»   » 'ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ-ರಶ್ಮಿಕಾ ಮದುವೆ ಅಂತೆ!

'ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ-ರಶ್ಮಿಕಾ ಮದುವೆ ಅಂತೆ!

Posted By: Naveen
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾ ನೋಡಿದವರಿಗೆ ತುಂಬಾ ಇಷ್ಟ ಆದ ಅಂಶಗಳಲ್ಲಿ 'ರಕ್ಷಿತ್ ಶೆಟ್ಟಿ' ಮತ್ತು 'ರಶ್ಮಿಕಾ ಮಂದಣ್ಣ' ಜೋಡಿ ಕೂಡ ಒಂದು. ಸಿನಿಮಾ ನೋಡಿದ ಅನೇಕರು ಇಬ್ಬರ ಪೇರ್ ಎಷ್ಟು ಚೆನ್ನಾಗಿದೆ, ಇವರು ನಿಜ ಜೀವನದಲ್ಲು ಜೋಡಿಯಾದರೆ ಸೂಪರ್ ಅಲ್ವಾ ಎಂದುಕೊಂಡಿದ್ದರು. ಆದ್ರೀಗ, ಆ ಮಾತು ನಿಜ ಆಗುವ ಟೈಂ ಬಂದಿದೆ.

ಹೌದು, 'ರಕ್ಷಿತ್ ಶೆಟ್ಟಿ' ಮತ್ತು 'ರಶ್ಮಿಕಾ ಮಂದಣ್ಣ' ಈಗ ಮದುವೆಯಾಗುತ್ತಿದ್ದಾರಂತೆ. ಈ ರೀತಿಯ ಅಂತೆ ಕಂತೆ ಸುದ್ದಿಯೊಂದು ಗಾಂಧಿನಗರದ ಸುತ್ತಾ ಹರಿದಾಡುತ್ತಿದೆ. ಆದ್ರೆ, ಇದು ಬರಿ ಅಂತೆ-ಕಂತೆಯಲ್ಲ, 'ನಿಜ' ಎನ್ನುತ್ತಿವೆ ರಕ್ಷಿತ್ ಶೆಟ್ಟಿ ಮೂಲಗಳು.

ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ, 'ರಕ್ಷಿತ್' ಮತ್ತು 'ರಶ್ಮಿಕಾ' ಪ್ರೀತಿಯನ್ನ ಇಬ್ಬರ ಮನೆಯವರು ಸಹ ಒಪ್ಪಿದ್ದಾರಂತೆ. ಹಾಗಿದ್ರೆ, ಇವರಿಬ್ಬರು ಮದುವೆ ಯಾವಾಗ..? ಇಬ್ಬರ ಲವ್ ಸ್ಟೋರಿ ಹೇಗೆ ಶುರುವಾಯಿತು..? ಮುಂದಿದೆ ಓದಿ...

ಶೂಟಿಂಗ್ ನಲ್ಲಿ ಪರಿಚಯ

ಉಡುಪಿ ಮೂಲದ ರಕ್ಷಿತ್ ಶೆಟ್ಟಿ, ಕೊಡಗು ಮೂಲದ ರಶ್ಮಿಕಾ ಮಂದಣ್ಣ ಇಬ್ಬರಿಗೂ ಮೊದ ಮೊದಲು ಪರಿಚಯ ಇರಲಿಲ್ಲ. ಇಬ್ಬರು ಭೇಟಿಯಾಗಿದ್ದು 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ. ಈ ಸಿನಿಮಾದ ಆಡಿಷನ್ ನಲ್ಲಿ ರಶ್ಮಿಕಾ ನಾಯಕಿಯಾಗಿ ಸೆಲೆಕ್ಟ್ ಆಗಿದ್ದ ಬಳಿಕ ರಕ್ಷಿತ್ ಗೆ ಪರಿಚಯ ಆಗಿದ್ದು.

ಹೇಳದೆ ಕೇಳದೆ 'ಪ್ರೀತಿ ಬಂತು'

'ಕಿರಿಕ್ ಪಾರ್ಟಿ' ಸಿನಿಮಾದ ಚಿತ್ರೀಕರಣ ಶುರುವಾದಾಗ ಕಲಾವಿದರಾಗಿದ್ದ ಇಬ್ಬರು ಸ್ನೇಹಿತರಾದರಂತೆ. ಈ ಸ್ನೇಹ ಆತ್ಮೀಯ ಮತ್ತಷ್ಟು ಹೆಚ್ಚಾಗಿ ಪ್ರೀತಿಯಾಗಿದೆ.

'ಕರ್ಣ - ಸಾನ್ವಿ' ಪ್ರೇಮ್ ಕಹಾನಿ

'ಕಿರಿಕ್ ಪಾರ್ಟಿ' ಸಿನಿಮಾ ಮುಗಿದ ಮೇಲೆ ಸಹ ರಕ್ಷಿತ್, ರಶ್ಮಿಕಾ ಇಬ್ಬರು ಜಾಸ್ತಿ ಒಟ್ಟಿಗೆ ಸುತ್ತಾಡುತ್ತಿದ್ದರಂತೆ. ಆಗ ತಮ್ಮ 'ಕಿರಿಕ್' ಟೀಂ ಸ್ನೇಹಿತರು ಒಮ್ಮೆ 'ಏನ್ ಸಮಾಚಾರ ಹಾ'... ಅಂತ ಕೇಳಿದಕ್ಕೆ, ಅವರ ಮುಂದೆ ಇಬ್ಬರು ಈ ವಿಷಯವನ್ನ ನಗುತ್ತಾ ಒಪ್ಪಿಕೊಂಡರಂತೆ.

ಇಬ್ಬರ ಮನೆಯಲ್ಲು 'ಓಕೆ' ಅಂದಿದ್ದಾರಂತೆ

'ರಕ್ಷಿತ್ ಶೆಟ್ಟಿ' ಮತ್ತು 'ರಶ್ಮಿಕಾ ಮಂದಣ್ಣ' ಪ್ರೀತಿಗೆ ಇಬ್ಬರ ಮನೆಯಲ್ಲಿಯೂ ಈಗಾಗಲೇ ಒಪ್ಪಿಗೆ ಸಿಕ್ಕಿದೆಯಂತೆ. ಅಲ್ಲದೆ ರಕ್ಷಿತ್ ಗೆ ಮದುವೆ ಮಾಡಬೇಕು ಅಂತ ಒಳ್ಳೆ ಹುಡುಗಿಯ ಹುಡುಕಾಟದಲಿದ್ದ ಅವರ ಕುಟುಂಬಕ್ಕೆ ಸಹ ಈ ವಿಷಯ ಕೇಳಿ ಖುಷಿಯಾಗಿದೆಯಂತೆ.

ಮೇ ತಿಂಗಳಲ್ಲಿ 'ಎಂಗೆಜ್ ಮೆಂಟ್'

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಕುಟುಂಬಗಳು ಮೇ ತಿಂಗಳಲ್ಲಿ ಇಬ್ಬರ ಎಂಗೆಜ್ ಮೆಂಟ್ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾರಂತೆ.

ಮದುವೆ ಸದ್ಯಕ್ಕಿಲ್ಲ!

'ಕಿರಿಕ್ ಪಾರ್ಟಿ' ಸಿನಿಮಾದ ಬಳಿಕ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ತೊಡಗಿಕೊಂಡಿದ್ರೆ, ಇತ್ತ ರಶ್ಮಿಕಾ ಪುನೀತ್ ರಾಜ್ ಕುಮಾರ್ ಜೊತೆ ಅಂಜನಿಪುತ್ರ ಹಾಗೂ ಅತ್ತ ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ, ಮದುವೆ ಇನ್ನು ತಡವಾಗುವುದಂತೆ .

ಹಿಂದೆಯೂ ಸುದ್ದಿಯಾಗಿತು

ಈ ಹಿಂದೆ ಯಾರೋ ಒಬ್ಬ ಅಭಿಮಾನಿ ಫೇಸ್ ಬುಕ್ ನಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರು ಮದುವೆಯಾಗ್ತಿರಾ ಅಂತ ಕೇಳಿದ್ದರು. ಆಗ ರಕ್ಷಿತ್ ನಗುತಾ ಹಾಗೇನಿಲ್ಲ..! ಅಂತ ಉತ್ತರ ನೀಡಿ ಸುಮ್ಮನಿದ್ರು.

ಮಿಸ್ ಯೂ 'ಸಾನ್ವಿ'

'ಕಿರಿಕ್ ಪಾರ್ಟಿ' ಒಂದೇ ಒಂದು ಸಿನಿಮಾದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿಕೊಂಡಿದ್ದರು ಸಾನ್ವಿ. ಅಷ್ಟು ಬೇಗ ಮದುವೆಯಾಗುವ ಸುದ್ದಿ ಕೇಳಿ ಹುಡುಗರಿಗೆ ಸಿಕ್ಕಾಪಟ್ಟೆ ಬೇಜಾರಾಗಿದೆ.

English summary
kannada actor Rakshith Shetty Will Marry his co star Rashmika Mandanna?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada