For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ ತಂಡದಿಂದ ತಯಾರಾಗ್ತಿದೆ ವೆಬ್ ಸಿರೀಸ್!

  |

  'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಳಿಕ ಎರಡ್ಮೂರು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿರುವ ರಕ್ಷಿತ್ ಶೆಟ್ಟಿ ಈಗ ವೆಬ್ ಸಿರೀಸ್ ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಹತ್ತು ಎಪಿಸೋಡ್‌ಗಳ ವೆಬ್ ಸಿರೀಸ್ ಇದಾಗಿದ್ದು, 'ಏಕಂ' (Ekam) ಎಂಬ ಈ ಚಿತ್ರಕ್ಕೆ ಹೆಸರಿಡಲಾಗಿದೆ ಎನ್ನಲಾಗಿದೆ. ಇನ್ನುಳಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

  'ರಿಚ್ಚಿ' ಸಿನಿಮಾ ಟೈಟಲ್ ವಿವಾದ: ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ'ರಿಚ್ಚಿ' ಸಿನಿಮಾ ಟೈಟಲ್ ವಿವಾದ: ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ

  ವೆಬ್ ಸಿರೀಸ್ ಮಾಡಲು ಎಲ್ಲ ತಯಾರಿ ನಡೆಸಿದ್ದು, ಅದಕ್ಕಾಗಿ ಪ್ರತಿಭಾನ್ವಿತ ತಂಡವನ್ನು ಸಹ ಸಿದ್ಧ ಮಾಡಿಕೊಂಡಿದ್ದಾರೆ. ಬಹುಶಃ ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ.

  ಮತ್ತೊಂದೆಡೆ 'ಚಾರ್ಲಿ' ಸಿನಿಮಾದ ಚಿತ್ರೀಕರಣವನ್ನು ರಕ್ಷಿತ್ ಶೆಟ್ಟಿ ಬಹುತೇಕ ಮುಗಿಸಿದ್ದಾರೆ. 'ಉಳಿದವರು ಕಂಡಂತೆ' ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದ ರಾಹುಲ್ ಜೊತೆಯೂ ಒಂದು ಸಿನಿಮಾ ಮಾಡುತ್ತಿದ್ದಾರೆ.

  ಇದರ ಜೊತೆಗೆ 'ಪುಣ್ಯಕೋಟಿ' ಸಿನಿಮಾವೂ ಸಾಲಿನಲ್ಲಿದೆ. 'ಸಪ್ತಸಾಗರದಾಚೆ' ಎಂಬ ಚಿತ್ರವೂ ಘೋಷಣೆಯಾಗಿದೆ. ಹೀಗೆ, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಿದ್ದರೂ ವೆಬ್ ಸಿರೀಸ್ ನಿರ್ಮಿಸಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.

  English summary
  Kannada actor Rakshit Shetty team is coming up with a Web Series, titled Ekam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X