»   » ರಕ್ಷಿತ್ ಶೆಟ್ಟಿ ಇನ್ಮುಂದೆ 'ಕೋಟಿ' ನಟ.! ಸಿಂಪಲ್ ಸ್ಟಾರ್ 'ಡೀಲ್' ಸುದ್ದಿ ನಿಜವೇ.?

ರಕ್ಷಿತ್ ಶೆಟ್ಟಿ ಇನ್ಮುಂದೆ 'ಕೋಟಿ' ನಟ.! ಸಿಂಪಲ್ ಸ್ಟಾರ್ 'ಡೀಲ್' ಸುದ್ದಿ ನಿಜವೇ.?

Posted By:
Subscribe to Filmibeat Kannada
ಕೋಟ್ಯಾಧಿಪತಿ ಆದ್ರು ರಕ್ಷಿತ್ ಶೆಟ್ಟಿ | Rakshith shetty is a crorepati now | Filmibeat Kannada

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಅದೃಷ್ಟ ಖುಲಾಯಿಸಿಬಿಟ್ಟಿದೆ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ', 'ಕಿರಿಕ್ ಪಾರ್ಟಿ' ಅಂತಹ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್ ಆದ್ಮೇಲೆ ಭಾಗ್ಯದ ಲಕ್ಷ್ಮಿ ರಕ್ಷಿತ್ ಶೆಟ್ಟಿ ಮನೆಯಲ್ಲೇ ನೆಲೆಯೂರಿದ್ದಾಳೆ.

'ಅವನೇ ಶ್ರೀಮನ್ನಾರಾಯಣ' ಸೇರಿದಂತೆ ಮೂರ್ನಾಲ್ಕು ಪ್ರಾಜೆಕ್ಟ್ ಗಳು ರಕ್ಷಿತ್ ಶೆಟ್ಟಿ ಕೈಯಲ್ಲಿರುವಾಗಲೇ, ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ರಕ್ಷಿತ್ ಶೆಟ್ಟಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

ಮೂರು ಹೊತ್ತು ಸಿನಿಮಾ ಸಿನಿಮಾ ಅನ್ನೋದರಲ್ಲೇ ಬಿಜಿಯಾಗಿರುವ ರಕ್ಷಿತ್ ಶೆಟ್ಟಿ ಬಗ್ಗೆ ಹೊಸ ಸುದ್ದಿಯೊಂದು ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಅದೇನಪ್ಪಾ ಅಂದ್ರೆ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ರಕ್ಷಿತ್ ಶೆಟ್ಟಿ ಮೂರು ಚಿತ್ರ ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಸುದ್ದಿ.

ಇದೇ ವಿಚಾರದ ಕುರಿತಾಗಿ ಈಗ ಗಾಂಧಿನಗರದಲ್ಲಿ ಹೊಸ ಗುಸು ಗುಸು ಒಂದು ಕೇಳಿ ಬರುತ್ತಿದೆ. ಅದು ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ಮಾಡಿಕೊಂಡಿರುವ ಮೂರು ಚಿತ್ರಗಳ 'ಡೀಲ್' ಬಗ್ಗೆ.! ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಮೂರು ಚಿತ್ರಗಳ ಡೀಲ್.!

'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಒಂದಾಗಿದ್ದರು. ಈಗ ಇದೇ ಹಿಟ್ ಕಾಂಬಿನೇಷನ್ ಇನ್ನೂ ಮೂರು ಸಿನಿಮಾಗಳಲ್ಲಿ ಮುಂದುವರೆಯಲಿದೆ.

ರಕ್ಷಿತ್ ಶೆಟ್ಟಿ, ಸಿಂಪಲ್ ಸುನಿಯ ಆ ಒಂದು 'ದಿನ' ಹೇಗಿತ್ತು.?

ಮೂರು ಚಿತ್ರಗಳಿಗೆ ರಕ್ಷಿತ್ ಶೆಟ್ಟಿ ಸಂಭಾವನೆ ಎಷ್ಟು.?

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಲಿರುವ ಮೂರು ಚಿತ್ರಗಳಿಗೆ ರಕ್ಷಿತ್ ಶೆಟ್ಟಿ ಹಸಿರು ನಿಶಾನೆ ತೋರಿದ್ದಾರೆ. ಹಾಗಾದ್ರೆ, ಈ ಮೂರು ಸಿನಿಮಾಗಳಿಗಾಗಿ ರಕ್ಷಿತ್ ಶೆಟ್ಟಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ.? ಬರೋಬ್ಬರಿ 12 ಕೋಟಿ ಅಂತ ಗಾಂಧಿನಗರದಲ್ಲಿ ಗುಸು ಗುಸು ಶುರುವಾಗಿದೆ.

ಸಿನಿಮಾ ಪ್ರಚಾರವನ್ನ ಈ ರೀತಿನೂ ಮಾಡಬಹುದಾ?

ಈ ಡೀಲ್ ನಿಜವೇ.?

ಮೂರು ಚಿತ್ರಗಳಿಗೆ ರಕ್ಷಿತ್ ಶೆಟ್ಟಿ 12 ಕೋಟಿ ಡೀಲ್ ಮಾಡಿಕೊಂಡಿರುವುದು ನಿಜವೇ.? ಗಾಂಧಿನಗರದ ಗಾಸಿಪ್ ಪಂಡಿತರ ಪ್ರಕಾರ ಹೌದು. ಒಂದು ಚಿತ್ರಕ್ಕೆ ನಾಲ್ಕು ಕೋಟಿಯಂತೆ ಮೂರು ಚಿತ್ರಕ್ಕೆ 12 ಕೋಟಿ ಕೊಡಲು ಪುಷ್ಕರ್ ಮಲ್ಲಿಕಾರ್ಜುನಯ್ಯ ಒಪ್ಪಿಕೊಂಡಿದ್ದಾರಂತೆ. ಆದ್ರೆ, ಈ ಬಗ್ಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಆಗಲಿ, ರಕ್ಷಿತ್ ಶೆಟ್ಟಿ ಆಗಲಿ ಬಾಯ್ಬಿಟ್ಟಿಲ್ಲ.

ಸ್ಯಾಂಡಲ್ ವುಡ್ ನಟನ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ ರಕ್ಷಿತ್ ಶೆಟ್ಟಿ

ಮೂರು ಚಿತ್ರಗಳಿಗೆ ನಿರ್ದೇಶಕರು ಯಾರು.?

ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿ ಬರಲಿರುವ ಚಿತ್ರಗಳ ಪೈಕಿ ಒಂದು ಚಿತ್ರಕ್ಕೆ 'ಕಿರಿಕ್ ಪಾರ್ಟಿ' ಖ್ಯಾತಿಯ ರಿಶಬ್ ಆಕ್ಷನ್ ಕಟ್ ಹೇಳಿದ್ರೆ, ಇನ್ನೊಂದು ಚಿತ್ರಕ್ಕೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ಹೇಮಂತ್ ರಾಮ್ ನಿರ್ದೇಶನ ಮಾಡಲಿದ್ದಾರೆ. ಮತ್ತೊಂದು ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಡೈರೆಕ್ಟರ್ ಆದರೂ ಆಗಬಹುದು.

English summary
According to the latest Grapevine, Kannada Actor, Director Rakshit Shetty to get Rs.12 crore remuneration for 3 movies produced by Pushkar Mallikarjunaiah.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X