್ರದ ತಂಡದಲ್ಲಿದ್ದ ಎಲ್ಲರೂ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ತೊಡಗಿದ್ದಾರೆ. ಹೀಗಾಗಿ 'ಅಮ್ಮ' ಚಿತ್ರಕ್ಕೆ ಯಾರೂ ಸಮಯ ನೀಡುತ್ತಿಲ್ಲ.[ಜೈಲಲ್ಲಿ ಜಯಲಲಿತಾ, 'ಅಮ್ಮ' ಕ್ಲೈಮ್ಯಾಕ್ಸ್ ಬದಲು]

ರಾಗಿಣಿ ದ್ವಿವೇದಿ ಏನ್ಮಾಡ್ತಿದ್ದಾರೆ?

ನಟಿ ರಾಗಿಣಿ ದ್ವಿವೇದಿ ಸದ್ಯ 'ಹುಲಿ ದೇವರ ಕಾಡು' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅದಾದ ನಂತರ, ಅವರು ಕಾಲ್ ಶೀಟ್ ನೀಡಿರುವುದು 'ನಾನೇ...ನೆಕ್ಸ್ಟ್ ಸಿ.ಎಂ' ಚಿತ್ರಕ್ಕೆ. ಅದು ಮುಗಿಯುವವರೆಗೂ 'ಅಮ್ಮ'ನ ಬಗ್ಗೆ ರಾಗಿಣಿ ಚಿಂತೆ ಮಾಡಲ್ಲ.

ನಿರ್ದೇಶಕರು ಕ್ಯಾರೇ..ಎನ್ನುತ್ತಿಲ್ಲ!

'ಅಮ್ಮ' ಚಿತ್ರದ ನಿರ್ದೇಶಕ ಫೈಸಲ್ ಸೈಫ್ ಕೂಡ ಇದೀಗ ಮೈತ್ರಿಯಾ ಗೌಡ ಅಭಿನಯದ 'Shraap' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. 'ಅಮ್ಮ' ಚಿತ್ರಕ್ಕೂ ಮೊದಲೇ 'Shraap' ಸಿನಿಮಾಗೆ ಕಮಿಟ್ ಆಗಿದ್ರಂತೆ ಫೈಸಲ್ ಸೈಫ್. ಹೀಗಾಗಿ 'Shraap' ಮುಗಿಸುವವರೆಗೂ ಫೈಸಲ್ 'ಅಮ್ಮ'ನ ಕಡೆ ತಿರುಗಿ ನೋಡುವುದಿಲ್ಲ.

ನಿರ್ಮಾಪಕರದ್ದೂ ಇದೇ ಕಥೆ!

'ಅಮ್ಮ' ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ಕೂಡ ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ 'ಕಲಿ' ಸೇರಿದಂತೆ ಇತರೆ ಎರಡು ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಹೀಗಾಗಿ ಅವರಿಗೂ 'ಅಮ್ಮ'ನ ಮೇಲೆ ಅಷ್ಟು ಆಸಕ್ತಿ ಇದ್ದ ಹಾಗಿಲ್ಲ.

ಹೀಗಾದರೆ 'ಅಮ್ಮ'ನ ಕಥೆ ಏನು?

ನಿರ್ಮಾಪಕ-ನಿರ್ದೇಶಕ-ನಾಯಕಿ....ಎಲ್ಲರೂ ಇತರೆ ಕಮಿಟ್ಮೆಂಟ್ ಗಳನ್ನ ಮುಗಿಸುವವರೆಗೂ 'ಅಮ್ಮ' ಚಿತ್ರ ಮತ್ತೆ ಸೆಟ್ಟೇರುವುದಿಲ್ಲ. ಎಲ್ಲರೂ ಟೈಮ್ ಮಾಡಿಕೊಂಡು 'ಅಮ್ಮ' ಚಿತ್ರದ ಬಗ್ಗೆ ಗಮನ ಹರಿಸಿದರೂ, ಚಿತ್ರ ಬಿಡುಗಡೆ ಮುಂದಿನ ವರ್ಷಕ್ಕೆ.

ಪಂಚ ಭಾಷೆಯಲ್ಲಿ ರೆಡಿ ಆಗುತ್ತಿರುವ 'ಅಮ್ಮ'

ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ 'ಅಮ್ಮ' ಸಿನಿಮಾ ರೆಡಿ ಆಗಬೇಕು. ಹೀಗಾಗಿ ಹೆಚ್ಚು ಸಮಯ ಹಿಡಿಯುವುದು ಗ್ಯಾರೆಂಟಿ.

ಯಾರೀ 'ಅಮ್ಮ'?

'ಅಮ್ಮ' ಚಿತ್ರ ಸೆಟ್ಟೇರಿದಾಗಿನಿಂದಲೂ ಇದು ತಮಿಳುನಾಡು ಮಾಜಿ ಸಿ.ಎಂ ಜಯಲಲಿತಾ ಅವರ ಜೀವನಗಾಥೆ ಅಂತಲೇ ಬಿಂಬಿಸಲಾಗಿತ್ತು. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲೂ ರಾಗಿಣಿ ಪಾತ್ರಕ್ಕೂ, ಜಯಲಲಿತಾ ನಿಜ ಬದುಕಿನ ಕಥೆಗೂ ಅಷ್ಟು ವ್ಯತ್ಯಾಸ ಇದ್ದ ಹಾಗಿಲ್ಲ.

ಜಯಮಾಲಿನಿ ಯಾರು?

ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, 'ಅಮ್ಮ' ಚಿತ್ರದಲ್ಲಿ ರಾಗಿಣಿ ಪೋಷಿಸುತ್ತಿರುವ ಪಾತ್ರದ ಹೆಸರು 'ಜಯಮಾಲಿನಿ'. ಜಯಲಲಿತಾ ಹಾಗೂ ಜಯಮಾಲಿನಿ, ಇಬ್ಬರೂ ಒಂದ್ಕಾಲದ ಜನಪ್ರಿಯ ನಟಿಯರು. ಹೀಗಾಗಿ, 'ಅಮ್ಮ' ಯಾರ ಕಥೆ ಅನ್ನೋದಿನ್ನೂ ಸಸ್ಪೆನ್ಸ್.

'ಅಮ್ಮ' ಚಿತ್ರದಲ್ಲಿ ಯಾರ್ಯಾರಿದ್ದಾರೆ?

ಮಂಗಳಮುಖಿ ಪಾತ್ರದಲ್ಲಿ ಬಾಲಿವುಡ್ ನ ಖ್ಯಾತ ಹಾಸ್ಯ ನಟ ರಾಜ್ ಪಾಲ್ ಯಾದವ್, ಕವಿತಾ ರಾಧೇಶ್ಯಾಮ್, ಪ್ರಶಾಂತ್ ನಾರಾಯಣನ್, ಪೂಜಾ ಮಿಶ್ರಾ ಸೇರಿದಂತೆ ಹಲವರು 'ಅಮ್ಮ' ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

'ಅಮ್ಮ' ಟ್ರೈಲರ್ ನೋಡಿ

ಈಗಾಗಲೇ ರಿಲೀಸ್ ಆಗಿರುವ 'ಅಮ್ಮ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...

English summary
Kannada Actress Ragini Dwivedi starrer Multilingual film 'Amma' is delayed. What is the reason behind? Read the article to know the answer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada