»   » ಗೋಲ್ಡನ್ ಗರ್ಲ್ ಗಟ್ಟಿಮೇಳದ ಬಗ್ಗೆ ಗುಲ್ಲೋ ಗುಲ್ಲು

ಗೋಲ್ಡನ್ ಗರ್ಲ್ ಗಟ್ಟಿಮೇಳದ ಬಗ್ಗೆ ಗುಲ್ಲೋ ಗುಲ್ಲು

Posted By:
Subscribe to Filmibeat Kannada
ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಗೋಲ್ಡನ್ ಗರ್ಲ್ ರಮ್ಯಾ ಅವರ ಮದುವೆ ಬಗ್ಗೆ ಗುಲ್ಲೋ ಗುಲ್ಲೆದ್ದಿದೆ. ಪೋರ್ಚುಗಲ್ ಮೂಲದ ರಾಫೆಲ್‌ ಜೊತೆ ರಮ್ಯಾ ಗಟ್ಟಿಮೇಳ ಶೀಘ್ರದಲ್ಲೇ ಮೊಳಗಲಿದೆ ಎಂಬ ಮಾತುಗಳು ಕಿವಿಯಿಂದ ಕಿವಿಗೆ ಸರಿದಾಡುತ್ತಿವೆ.

ಇದೇ ವರ್ಷ (2012) ರಾಫೆಲ್‌ರನ್ನು ರಮ್ಯಾ ವರಿಸಲಿದ್ದಾರೆ ಎಂಬುದೇ ಗಾಂಧಿನಗರದಲ್ಲಿ ಹಬ್ಬಿರುವ ಸುದ್ದಿ. ಆದರೆ ಸ್ವತಃ ರಮ್ಯಾ ಈ ಗಾಳಿಸುದ್ದಿಯನ್ನು ಗಾಳಿಗೆ ತೂರಿದ್ದಾರೆ. ಈ ವರ್ಷ ನಾನು ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಮ್ಯಾ ತಮ್ಮ ವೃತ್ತಿಜೀವನದಲ್ಲಿ ಈಗ ಅತ್ಯುನ್ನತ ಸ್ಥಾನಕ್ಕೆ ಏರಿದ್ದಾರೆ. ಜೊತೆಗೆ ಸಾಲು ಸಾಲು ಚಿತ್ರಗಳು ರಮ್ಯಾ ಬೆನ್ನಿಗಿವೆ. ಮೂಲಗಳ ಪ್ರಕಾರ ಇತ್ತೀಚೆಗೆ ರಮ್ಯಾ ಸಹಿ ಹಾಕಿರುವ ಚಿತ್ರಕ್ಕೆ ರು.54 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ರಮ್ಯಾ ಮದುವೆಯಾಗಲಿದ್ದಾರೆ ಎಂಬುದು ಬಹಳ ದೂರದ ಮಾತು.

ತೆಲುಗಿನ ಕೋಡಿ ರಾಮಕೃಷ್ಣ ಆಕ್ಷನ್ ಕಟ್ ಹೇಳಲಿರುವ ಈ ಚಿತ್ರದ ನಾಯಕ ನಟ ಗುಳಿಕೆನ್ನೆ ಚೆಲುವ ದಿಗಂತ್. ಜೂನ್ 2012ರಲ್ಲಿ ಚಿತ್ರ ಸೆಟ್ಟೇರಲಿದೆ. ಈ ಹಿಂದೆ ದಿಗಂತ್ ಹಾಗೂ ರಮ್ಯಾ ಜೊತೆಯಾಗಿ 'ಮೀರಾ ಮಾಧವ ರಾಘವ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಮತ್ತೊಮ್ಮೆ ಒಂದಾಗುತ್ತಿದ್ದಾರೆ.

ಮದುವೆ ಆಗುವುದಿದ್ದರೆ ಅಧಿಕೃತ ದಿನಾಂಕವನ್ನು ತಾನೇ ಪ್ರಕಟಿಸುತ್ತೇನೆ. ಇಲ್ಲಸಲ್ಲದ ಸುದ್ದಿಗಳನ್ನು ಕೇಳಿ ಹಾಳಗಬೇಡಿ ಎಂಬುದು ಅವರ ಮಾತುಗಳ ಸಾರಾಂಶ. ಈ ಹಿಂದೊಮ್ಮೆ ರಮ್ಯಾ ಹಾಗೂ ರಾಫೆಲ್ ಗೆಳೆತನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಇತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಮ್ಯಾ, ನನ್ನ ಮತ್ತು ರಾಫೆಲ್ ನಡುವಿನ ಗೆಳೆತನ ಇನ್ನೂ ಗಟ್ಟಿಯಾಗುತ್ತಿದೆ ಎಂದು ತಿಳಿಸಿದ್ದರು. ರಾಫೆಲ್ ಮತ್ತು ನನ್ನ ನಡುವೆ ಎಲ್ಲವೂ ಚೆನ್ನಾಗಿದೆ. ಶೀಘ್ರದಲ್ಲಿ ರಾಫೆಲ್ ಭಾರತದಲ್ಲೂ ತನ್ನ ಬಿಜಿನೆಸ್ ಶಾಖೆಗಳನ್ನು ತೆಗೆಯಲು ಮುಂದಾಗಿದ್ದಾರೆ. ಅವರಿಗೆ ನಾನೂ ನೆರವಾಗಲಿದ್ದೇನೆ.

ಸದ್ಯಕ್ಕೆ ತಮ್ಮ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳಿದ್ದು ಅವು ಮುಗಿಸಿ ಬಳಿಕವಷ್ಟೆ ಮದುವೆಯಾಗುವುದಾಗಿ ರಮ್ಯಾ ತಿಳಿಸಿದ್ದಾರೆ. ಈ ಹಿಂದೆ ತನ್ನ ಬಾಯ್‌ಫ್ರೆಂಡ್ ಜೊತೆ ಕೂತು 'ಸಂಜು ವೆಡ್ಸ್ ಗೀತಾ' ಚಿತ್ರವನ್ನು ಬೆಂಗಳೂರು ಸಾಗರ್ ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್)

English summary
Golden Girl Ramya denies about her marriage rumours. Who was speculated to get married this year with her boyfriend Raphael denies the back fence talk about her marriage.
Please Wait while comments are loading...