»   » ಸಾನಿಯಾ-ಶೋಯೆಬ್ ಸಂಸಾರದಲ್ಲಿ ಹುಳಿಹಿಂಡಿದ ಚಿರು ಪುತ್ರ?

ಸಾನಿಯಾ-ಶೋಯೆಬ್ ಸಂಸಾರದಲ್ಲಿ ಹುಳಿಹಿಂಡಿದ ಚಿರು ಪುತ್ರ?

Posted By:
Subscribe to Filmibeat Kannada

ಇಡೀ ಭಾರತ ಮತ್ತು ಪಾಕಿಸ್ತಾನವನ್ನೇ ಚಿಕಿತಗೊಳಿಸಿದ ಪ್ರೇಮ್ ಕಹಾನಿಯೆಂದರೆ ಅದು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟರ್ ಶೋಯೆಬ್ ಮಲಿಕ್ ರದ್ದು. ಗಡಿಯಾಚೆ ದಾಟಿದ್ದ ಇಬ್ಬರ ಲವ್ ಸ್ಟೋರಿಗೆ ಅಧಿಕೃತ ಮುದ್ರೆ ಬಿದ್ದು ವರ್ಷಗಳೇ ಉರುಳಿವೆ.

ಹೀಗಿರುವಾಗ, ಈ ಜೋಡಿ ಮಧ್ಯೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ಅಸಮಾಧಾನ ಭುಗಿಲ್ಲೆದ್ದಿದೆ ಅಂತ ಟಾಲಿವುಡ್ ಗಲ್ಲಿಗಲ್ಲಿಯಲ್ಲಿ ತಲೆಗೊಂದು ಮಾತು ಕೇಳಿಬರುತ್ತಿದೆ. ಅದಕ್ಕೆ ತಕ್ಕಂತೆ, ಶೋಯೆಬ್ ಪಾಕ್ ನಲ್ಲಿ ಗುಂಡು-ತುಂಡು ಹಾಕ್ತಿದ್ರೆ, ಸಾನಿಯಾ ಹೈದರಾಬಾದ್ ನಲ್ಲಿ ಪಾರ್ಟಿ ಮಾಡುವುದರಲ್ಲೇ ಬಿಜಿ. [ಮಲಿಕ್ ಜೊತೆ ಸಾನಿಯಾ ಮಿರ್ಜಾ ಮದುವೆ ರದ್ದು]

ಇಬ್ಬರ ಈ ಅಂತರಕ್ಕೆ ಕಾರಣ ಯಾರು ಅಂದ್ರೆ, ಗಾಸಿಪ್ ಪಂಡಿತರು ಪತ್ತೆ ಹಚ್ಚಿರುವ ಪ್ರಕಾರ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ! ಸಾನಿಯಾ ಇದ್ದ ಕಡೆ, ಚರ್ರಿ ತಪ್ಪದೇ ಹಾಜರಾಗುತ್ತಿರುವುದೇ ಈ ಗಾಸಿಪ್ಪು, ಅದರ ಮೇಲೊಂದು ಸಿಪ್ ಗೆ ಕಾರಣ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Ram Charan Teja

ಕೆಲ ತಿಂಗಳುಗಳ ಹಿಂದೆಯಷ್ಟೇ ಟೆನ್ನಿಸ್ ರಾಕೆಟ್ ಹಿಡಿದು ಸಾನಿಯಾ ಜೊತೆ ಪಂದ್ಯವಾಡಿದ್ದ ರಾಮ್ ಚರಣ್, ಇದೀಗ ನಿಂತರೂ-ಕೂತರೂ ಸಾನಿಯಾ ಕನವರಿಕೆಯಲ್ಲೇ ಇದ್ದಾರಂತೆ. ಪ್ರತಿದಿನ ಪಾರ್ಟಿ ಮಾಡುವುದೇ ಇಬ್ಬರ ಚಾಳಿಯಾಗಿಬಿಟ್ಟಿದೆಯಂತೆ. ಇದೆಲ್ಲಾ ಬರೀ ಅಂತೆ-ಕಂತೆ ಅಂದುಕೊಂಡರೂ ಫೋಟೋಗಳು ಮಾತ್ರ ಸುಳ್ಳು ಹೇಳುತ್ತಿಲ್ಲ! [ನೂತನ ದಾಂಪತ್ಯಕ್ಕೆ ಅಡಿಯಿಟ್ಟ ನಟ ರಾಮ್ ಚರಣ್]

ಚರ್ರಿ ಪತ್ನಿ ಉಪಾಸನಾಗೆ ಆಪ್ತ ಗೆಳತಿಯಾಗಿರುವ ಸಾನಿಯಾ, ರಾಮ್ ಚರಣ್ ಗೂ ಅಷ್ಟೇ ಕ್ಲೋಸ್. ಆದ್ರೆ ಅದು ಎಕ್ಸ್ ಟ್ರಾ ಸ್ಪೆಷಲ್ ಆಗಿದೆ ಅನ್ನುವುದು ಲೇಟೆಸ್ಟ್ ಗುಸುಗುಸು. ಇದಕ್ಕೆ ಪುಷ್ಠಿ ನೀಡುವಂತೆ ರಾಮ್ ಚರಣ್ ಅಭಿನಯದ ಮುಂದಿನ ಚಿತ್ರದಲ್ಲಿ ಸಾನಿಯಾ ಅಭಿನಯಿಸುತ್ತಿದ್ದಾರೆ. [ಜೇಮ್ಸ್ ಬಾಂಡ್ ಚಿತ್ರಕ್ಕೆ ಚೆಂದುಳ್ಳಿ ಚೆಲುವೆ ಸಾನಿಯಾ]

ram charan sania mirza

ಇಷ್ಟೆಲ್ಲಾ ಆಗ್ತಿದ್ದರೂ, ಸಾನಿಯಾಗೆ ಲಗಾಮು ಹಾಕುವುದು ಬಿಟ್ಟು, ಪಾಕ್ ನಲ್ಲಿ ಶೋಯೆಬ್, ನಟಿ ಹುಮೈಮಾ ಮಲಿಕ್ ಹಿಂದೆ ಬಿದ್ದಿದ್ದಾರಂತೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಮಧ್ಯೆ ಅದೇನಾಯ್ತೋ, ಆದ್ರೆ ಅದೆಲ್ಲದಕ್ಕೂ ರಾಮ್ ಚರಣ್ ಹೊಣೆಯಾದರೆ ಮೆಗಾ ಸ್ಟಾರ್ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಕಟ್ಟಿಟ್ಟ ಬುತ್ತಿ!

English summary
According to Gossip mongers, Ram Charan Teja is suspected to be the reason behind the trouble Sania Mirza-Shoaib Malik family paradise.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada