»   » 'ಮಹಾಭಾರತ'ಕ್ಕೆ ಸೆಡ್ಡು ಹೊಡೆಯಲು 'ರಾಮಾಯಣ' ರೆಡಿ: 500 ಕೋಟಿ ಬಜೆಟ್

'ಮಹಾಭಾರತ'ಕ್ಕೆ ಸೆಡ್ಡು ಹೊಡೆಯಲು 'ರಾಮಾಯಣ' ರೆಡಿ: 500 ಕೋಟಿ ಬಜೆಟ್

Posted By:
Subscribe to Filmibeat Kannada

ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಬಾಹುಬಲಿ 2' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿದೆ. ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರ ಹೊಸ ಇತಿಹಾಸ ಬರೆದ ನಂತರವೀಗ ಭಾರತೀಯ ಸಿನಿ ಅಂಗಳದಲ್ಲಿ ಹೊಸ ಹೊಸ ಬ್ರಿಲಿಯಂಟ್ ಐಡಿಯಾಗಳು ಹುಟ್ಟಿಕೊಳ್ಳುತ್ತಿವೆ.[ಕನ್ನಡದ 'ಆಕೆ'ಗೂ ತಮಿಳಿನ 'ಮಾಯ'ಗೂ ಸಂಬಂಧ! ಸಾಕ್ಷಿ ಇಲ್ಲಿದೆ]

ಭಾರತ ಸಿನಿಮಾ ರಂಗದಲ್ಲಿ ಎಸ್.ಎಸ್.ರಾಜಮೌಳಿ ನಿರ್ದೇಶನದ ''ಬಾಹುಬಲಿ- ದಿ ಬಿಗಿನ್ನಿಂಗ್' ಮತ್ತು 'ಬಾಹುಬಲಿ- ದಿ ಕನ್ ಕ್ಲೂಶನ್' ಸಿನಿಮಾಗಳೇ ಬಹು ದೊಡ್ಡ ಬಜೆಟ್ ಸಿನಿಮಾಗಳು ಎನ್ನಲಾಗಿತ್ತು. ಆದರೆ ಇತ್ತೀಚೆಗೆ ದುಬೈ ಉದ್ಯಮಿ ಕನ್ನಡಿಗ ಬಿ.ಆರ್.ಶೆಟ್ಟಿ ರವರು 1000 ಕೋಟಿ ರೂ ಬಜೆಟ್ ನಲ್ಲಿ 'ದಿ ಮಹಾಭಾರತ' ನಿರ್ಮಿಸಲಿರುವುದು, 'ಬಾಹುಬಲಿ' ಚಿತ್ರ ಭಾರತದ ಬಹುದೊಡ್ಡ ಬಜೆಟ್ ಸಿನಿಮಾ ಎಂಬುದನ್ನು ಅಳಿಸಿದೆ. 'ಬಾಹುಬಲಿ' ಮಹಾಕಾವ್ಯ ಮೂಡಿಬತಂತೆ ಈಗ ಟಾಲಿವುಡ್ ನಲ್ಲಿ ಬಹು ದೊಡ್ಡ ಬಜೆಟ್ ನಲ್ಲಿ 'ರಾಮಾಯಣ' ಸಿನಿಮಾ ಮೂಡಿಬರಲಿದೆಯಂತೆ. ಮುಂದೆ ಓದಿ..

ಟಾಲಿವುಡ್ ನಲ್ಲಿ ಮೂಡಿಬರಲಿದೆ 'ರಾಮಾಯಣ'

ಟಾಲಿವುಡ್ ಮೂಲದ ಫಿಲ್ಮ್ ಮೇಕರ್ ಅಲ್ಲು ಅರವಿಂದ್, ಮಧು ಮಂಟೆನಾ ವರ್ಮಾ ಮತ್ತು ನಮಿತ್ ಮಲ್ಹೋತ್ರ ರವರು ಜೊತೆಗೂಡಿ ಮಹಾಕಾವ್ಯ 'ರಾಮಾಯಣ' ವನ್ನು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಹೊರಬಿದ್ದಿದೆ.

'ಬಾಹುಬಲಿ' ಗಿಂತ ಬಹುದೊಡ್ಡ ಬಜೆಟ್ ನಲ್ಲಿ 'ರಾಮಾಯಣ'

ಅಂದಹಾಗೆ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ- ದಿ ಬಿಗಿನ್ನಿಂಗ್' ಮತ್ತು 'ಬಾಹುಬಲಿ- ದಿ ಕನ್ ಕ್ಲೂಶನ್' ಸಿನಿಮಾಗಳನ್ನು ಕ್ರಮವಾಗಿ 150 ಕೋಟಿ ಮತ್ತು 250 ಕೋಟಿ ರೂ ಗಳಿಗಿಂತ ಹೆಚ್ಚಿನ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಟಾಲಿವುಡ್ ನಲ್ಲೇ ನಿರ್ಮಾಣವಾಗಲಿರುವ 'ರಾಮಾಯಣ' ಚಿತ್ರವನ್ನು 500 ಕೋಟಿ ರೂ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗುತ್ತದೆಯಂತೆ.

ಮೂರು ಭಾಷೆಗಳಲ್ಲಿ ಚಿತ್ರ

'ರಾಮಾಯಣ' ಚಿತ್ರಕ್ಕಾಗಿ ಈಗಾಗಲೇ ಒಂದು ವರ್ಷದಿಂದ ಸ್ಕ್ರಿಪ್ಟ್ ವರ್ಕ್ ನಡೆದಿದ್ದು, ಸಿನಿಮಾ ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಮೂರು ಭಾಷೆಗಳಲ್ಲಿ ಮೂಡಿಬರಲಿದೆ.

3ಡಿ ಯಲ್ಲಿ ಚಿತ್ರೀಕರಣ

ತೆಲುಗು ಚಿತ್ರ ನಿರ್ಮಾಪಕ ಮತ್ತು ವಿತರಕ ಅಲ್ಲು ಅರವಿಂದ್ ಮತ್ತು ಇತರೆ ಇಬ್ಬರು ಚಿತ್ರ ನಿರ್ಮಾಪಕರು ಜಂಟಿಯಾಗಿ ನಿರ್ಮಾಣ ಮಾಡಲಿರುವ 'ರಾಮಾಯಣ' ಮೂರು ಸೀರೀಸ್ ನಲ್ಲಿ ಮೂಡಿಬರಲಿದ್ದು, 3ಡಿ ಯಲ್ಲಿ ಚಿತ್ರೀಕರಣ ಮಾಡಲಾಗುತ್ತದೆಯಂತೆ. ಹೀಗೆಂದು ಅಂತರ್ಜಾಲದಲ್ಲಿ ಸುದ್ದಿ ಹರಿದಾಡುತ್ತಿದೆ.

English summary
According to reports, Tollywood filmmaker Allu Aravind, Namit Malhotra and Madhu Mantena will make 'Ramayana' into a movie of Rs 500 crore budget

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada