For Quick Alerts
  ALLOW NOTIFICATIONS  
  For Daily Alerts

  RRR Box Office Collection : ಮೊದಲ ದಿನ 200 ಕೋಟಿ ಪಕ್ಕಾ, ವಿಶ್ಲೇಷಕರು ಹೇಳುತ್ತಿರೋದೇನು?

  |

  ಎಸ್‌ಎಸ್ ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ 'ಆರ್‌ಆರ್‌ಆರ್' ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಚಿತ್ರದ ರಿಲೀಸ್‌ಗೆ ಇನ್ನು ಕೆಲವು ದಿನಗಳು ಮಾತ್ರವೇ ಬಾಕಿ ಇದೆ. ಮಾರ್ಚ್ 25ಕ್ಕೆ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡಲಿದೆ.

  ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ 'RRR' ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ರಿಲೀಸ್‌ಗೂ ವಾರದ ಮುನ್ನವೇ ಚಿತ್ರದ ಮುಂಗಡ ಬುಕ್ಕಿಂಗ್ ಶುರುವಾಗಿದೆ. ಇಂತಹ ಚಿತ್ರಗಳಿಗೆ ಚಿತ್ರಮಂದಿರಗಳ ಕೊರತೆ ಆಗುವುದೇ ಇಲ್ಲ. ಹಾಗಾಗಿ ಸಿನಿಮಾ ರಿಲೀಸ್‌ಗೂ ಮೊದಲೇ ಮುಂಗಡ ಬುಕ್ಕಿಂಗ್ ಆರಂಭ ಆಗುತ್ತದೆ. ಜೊತೆಗೆ ಸಿನಿಮಾದ ಕಲೆಕ್ಷನ್ ಬಗ್ಗೆಯೂ ಲೆಕ್ಕಾಚಾರಗಳು ಹುಟ್ಟಿಕೊಳ್ಳುತ್ತವೆ.

  'RRR'; ರಾಜಮೌಳಿ ಮತ್ತು ಕಲಾವಿದರ ಸಂಭಾವನೆ ಎಷ್ಟು ಗೊತ್ತಾ?'RRR'; ರಾಜಮೌಳಿ ಮತ್ತು ಕಲಾವಿದರ ಸಂಭಾವನೆ ಎಷ್ಟು ಗೊತ್ತಾ?

  ಈಗ 'ಆರ್‌ಆರ್‌ಆರ್' ಚಿತ್ರ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ ಚಿತ್ರದ ರಿಲೀಸ್ ಬಗ್ಗೆ ಇರುವ ಕುತೂಹಲಕ್ಕಿಂತಲೂ ಸಿನಿಮಾದ ಕಲೆಕ್ಷನ್ ಮೇಲೆ ಇರುವ ಕುತೂಹಲ ಹೆಚ್ಚಾಗಿದೆ. 'ಆರ್‌ಆರ್‌ಆರ್'ದ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಎನ್ನುವ ಲೆಕ್ಕಾಚಾರಗಳು ಹುಟ್ಟಿಕೊಂಡಿವೆ.

  ಮೊದಲ ದಿನವೇ 200 ಕೋಟಿ ಬಾಚಲಿದ್ಯಾ 'RRR'!

  ಮೊದಲ ದಿನವೇ 200 ಕೋಟಿ ಬಾಚಲಿದ್ಯಾ 'RRR'!

  'RRR' ಹೆಚ್ಚು ನಿರೀಕ್ಷೆ ಇರುವ ಸಿನಿಮಾ. ಈ ಪ್ಯಾನ್ ಇಂಡಿಯಾ ಸಿನಿಮಾ ಒಂದೇ ಬಾರಿಗೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಾಗಾಗಿ ಚಿತ್ರದ ಕಲೆಕ್ಷನ್ ಮೇಲೆ ಹೆಚ್ಚಿನ ನೀರೀಕ್ಷೆ ಇದೆ. ಅದಾಗಲೇ ಟ್ರೇಡ್ ವಿಶ್ಲೇಶಕರು 'RRR' ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟಾಗ ಬಹುದು ಎನ್ನುವ ಲೆಕ್ಕಾಚಾರ ಹಾಕಿದ್ದಾರೆ. ತಜ್ಞರ ಪ್ರಕಾರ ಮೊದಲ ದಿನವೇ 'RRR' ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ 200 ಕೋಟಿ ರೂ ಕಲೆಕ್ಷನ್ ಮಾಡಲಿದೆ ಎನ್ನಲಾಗಿದೆ.

  RRR ಚಲನಚಿತ್ರ ಮುಂಗಡ ಬುಕಿಂಗ್ ಆರಂಭ: ದುಬಾರಿ ಬೆಲೆ!RRR ಚಲನಚಿತ್ರ ಮುಂಗಡ ಬುಕಿಂಗ್ ಆರಂಭ: ದುಬಾರಿ ಬೆಲೆ!

  ತೆಲಂಗಾಣ, ಆಂಧ್ರದಲ್ಲಿ 50 ಕೋಟಿ ಪಕ್ಕಾ!

  ತೆಲಂಗಾಣ, ಆಂಧ್ರದಲ್ಲಿ 50 ಕೋಟಿ ಪಕ್ಕಾ!

  ಇನ್ನು ಈ ಚಿತ್ರದಲ್ಲಿ ತೆಲುಗಿನ ಇಬ್ಬರು ಬಿಗ್‌ ಸ್ಟಾರ್‌ ನಟರು ಇರುವ ಕಾರಣಕ್ಕೆ ತೆಲುಗು ರಾಜ್ಯದಲ್ಲಿ 'RRR' ಅಬ್ಬರ ಜೋರಾಗಿಯೇ ಇರಲಿದೆ. ಹಾಗಾಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಚಿತ್ರದ ಕಲೆಕ್ಷನ್ ಹೆಚ್ಚಾಗಿಯೇ ಇರಲಿದೆ ಎನ್ನಲಾಗಿದೆ. ಇನ್ನು ತಜ್ಞರ ಪ್ರಕಾರ ಮೊದಲ ದಿನ ಈ ಚಿತ್ರ ಆಂಧ್ರ ಮತ್ತು ತೆಲಂಗಾಣ ಸೇರಿ ಒಟ್ಟು 50 ಕೋಟಿ ಹಣ ಕಲೆ ಹಾಕಲಿದೆ ಎನ್ನಲಾಗಿದೆ. ಇಲ್ಲೇ 50 ಕೋಟಿ ಆದರೆ, ವಿಶ್ವಾದ್ಯಂತ ಒಟ್ಟಾರೆ ಲೆಕ್ಕಾ ತೆಗೆದುಕೊಂಡರೆ ಸಿನಿಮಾ ಮೊದಲ ದಿನ 200 ಕೋಟಿ ಕಲೆ ಹಾಕೋದು ಪಕ್ಕಾ ಎನ್ನುವ ಸುದ್ದಿ ಹಬ್ಬಿದೆ.

  400 ಕೋಟಿ ಬಜೆಟ್‌ ಸಿನಿಮಾ 'RRR'!

  400 ಕೋಟಿ ಬಜೆಟ್‌ ಸಿನಿಮಾ 'RRR'!

  'RRR' ಚಿತ್ರದ ಒಟ್ಟು ಬಜೆಟ್ 400 ಕೋಟಿ ಎಂದು ಹೇಳಲಾಗುತ್ತಿದೆ. ದೊಡ್ಡ ಬಜೆಟ್‌ನಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. 1920ರಲ್ಲಿ ಆಸುಪಾಸು ನಡೆಯುವ ಸ್ವಾತಂತ್ರ್ಯ ಹೋರಾಟದ ಕಥೆಯಾಗಿರುವುದರಿಂದ ಹೆಚ್ಚಿನ ಹಣ ಖರ್ಚು ಮಾಡಿದೆ ಚಿತ್ರ ತಂಡ. ಇನ್ನು ಮೊದಲ ದಿನವೇ ಸಿನಿಮಾ 200 ಕೋಟಿ ಹಣಗಳಿದರೆ ಮೊದಲ ದಿನವೇ ಚಿತ್ರದ ಬಜೆಟ್‌ನಲ್ಲಿ ಅರ್ಧ ಹಣ ಬಂದ ಹಾಗೆ. ಇನ್ನು ಮೊದಲ ವಾರಾಂತ್ಯ ಮುಗಿದ ಬಳಿಕ ಚಿತ್ರತಂಡ ಲಾಭದಲ್ಲಿ ಇರಲಿದೆ ಎನ್ನುವ ಲೆಕ್ಕಾಚಾರಗಳು ಹುಟ್ಟಿ ಕೊಂಡಿವೆ.

  ಚಿಕ್ಕಬಳ್ಳಾಪುರ: RRR ಕಾರ್ಯಕ್ರಮದಲ್ಲಿ ರಾಜಕೀಯ ಜಗಳ, ಸ್ವಲ್ಪದರಲ್ಲಿ ತಪ್ಪಿತು ಅನಾಹುತ!ಚಿಕ್ಕಬಳ್ಳಾಪುರ: RRR ಕಾರ್ಯಕ್ರಮದಲ್ಲಿ ರಾಜಕೀಯ ಜಗಳ, ಸ್ವಲ್ಪದರಲ್ಲಿ ತಪ್ಪಿತು ಅನಾಹುತ!

  ಮಾರ್ಚ್ 25ಕ್ಕೆ 'RRR' ಅಬ್ಬರ ಶುರು!

  ಮಾರ್ಚ್ 25ಕ್ಕೆ 'RRR' ಅಬ್ಬರ ಶುರು!

  'ಆರ್‌ಆರ್‌ಆರ್' ಚಿತ್ರಕ್ಕೆ ಹಲವು ಪ್ಲಸ್ ಪಾಯಿಂಟ್‌ಗಳಿವೆ. ರಾಜಮೌಳಿ, ರಾಮ್ ಚರಣ್ ತೇಜ, ಜೂನಿಯರ್ ಎನ್‌ಟಿಆರ್, ಆಲಿಯಾ ಭಟ್, ಅಜಯ್ ದೇವಗನ್, ಶ್ರೇಯಾ ಶರಣ್, ಸಿನಿಮಾದ ಕಥೆ, ಸಂಗೀತ, ಮೇಕಿಂಗ್ ಎಲ್ಲವೂ ಕೂಡ ಚಿತ್ರದ ಪ್ಲಸ್ ಪಾಯಿಂಟ್ ಆಗಿವೆ. ಆದರೆ ರಿಲೀಸ್‌ಗೂ ಮೊದಲು ಚಿತ್ರತಂಡ ಹುಟ್ಟು ಹಾಕಿರುವ ನಿರೀಕ್ಷೆಯನ್ನು ಹಾಗೆ ಉಳಿಸಿಕೊಳ್ಳುತ್ತಾ ನೋಡ್ಬೇಕು. ಸಿನಿಮಾ ಒಂದು ಕಥೆಯಾಗಿ ಜನರ ಮನಸ್ಸು ಮುಟ್ಟುತ್ತಾ ಅನ್ನೋದು ಮಾರ್ಚ್ 25 ಚಿತ್ರ ರಿಲೀಸ್ ಬಳಿಕ ಗೊತ್ತಾಗಲಿದೆ.

  English summary
  Ram Charan, Jr NTR, Alia Bhatt Starrer RRR movie Day 1 Box Office Collection Prediction, Detait I Here,
  Monday, March 21, 2022, 16:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X