For Quick Alerts
  ALLOW NOTIFICATIONS  
  For Daily Alerts

  'ಅವನೇ ಶ್ರೀಮನ್ನಾರಾಯಣ'ನಾದ ನಟ ರಕ್ಷಿತ್ ಶೆಟ್ಟಿ

  By ಜೀವನರಸಿಕ
  |

  ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್. ಸದ್ಯ 'ವಾಸ್ತುಪ್ರಕಾರ' ಸಿನಿಮಾ ಆಯ್ಕೆ ಮಾಡಿಕೊಳ್ತಿರೋ ಅವ್ರು ಯಾಕೋ ದೇವರ ಮೊರೆ ಹೋಗಿದ್ದಾರೆ. ಹಾಗಂತ ವಾಸ್ತುಪ್ರಕಾರದ ಗೆಲುವಿಗಲ್ಲ, ಅವ್ರ ಮುಂದಿನ ಸಿನಿಮಾಗೆ.

  ರಕ್ಷಿತ್ ಶೆಟ್ಟಿ ಹೈಟು ಪರ್ಸನಾಲಿಟಿ ನೋಡಿದ್ರೆ ಅವ್ರೊಬ್ಬ ಮಾಸ್ ಹೀರೋ ಆಗಬಹುದು ಅಂತ ಯೋಗರಾಜರೇ ಭವಿಷ್ಯ ನುಡಿದಿದ್ರು. ಈಗ ಆ ಭವಿಷ್ಯ ನಿಜವಾಗು ಕಾಲ ಹತ್ತಿರವಾಗ್ತಿದೆ. 6+ ಹೈಟ್ ಇರೋ ರಕ್ಷಿತ್ 'ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಶೂಟಿಂಗ್ ನಲ್ಲಿ ಸದ್ಯ ಬಿಜಿ.

  ಇದಾದ ನಂತರದ ರಕ್ಷಿತ್ ಸಿನಿಮಾ 'ಅವನೇ ಶ್ರೀಮನ್ನಾರಾಯಣ'. ಇದನ್ನ ಅಜೇಯ್ ರಾವ್-ರಾಧಿಕಾ ಪಂಡಿತ್ ಜೋಡಿಯ 'ಎಂದೆಂದಿಗೂ' ಸಿನಿಮಾ ನಿರ್ದೇಶಿಸಿದ್ದ ಕೊರಿಯೋಗ್ರಫರ್ ಇಮ್ರಾನ್ ಸರ್ದಾರಿಯಾ ನಿರ್ದೇಶನ ಮಾಡ್ತಾರೆ ಅನ್ನೋ ಸುದ್ದಿ ಇದೆ.

  'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮಾಸ್ ಹೀರೋಯಿಸಂ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ ಅನ್ನೋ ಸುದ್ದಿ ಬಂದಿದೆ. ಚಿತ್ರದ ಹೀರೋಯಿನ್ ಹಾಗೂ ಪಾತ್ರವರ್ಗ ತಾಂತ್ರಿಕ ಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ನಿರೀಕ್ಷಿಸಲಾಗಿದೆ.

  English summary
  Actor Rakshit Shetty's upcoming movie is titled as 'Avane Srimannarayana'. The movie is being directed by Imran Sardhariya. More details about the movie is awaited.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X