»   » 'ಕಿರಿಕ್ ಜೋಡಿ'ಯ ನಿಶ್ಚಿತಾರ್ಥಕ್ಕೆ ರಾಕಿಂಗ್ ಸ್ಟಾರ್ ಗೆ ಆಹ್ವಾನ.!

'ಕಿರಿಕ್ ಜೋಡಿ'ಯ ನಿಶ್ಚಿತಾರ್ಥಕ್ಕೆ ರಾಕಿಂಗ್ ಸ್ಟಾರ್ ಗೆ ಆಹ್ವಾನ.!

Posted By:
Subscribe to Filmibeat Kannada

'ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಇಂದು (ಜುಲೈ 3) ವಿರಾಜಪೇಟೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕುಟುಂಬದವರು, ಆಪ್ತರು ಮತ್ತು ಚಿತ್ರರಂಗವದರು ಭಾಗಿಯಾಗಲಿದ್ದಾರೆ.

ಚಿತ್ರರಂಗದವರು ಅಂದಾಕ್ಷಣ ಯಾರೆಲ್ಲಾ ಆಗಮಿಸಲಿದ್ದಾರೆ ಎಂಬ ಕುತೂಹಲ ಎಲ್ಲರನ್ನ ಕಾಡುತ್ತೆ. ರಕ್ಷಿತ್ ಶೆಟ್ಟಿ ಅವರ ಕುಟುಂಬದವರು ಹೇಳುವಂತೆ ಚಿತ್ರರಂಗದಲ್ಲಿ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಹೀಗಾಗಿ, ಎಲ್ಲರೂ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಹಾಗಾದ್ರೆ, 'ಕಿರಿಕ್ ಜೋಡಿ'ಯ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಬರ್ತಾರ? ಯಶ್ ಜೊತೆಯಲ್ಲಿ ಮತ್ಯಾರಿಗೆ ಆಹ್ವಾನ ನೀಡಲಾಗಿದೆ? ಮುಂದೆ ಓದಿ....

'ಕಿರಿಕ್ ಜೋಡಿ'ಗೆ ಶುಭ ಕೋರಲಿದ್ದಾರೆ ಯಶ್

ಕಳೆದ ಕೆಲ ದಿನಗಳ ಹಿಂದೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಮಧ್ಯೆ ಸಣ್ಣದೊಂದು ವಿವಾದ ಹುಟ್ಟಿಕೊಂಡಿತ್ತು. ಹೀಗಾಗಿ, ರಕ್ಷಿತ್ ಮತ್ತು ರಶ್ಮಿಕಾ ಜೋಡಿಯ ನಿಶ್ಚಿತಾರ್ಥಕ್ಕೆ ಯಶ್ ಬರ್ತಾರ? ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದ್ರೆ, 'ಕಿರಿಕ್ ಜೋಡಿ'ಯ ಎಂಗೇಜ್ ಮೆಂಟ್ ಗೆ ಯಶ್ ಬರುವ ಎಲ್ಲ ಸಾಧ್ಯತೆಯಿದೆಯಂತೆ.

ಜುಲೈ 3, ಇಂದು ರಕ್ಷಿತ್-ರಶ್ಮಿಕಾ ಎಂಗೇಜ್ ಮೆಂಟ್ ಕಣ್ರಪ್ಪೋ

ಯಶ್ ಗೆ ಆಹ್ವಾನ ನೀಡಲಾಗಿದೆ!

ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಟ ರಕ್ಷಿತ್ ಶೆಟ್ಟಿ ಆಹ್ವಾನಿಸಿದ್ದಾರಂತೆ. ಹೀಗಾಗಿ, ವಿರಾಜಪೇಟೆಗೆ ಯಶ್ ಆಗಮಿಸಿ, ನವ ಜೋಡಿಗಳಿಗೆ ಶುಭಕೋರಲಿದ್ದಾರಂತೆ. ಸದ್ಯ, ಕೆ.ಜಿ.ಎಫ್ ಚಿತ್ರದ ಶೂಟಿಂಗ್ ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ.

ಕೊನೆಗೂ ಕ್ಷಮೆ ಕೇಳಿದ ರಶ್ಮಿಕಾ: ವಿವಾದದ ಅಸಲಿ ಕಾರಣ ಬಹಿರಂಗ

ಸುದೀಪ್ ಬರುವ ಸಾಧ್ಯತೆ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ರಕ್ಷಿತ್ ಮತ್ತು ರಶ್ಮಿಕಾ ನಿಶ್ಚಿತಾರ್ಥಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಜಗ್ಗೇಶ್, ಉಪ್ಪಿ ಬರ್ತಾರೆ !

ಇನ್ನು ನವರಸ ನಾಯಕ ಜಗ್ಗೇಶ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ 'ಕಿರಿಕ್ ಜೋಡಿ' ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಎನ್ನಲಾಗಿದೆ.

ಯಶ್-ರಶ್ಮಿಕಾ ವಿವಾದದ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಇದು.!

ಸಂಜೆ 6.30ಕ್ಕೆ ನಿಶ್ಚಿತಾರ್ಥ

ಅಂದ್ಹಾಗೆ, ಸಂಜೆ 6.30ಕ್ಕೆ ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಎಂಗೇಜ್ ಮೆಂಟ್ ನಡೆಯಲಿದ್ದು, ಅತಿಥಿಗಳಿಗಾಗಿ ಔತಣ ಕೂಟವನ್ನ ಏರ್ಪಡಿಸಲಾಗಿದೆ. ಈ ವೇಳೆ ಉಂಗುರ ಬದಲಾಯಿಸಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ.

'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?

English summary
Rakshit Shetty has invited almost all the stars of Sandalwood. Kiccha Sudeep, Yash, Upendra, Jaggesh and many others are likely to grace the engagement ceremony. Rakshit Shetty and Rashmika Mandanna's engagement will be held on Monday, 3 July.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada