»   » ರಮ್ಯಾ 'ನೀರ್ ದೋಸೆ'ಗೆ ರಾಗಿಣಿ ಬಿಸಿಬಿಸಿ ತುಪ್ಪ

ರಮ್ಯಾ 'ನೀರ್ ದೋಸೆ'ಗೆ ರಾಗಿಣಿ ಬಿಸಿಬಿಸಿ ತುಪ್ಪ

By: ಉದಯರವಿ
Subscribe to Filmibeat Kannada

ಆರಂಭದಿಂದಲೂ 'ನೀರ್ ದೋಸೆ' ಚಿತ್ರಕ್ಕೆ ಯಾಕೋ ಏನೋ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಲೇ ಇವೆ. ಪ್ರೇಕ್ಷಕರು ಮಾತ್ರ 'ನೀರ್ ದೋಸೆ'ಯನ್ನು ನೆನೆದು ನೆನೆದು ಬಾಯಿ ಚಪ್ಪರಿಸುತ್ತಲೇ ಇದ್ದಾರೆ. ಇದೀಗ ಮತ್ತೆ 'ನೀರ್ ದೋಸೆ'ಗೆ ಮುಹೂರ್ತ ಕೂಡಿಬಂದಿದೆ.

ಈ ಚಿತ್ರದ ನಾಯಕಿ ಲಕ್ಕಿ ಸ್ಟಾರ್ ರಮ್ಯಾ ಲೋಕಸಭಾ ಚುನಾವಣೆಯಲ್ಲಿ ಬಿಜಿಯಾಗಿರುವ ಹಿನ್ನೆಲೆಯಲ್ಲಿ ಅವರ ಬದಲಿಗೆ ತುಪ್ಪದ ಬೆಡಗಿ ರಾಗಿಣಿಯನ್ನು ಆಯ್ಕೆ ಮಾಡಲು ಚಿತ್ರತಂಡ ಮುಂದಾಗಿದೆ. ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಶೂಟಿಂಗ್ ಶೇ.60ರಷ್ಟು ಮುಗಿದಿದೆ. [ಎಲ್ಲೆಲ್ಲೋ ಜಾರಿದೆ ನಟಿ ರಮ್ಯಾ ಮೇಡಂ ಮನಸು]


ಇದೀಗ ರಮ್ಯಾ ಅಭಿನಯಿಸಿರುವ ಭಾಗಗಳಿಗೆ ಮಾತ್ರ ರಾಗಿಣಿ ಅವರನ್ನು ಹಾಕಿಕೊಂಡು ರೀಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿ ಇದೆ. ಅಲ್ಲಿಗೆ ಸೀದು ಹೋಗಿದ್ದ 'ನೀರ್ ದೋಸೆ'ಗೆ ಘಮಘಮ ತುಪ್ಪ ಸವಲಾಗುತ್ತಿದೆ.

ನಿಮಗೆ ಗೊತ್ತಿದೆಯೋ ಇಲ್ವೋ ನಮಗೆ ಗೊತ್ತಿಲ್ಲ. 2013ರಲ್ಲಿ ಅತ್ಯಂತ ಹೆಚ್ಚು ಬಾರಿ ಕಾಂಟ್ರರ್ಸಿಗಳಿಗೆ ಸುದ್ದಿಯಾದ ಚಿತ್ರ ಅಂದ್ರೆ ಅದು 'ನೀರ್ ದೋಸೆ'. ವಿವಾದಗಳನ್ನೇ ಹೊದ್ದು ಮಲಗಿದ ಚಿತ್ರ ಅದು. ಆದರೆ ಯಾಕೋ ಚಿತ್ರ ವಿವಾದಗಳನ್ನ ಮಾತ್ರ ಅಲ್ಲ. ನಿಜವಾಗಿಯೂ ಕಂಬಳಿಯನ್ನ ಹೊದ್ದು ಮಲಗುತ್ತೆ ಅನ್ನಿಸ್ತಾ ಇದೆ.

ಒಂದು ಕಡೆ ರಮ್ಯಾ ಮೇಡಂ ನಾನು ಸಿನಿಮಾದ ಶೂಟಿಂಗ್ ಮುಗಿಸಿಕೊಡ್ತೀನಿ ಅಂದಿದ್ದಾರೆ. ಆದರೆ ನಿರ್ದೇಶಕ ವಿಜಯ ಪ್ರಸಾದ್ ಮಾತ್ರ ವಾಣಿಜ್ಯ ಮಂಡಳಿಯನ್ನ ನಾಲ್ಕು ಬಾರಿ ಅಲೆದು ಚಪ್ಪಲಿ ಸವೆಸಿಕೊಂಡಿದ್ದಾರೆ. ವಿವಾದ ಬಗೆಹರಿಸಿಕೊಳ್ಳೋಕೆ ವಾಣಿಜ್ಯ ಮಂಡಳಿಗೇನೇ ಮೆನೇಜರ್ ಕಳಿಸಿದ್ದ ರಮ್ಯಾ ಮೇಡಂ ಇನ್ನು ಶೂಟಿಂಗ್ ಗೆ ಬರ್ತಾರಾ ಅಂತ ನಿರ್ದೇಶಕರು ಕಾದಿದ್ದೇ ಬಂತು.

English summary
The grapevine was that glamour doll Ragini Dwivedi is likely to replace Ramya in 'Neer Dose', written and directed by Vijaya Prasad starring Jaggesh. From the start movie has faced many interruptions and issues. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada