»   » ನಿನ್ನೆ ಆಟೋ ಏರಿದ್ದ ರಮ್ಯಾ ಇಂದು ಫಾರ್ಚ್ಯುನರ್ ನಲ್ಲಿ ಬಂದ್ರು!

ನಿನ್ನೆ ಆಟೋ ಏರಿದ್ದ ರಮ್ಯಾ ಇಂದು ಫಾರ್ಚ್ಯುನರ್ ನಲ್ಲಿ ಬಂದ್ರು!

By: ಹರಾ
Subscribe to Filmibeat Kannada

ವಿದೇಶದಿಂದ ವಾಪಸ್ ಆಗಿದ್ದೇ ಆಗಿದ್ದು, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತಿದಿನ ಸುದ್ದಿ ಮಾಡುತ್ತಿದ್ದಾರೆ. ಸಿನಿಮಾ ಬಿಟ್ಟು ರಾಜಕಾರಣದಲ್ಲೇ ಬಿಜಿಯಾಗಿರುವ ರಮ್ಯಾ ಮೇಡಂ ಇದೀಗ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೇನರ್.

ಲಂಡನ್ ನಿಂದ ಬಂದ ಮೇಲೆ ಬೆಂಗಳೂರಿನ ಬೀದಿ ಬೀದಿಗಳನ್ನ ಆಟೋದಲ್ಲಿ ರೌಂಡ್ ಹಾಕುತ್ತಿದ್ದ ರಮ್ಯಾ ಇವತ್ತು ಸಡನ್ ಆಗಿ ಫಾರ್ಚ್ಯುನರ್ ಕಾರ್ ನಿಂದ ಇಳಿದು ಎಲ್ಲರನ್ನ ಅಚ್ಚರಿಗೊಳಿಸಿದರು.

ramya

ಹೌದು, ಬೆಂಗಳೂರಿಗೆ ದಿಗ್ವಿಜಯ್ ಸಿಂಗ್ ಆಗಮಿಸಿದ್ದ ನಿಮಿತ್ತ ಇಂದು ಕೆಪಿಸಿಸಿ ಕಛೇರಿಗೆ ರಮ್ಯಾ ಆಗಮಿಸಿದ್ದು ಫಾರ್ಚ್ಯುನರ್ ಕಾರ್ ನಲ್ಲಿ! ನಿನ್ನೆ ತನಕ ಸಿ.ಎಂ ನಿವಾಸ, ಎಸ್.ಎಂ.ಕೃಷ್ಣ ಮನೆ ಮತ್ತು ಕೆಪಿಸಿಸಿ ಕಛೇರಿಗೆ ರಮ್ಯಾ ಆಟೋದಲ್ಲಿ ಸವಾರಿ ಮಾಡಿದ್ದರು.[ರಮ್ಯಾ ಈಗ ಇರೋದೇ ಹಿಂಗೆ..ನೋ ಎಕ್ಸ್ ಕ್ಯೂಸ್ ಪ್ಲೀಸ್.!]

ramya

ಇದನ್ನ ನೋಡಿ, ರಮ್ಯಾ ತೀರಾ ಸೀದಾ ಸಾದಾ ಆಗಿದ್ದಾರೆ. ಸಾಮಾನ್ಯ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ ಅಂತ್ಲೇ ಜನರು ಮಾತನಾಡಿಕೊಂಡಿದ್ದರು. ಇನ್ನೂ ಕೆಲವರು ಇದೆಲ್ಲಾ ಪ್ರಚಾರದ ಗಿಮಿಕ್ ಅಂತ ಮೂಗು ಮುರಿದಿದ್ದು ಬೇರೆ ವಿಚಾರ.

ramya

ಆದ್ರೀಗ ಏಕ್ದಂ ಫಾರ್ಚ್ಯುನರ್ ಕಾರ್ ನಲ್ಲಿ ರಮ್ಯಾ ಮೇಡಂನ ನೋಡಿ ಎಲ್ಲರೂ ಕಣ್ಣು ಬಾಯಿ ಬಿಟ್ಟಿದ್ದಾರೆ.

English summary
Kannada Actress, Congress Politician, Ex MP Ramya aka Divya Spandana visited KPCC Office today in Fortuner Car. To make a mention, it was the same Actress who came to KPCC Office yesterday in Auto.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada